ಕಂಪ್ಲಿಯಲ್ಲಿ ಯೋಗಿನಾರೇಯಣ ಯತೀಂದ್ರರ ಜಯಂತ್ಯುತ್ಸವ

ಕಂಪ್ಲಿ ಮಾ 30 :ಯೋಗಿ ನಾರೇಯಣ ಯತೀಂದ್ರರ ಆದರ್ಶಗಳು ತತ್ವ ಆದರ್ಶಗಳು ಸರ್ವಕಾಲಕ್ಕೆ ಅನುಕರಣೀಯವಾಗಿವೆ ಎಂದು ಹೊಸಪೇಟೆ ಬಲಿಜ ಸಂಘದ ಕಾರ್ಯದರ್ಶಿ ಮಧುಸೂಧನ ಕಟ್ಟಿಮನಿ ಹೇಳಿದರು.
ಪಟ್ಟಣದ ಮಾರುತಿನಗರದ ಯೋಗಿ ನಾರೇಯಣ ಯತೀಂದ್ರರ ಬಲಿಜ ಭವನದಲ್ಲಿ ಭಾನುವಾರ ಸಂಜೆ ಜರುಗಿದ ಯೋಗಿನಾರೇಯಣ ಯತೀಂದ್ರರ ಜಯಂತ್ಯುತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಬಳಿಕ‌ ಮಾತನಾಡಿದರು.
ನಾರೇಯಣ ಯತೀಂದ್ರರು ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ವ್ಯಕ್ತಿಯಾಗಿದ್ದರು‌. ತಾತನವರ ಜೀವಜಂತುಗಳಿಗಾಗಿ ಬಾವಿಗಳನ್ನು ತೋಡಿಸಿ, ಸಸಿಗಳನ್ನು ನೆಟ್ಟು ವೃಕ್ಷಗಳನ್ನಾಗಿ ಬೆಳೆಸಿ, ಮಹಿಳೆಯರ ಸರ್ವಾಂಗೀಣ ಅಔಭಿವೃದ್ಧಿಗಾಗಿ ಶ್ರಮಿಸಿದರು ಎಂದರು.
ಬಳಿಕ ಕಂಪ್ಲಿ ಬಲಿಜ ಸಮಾಜದ ಕಾರ್ಯದರ್ಶಿ ನಾರಾಯಣ ಇಂಗಳಗಿ ಅಧ್ಯಕ್ಷತೆವಹಿಸಿ ಮಾತನಾಡಿ, ನಾರೇಯಣ ಯತೀಂದ್ರರ ಕಾಲಜ್ಞಾನವು ಮುಂದಿನ ದಿನಮಾನಗಳಲ್ಲಿ ಸಮಾಜದ ಸ್ಥಿತಿಗತಿ, ಜನಜೀವನವನ್ನು ತಿಳಿಸುತ್ತದೆ. ಕಾಲಜ್ಞಾನ ಕೇವಲ ಪ್ರವಚನದ ಸರಕನ್ನಾಗಿ ಮಾಡಿಕೊಳ್ಳದೆ ಕಾಲಜ್ಞಾನದ ಆಶಯಗಳನ್ನು ಅರಿತುಕೊಳ್ಳುವಲ್ಲಿ ಜಾಗೃತಿ ತೋರಬೇಕು ಎಂದು ಹೇಳಿದರು.
ಯತೀಂದ್ರರ ಪ್ರತಿಮೆಯ ಅಡ್ಡಪಲ್ಲಕ್ಕಿ ಮೆರವಣಿಗೆ ಜರುಗಿತು. ಕಂಪ್ಲಿಯ ವಾಸವಿ ಮಹಿಳಾ ಸಂಘದ ಸದಸ್ಯೆಯರು ವಿಷ್ಣು ಸಹಸ್ರನಾಮ ಪಠಿಸಿದರು. ತಾತನ ಪ್ರತಿಮೆಗೆ ಅಭಿಷೇಕ, ಪಲ್ಲಕ್ಕಿ ಸೇವೆ ಸೇರಿ ವಿವಿಧ ಕಾರ್ಯಕ್ರಮಗಳು ನೆರವೇರಿದವು.
ಕಾರ್ಯಕ್ರಮದಲ್ಲಿ ಬಲಿಜ ಸಮಾಜದ ಅಧ್ಯಕ್ಷ ಕವಿತಾಳ್ ಬಸವರಾಜ್, ಮಹಿಳಾ ಬಲಿಜ ಸಂಘದ ಅಧ್ಯಕ್ಷೆ ಶಾರದಾ ಲೋಕೇಶ್, ಪ್ರಮುಖರಾದ ಸಾವಿತ್ರಿ ಅನಿಲ್‍ಕುಮಾರ್, ಕೆ.ಶ್ರೀನಿವಾಸಪ್ಪ, ಬಿ.ಗೋಪಾಲಪ್ಪ, ಕೆ.ಚಿದಾಂಬರಪ್ಪ, ಆರ್.ತಿರುಮಲದೇವರಾಯ, ಕೆ.ಶಂಕರ್, ಕೆ.ಲಕ್ಷ್ಮಿನಾರಾಯಣ, ಅನಿಲ್‍ಕುಮಾರ್, ಪಿ.ಶ್ರೀನಿವಾಸುಲು, ಮಲ್ಲಿಕಾರ್ಜುನ, ಪ್ರಕಾಶ್, ಕೆ.ರಾಘವೇಂದ್ರ, ಮಹಾಬಲಿ, ಶ್ರೀಧರರಾವ್, ಶೇಷಗಿರಿ, ಕೃಷ್ಣ, ರೂಪಕಲಾ, ಲಕ್ಷ್ಮಮ್ಮ, ಭವ್ಯಾ, ಸುನಂದಮ್ಮ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.