ಕಂಪ್ಲಿಯಲ್ಲಿ ಮಂಗಳ ಮುಖಿ ರಾಮಕ್ಕನ ಹವಾ


ಎನ್.ವೀರಭದ್ರಗೌಡ
ಬಳ್ಳಾರಿ:ಏ,24- ಜಿಲ್ಲೆಯ ಕಂಪ್ಲಿ ಕ್ಷೇತ್ರದಲ್ಲಿ ಮಂಗಳ ಮುಖಿ ಸ್ಪರ್ಧೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ತಲೆ ನೋವಾಗುವ ಸಾಧ್ಯತೆ ಇದೆ. ಕಾರಣ ಇವರು ಹಳ್ಳಿ ಹಳ್ಳಿಗಳಲ್ಲಿ ನಡೆಸಿರುವ  ಪ್ರಚಾರಕ್ಕೆ ಜನರಿಂದ ದೊರೆಯುತ್ತಿರುವ ಪ್ರತಿ ಸ್ಪಂದನೆ‌ ಇವರು ಪಡೆಯುವ ಮತ  ಶಾಸಕ ಗಣೇಶ್ ಇಲ್ಲ ಮಾಜಿ ಶಾಸಕ ಸುರೇಶ್ ಬಾಬು ಇವರಲ್ಲಿ ಯಾರ ಸೋಲಿಗೆ ಕಾರಣವಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ಸಮಾಜ ಸುಧಾರಣೆ ಮಾಡ್ತೇವೆ. ಜನರಿಗೆ ಮೂಲಭೂತ ಸೌಲಭ್ಯಗಳನ್ನು ನೀಡ್ತೇವೆ ಎನ್ನುವ ಆಶ್ವಾಸನೆಯೊಂದಿಗೆ ಚುನಾವಣೆ ಕಣಕ್ಕೆ ಇಳಿಯೊದು ಸಹಜ. ಇದರೊಂದಿಗೆ ಈ  ಮಂಗಳ ಮುಖಿ.   ಮಂಗಳ ಮುಖಿಯರಿಗೆ ನ್ಯಾಯಯುತವಾದ ಸೌಲಭ್ಯಗಳನ್ನು  ಸರಗಕಾರದಿಂದ ಕೊಡಿಸಲೆಂದೇ  ಚುನಾವಣೆ ಅಖಾಡಕ್ಕೆ ಇಳಿದಿದ್ದಾರಂತೆ.
ದೇಶ ಪ್ರೇಮ ಪಾರ್ಟಿಯ ಅಭ್ಯರ್ಥಿಯಾಗಿ ಮಂಗಳಮುಖಿ ಟಿ.ರಾಮಕ್ಕ ಕಣಕ್ಕಿಳಿದಿದ್ದಾರೆ. ಜಿಲ್ಲೆಯಲ್ಲಿ ಸ್ಪರ್ಧಾಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಇವರೊಬ್ಬರೇ ಮಂಗಳ ಮುಖಿಯಾಗಿದ್ದಾರೆ.
ಸಮಾಜದಲ್ಲಿ ಮಂಗಳಮುಖಿ ಯರಿಗೆ ಸೂಕ್ತ ಸಮಾನತೆ ಸಿಗುತ್ತಿಲ್ಲ. ಸಮಾಜದಲ್ಲಿ ಗೌರವ ನೀಡುತ್ತಿಲ್ಲ. ಇದರಿಂದಾಗಿ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುವಂತಹ ದುಸ್ಥಿತಿಯಲ್ಲಿದ್ದಾರೆ. ಹೀಗಾಗಿ ಶಾಸಕಿಯಾಗುವ ಮೂಲಕ   ಸರ್ವರಿಗೂ ಸಮಾನತೆಯನ್ನು ನೀಡಿ ಮಂಗಳ ಮುಖಿಯರು ಸೇರಿದಂತೆ  ಬಡವರು, ನಿರ್ಗತಿಕರು, ಹಿಂದುಳಿ ದವರ ಏಳಿಗೆಗೆ ಶ್ರಮಿಸುತ್ತೇನೆ.
ಎನ್ನುತ್ತಿದ್ದಾರೆ.
ಮತದಾರರ ಮುಂದೆ ಕಣ್ಣೀರಿಡುತ್ತ ತಮ್ಮ ಮಂಗಳಮುಖಿ ಸಮುದಾಯದ ಪರ ವಿಧಾನ ಸಭೆಯಲ್ಲಿ ಧ್ವನಿ ಎತ್ತಲು ನನಗೆ ಮತನೀಡಿ‌.
ಎನ್ನುವುದರ ಜೊತೆಗೆ ಹಣಗಳಿಸೋ ಯೋಚನೆ ನನಗೆ ಇಲ್ಲ.  ಸಮಾಜವೇ ನನ್ನ ಮನೆ ಎನ್ನುತ್ತಿದ್ದಾರೆ‌.
ಒಟ್ಟಾರೆ ಇವರ ಮನವಿಗೆ ಸಧ್ಯ ಮತದಾರ ಸ್ಪಂದಿಸುತ್ತಿದ್ದರು. ಅದು ಮತವಾಗಿ ಎಷ್ಟರಮಟ್ಟಿಗೆ  ಪರಿವರ್ತನೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.