ಕಂಪ್ಲಿಯಲ್ಲಿ ಬಳ್ಳಾರಿ ಜಿಲ್ಲಾ ಛಲವಾದಿ ಮಹಾಸಭಾ ಪದಗ್ರಹಣ”


ಸಂಜೆವಾಣಿ ವಾರ್ತೆ                                                                                     
ಸಿರಿಗೇರಿ, ಫೆ2. ಕಂಪ್ಲಿ ನಗರದ ಗುರುಭವನದಲ್ಲಿ ಜ.31 ರಂದು ಬಳ್ಳಾರಿ ಜಿಲ್ಲಾ ಛಲವಾದಿ ಮಹಾಸಭಾ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಡೀನ್ ಶ್ರೀ ಚಲುವರಾಜು ಕಾರ್ಯಕ್ರಮ ಉದ್ಘಾಟನೆಗೊಳಿಸಿ ಮಾತನಾಡಿ ಸಂಘಟನೆಗಳು ಸಮುದಾಯದವರ ಕಷ್ಟಗಳನ್ನು ಪರಿಹರಿಸುವ ಹಾದಿಯಲ್ಲಿ ಸಾಗಬೇಕು. ಪ್ರಸ್ತುತದಲ್ಲಿ ಚರಿತ್ರೆ ಸೃಷ್ಠಿ ಮಾಡುವವರ ಅವಶ್ಯಕತೆ ಇದೆ. ಇತಿಹಾಸದಲ್ಲಿ ತಳ ಸಮುದಾಯದವರು ಚರಿತ್ರೆ ಸೃಷ್ಟಿ ಮಾಡಿದ್ದರೂ ಆ ಉಲ್ಲೇಖಗಳು ಕಂಡುಬರುತ್ತಿಲ್ಲ. ಶಿಕ್ಷಣವನ್ನು ಎಸ್‍ಎಸ್‍ಎಲ್‍ಸಿ, ಪಿಯುಸಿಗೆ ಮೊಟಕುಗೊಳಿಸಿದವರ ಹೆಚ್ಚಿನ ಶಿಕ್ಷಣಕ್ಕೆ ಸಂಘಗಳು ಒತ್ತು ನೀಡಬೇಕೆಂದು ತಿಳಿಸಿದರು. ಶಿಕ್ಷಕರಾದ ರಮೇಶ್‍ಸುಗ್ಗೇನಹಳ್ಳಿ ಮಾತನಾಡಿ ಸಂವಿಧಾನ ಬದಲಿಸಿ ಎಸ್‍ಸಿ/ಎಸ್‍ಟಿ/ಓಬಿಸಿ ಸಮುದಾಯಗಳ ಹಕ್ಕುಗಳನ್ನು ಮೊಟಕುಗೊಳಿಸುವ ಕೆಲಸವಾಗುತ್ತಿದೆ. ಸಂವಿಧಾನದ ರಕ್ಷಣೆ ಸಂಘಟನೆಗಳ ಮುಖ್ಯ ದ್ಯೇಯವಾಗಬೇಕೆಂದು ತಿಳಿಸಿದರು. ಖಜಾಂಚಿ ಬಾವಕ್ಯ ವೆಂಕಟೇಶ್ ಇವರು ಪ್ರಸ್ತಾವಿಕವಾಗಿ ಮಾತನಾಡಿ ಸಂಘಟನೆಯ ಉದ್ದೇಶ ಮತ್ತು ಮುಂದಿನ ಚಟುವಟಿಕೆಗಳ ಕುರಿತು ತಿಳಿಸಿದರು. ಶಿಕ್ಷಣ ಸಂಸ್ಥೆ ಮುಖ್ಯಸ್ತರಾದ ಗಂಡುಗತ್ತಿ ಕೊಟ್ರಪ್ಪ ಮತ್ತು ವಿಜಯನಗರ ಜಿಲ್ಲಾ ಛಲವಾದಿ ಮಹಾಸಭಾ ಗೌರವ ಅಧ್ಯಕ್ಷರಾದ ಬಸವರಾಜ್ ಮಾತನಾಡಿ, ನಮ್ಮ ಹಕ್ಕುಗಳ ಉಳಿವಿಕೆಗಾಗಿ ಸಮುದಾಯದ ಕಷ್ಟಗಳ ಪರಿಹಾರಕ್ಕೆ ಸಂಘಟನೆ ಕೆಲಸ ಮಾಡಬೇಕೆಂದು ಶುಭಕೋರಿದರು. ನಂತರ ಬಳ್ಳಾರಿ ಜಿಲ್ಲಾ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಸಿ.ಆರ್.ದೊಡ್ಡಹನುಮಂತಪ್ಪ, ಗೌರವಾಧ್ಯಕ್ಷರಾಗಿ ಎಚ್.ಗಣೇಶ, ಉಪಾಧ್ಯಕ್ಷರಾಗಿ ಜಿ.ತಿಮ್ಮಯ್ಯ, ಸಿ.ಹನುಮೇಶಕಟ್ಟಿಮನೆ, ಹೊನ್ನಾಳೆಪ್ಪ, ಸಿ.ರಾಮಚಂದ್ರಪ್ಪ, ಸಿ.ಎಸ್.ವಿರುಪಾಕ್ಷಿ, ಪ್ರ.ಕಾರ್ಯದರ್ಶಿ ರಾಜ.ಸಿ (ಮಧುರಾಜ್), ಖಜಾಂಚಿ ಬಾವೈಕ್ಯವೆಂಕಟೇಶ್, ಸಹಕಾರ್ಯದರ್ಶಿ ಬಿ.ದೇವೇಂದ್ರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ.ಸಣ್ಣರಾಮಯ್ಯ, ಸಿ.ಈಶ್ವರರಾವ್, ಕರೆಂಟ್ ಮಲ್ಲಯ್ಯ, ಬಿ.ಓಂಕಾರಪ್ಪ, ಸಿ.ವೀರೇಶ, ಸಿ.ಕನಕಪ್ಪ, ಸಿ.ವೀರೇಶ್, ದೇವಲಾಪುರ ಮಾರೇಶ್ ಇವರನ್ನು ಬಂತೇಜಿ ನಿಗ್ರೋದ್ ಹನುಮೇಶಪ್ಪ.ಡಿಎಚ್. ಹಾಗೂ ಹಂಪಿ ವಿಶ್ವವಿದ್ಯಾಲಯದ ಡೀನ್ ಚಲುವರಾಜು ಇವರು ನೊಂದಣಿಪತ್ರ ನೀಡಿ ಸನ್ಮಾನಿಸಿ ಗೌರವಿಸಿ ಪದಗ್ರಹಣ ನೆರವೇರಿಸಿದರು.