ಕಂಪ್ಲಿಯಲ್ಲಿ ಕ್ಷಯರೋಗ ನಿರ್ಮೂಲನಾ ಜನ ಜಾಗೃತಿ

ಕಂಪ್ಲಿ ಮಾ 24 : ರಾಷ್ಟ್ರೀಯ ವಿಶ್ವ ಕ್ಷಯರೋಗ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಪಟ್ಟಣದ 12ನೇ ವಾರ್ಡ್ ಇಂದಿರಾ ನಗರದ ಶ್ರೀ ತುಳಸಿ ಭವಾನಿ ದೇವಸ್ಥಾನದ ಆವರಣದಲ್ಲಿ ಮಂಗಳವಾರದಂದು ಬಳ್ಳಾರಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಾವಿನಹಳ್ಳಿಯ ಶ್ರೀ ಸಿದ್ದೇಶ್ವರ ಕಲ್ಚರಲ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಕ್ಷಯರೋಗ ಕುರಿತು ಸಾರ್ವಜನಿಕರಲ್ಲಿ ಜಾನಪದ ಕಲಾತಂಡದ ಬೀದಿ ನಾಟಕ ಮೂಲಕ ಜಾಗೃತಿ ಮೂಡಿಸಲಾಯಿತು.
ಕ್ಷಯರೋಗ ಲಕ್ಷಣಗಳು, ಕ್ಷಯರೋಗದಿಂದ ಮುಕ್ತಿ ಹೊಂದಲು ಅಗತ್ಯವಿರುವ ಪೌಷ್ಟಿಕ ಆಹಾರ ಸೇವನೆ ಮತ್ತು ಔಷಧೋಪಚಾರ ಕುರಿತಂತೆ ಕಲಾತಂಡವು ಜನರಿಗೆ ಸಮಗ್ರ ಮಾಹಿತಿ ನೀಡಿತು.
ಜಾಗೃತಿ ಕಾರ್ಯಕ್ರಮದಲ್ಲಿ ತಾಲೂಕು ಕ್ಷಯರೋಗ ನಿರ್ಮೂಲನಾ ಕೇಂದ್ರ ಖಾಸೀಂ ಕ್ಷೇತ್ರ ಮೇಲ್ವಿಚಾರಕ, ಆಡಳಿತಾಧಿಕಾರಿ ರಾಧಿಕ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶೋಭ, ಆರೋಗ್ಯ ಸಿಬ್ಬಂದಿ, ಹಿರಿಯ ಹಾಗು ಕಿರಿಯ ಆರೋಗ್ಯ ಸಹಾಯಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಕಲಾವಿದರು ಹೇಮಂತ ರಾಜ, ಚಂದ್ರಶೇಖರ, ಶ್ರೀನಿವಾಸ ಕೆ, ದೊಡ್ಡಬಸಪ್ಪ, ಜೈತುನ ಬೀ, ಅರ್ಜುನ, ಸಾವರ್ಜನಿಕರನೇಕರು ಪಾಲ್ಗೊಂಡಿದ್ದರು.