ಕಂಪ್ಲಿಯಲ್ಲಿ ಕರೋನಾ ವಾರಿಯರ್ಸ್ ಗೆ ಪದವೀಧರ ವೇದಿಕೆಯಿಂದ ಗೌರವ ಸನ್ಮಾನ

ಬಳ್ಳಾರಿ:ನ.9- ಜಿಲ್ಲೆಯ ಕಂಪ್ಲಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ಪದವೀಧರ ವೇದಿಕೆಯ ಕಂಪ್ಲಿ ತಾಲೂಕು ಘಟಕದಿಂದ ಸಂಘಟನೆಯ ರಾಜ್ಯಾಧ್ಯಕ್ಷ ಕೆ. ಕೆ. ಹಾಳ್, ಗೋವರ್ಧನ್ ಅವರ ನೇತೃತ್ವದಲ್ಲಿ ಕರೋನ ಸಂದರ್ಭದಲ್ಲಿ ಹಗಲಿರುಳು ಸೇವೆ ಮಾಡಿದ, ಪೌರಕಾರ್ಮಿಕರಿಗೆ, ವೈದ್ಯಾಧಿಕಾರಿಗಳಿಗೆ, ಆಶಾ, ಅಂಗನವಾಡಿ ಕಾರ್ಯಕರ್ತರಿಗೆ, ಶಿಕ್ಷಕರಿಗೆ, ಪೊಲೀಸ್, ಪತ್ರಿಕಾ ಮಾಧ್ಯಮದವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ರಾಜ್ಯ ಗೌರವಾಧ್ಯಕ್ಷ ಎನ್ ಈರಣ್ಣ. ಕಂಪ್ಲಿ ಪಿಎಸ್‌ಐ ಮೌನೇಶ್ ರಾಥೋಡ್, ಪತ್ರಕರ್ತ ಅರುಣ್ ಭೂಪಾಲ್, ಕಂಪ್ಲಿ ವೈದ್ಯಾಧಿಕಾರಿ ಮಲ್ಲೇಶಪ್ಪ, ಲೇಖಕಿ ವಿನೋದ ಕರಣಮ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ. ಮಧುರಾಜ್, ರಾಜ್ಯ ಉಪಾಧ್ಯಕ್ಷ ಮಲ್ಲೇಶಪ್ಪ, ರಾಜ್ಯ ಸಂಘಟನಾ ಸಂಚಾಲಕ ರಾಮಪ್ಪ, ಸಹ ಕಾರ್ಯದರ್ಶಿ ಪಂಪಾಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಕಂಪ್ಲಿ ತಾಲೂಕು ಉಪಾಧ್ಯಕ್ಷ ಸೈಯದ್ ಖಾದ್ರಿ, ಹಾಗೂ ಮರಿಯಪ್ಪ,ಸಿರುಗುಪ್ಪ ತಾಲೂಕು ಅಧ್ಯಕ್ಷ ಹೊನ್ನೂರು ಸ್ವಾಮಿ, ಕೆ. ವಿಜಯ್ ಕುಮಾರ್, ಸದಸ್ಯರುಗಳಾದ, ರಮೇಶ್, ಅಂಜಿ,ಚಿರಂಜೀವಿ, ಪ್ರಕಾಶ್, ಜಗದೀಶ್, ಗಾದಿ ಮೊದಲಾದವರು ಇದ್ದರು.