ಕಂಪ್ಲಿಯಲ್ಲಿ ಅತ್ಯಂತ ಸರಳವಾಗಿ ಹೇರೂರು ವಿರುಪಣ್ಣತಾತ ಜಾತ್ರೆ

ಕಂಪ್ಲಿ ಮೇ 02 : ಕೊರೋನಾ ಹಿನ್ನೆಲೆ ಪಟ್ಟಣದ ಶಿವಶರಣ ಹೇರೂರು ವಿರುಪಣ್ಣ ತಾತನವರ ರಥೋತ್ಸವವನ್ನು ಶನಿವಾರದಂದು ಅತ್ಯಂತ ಸರಳವಾಗಿ ನೆರವೇರಿಸಲಾಯಿತು.
ರಥೋತ್ಸವ ನಿಮಿತ್ತ ಶಾಸಕ ಜೆ.ಎನ್.ಗಣೇಶ್ ವಿರುಪಣ್ಣ ತಾತನವರ ಮಡಿತೇರಿಗೆ ಚಾಲನೆ ನೀಡಿದರು. ಅರ್ಚಕ ಸಿ ಎಂ ವೀರಯ್ಯ ಧಾರ್ಮಿಕ ಕಾರ್ಯಕ್ರಮಗಳ ಪೌರೋಹಿತ್ಯ ವಹಿಸಿದ್ದರು. ಶನಿವಾರದಂದು ವಿರುಪಣ್ಣ ತಾತನವರ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ,ಗಂಗೆ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ರಥೋತ್ಸವ ಕಾರ್ಯಕ್ರಮದಲ್ಲಿ ಮಠದ ಪದಾಧಿಕಾರಿಗಳು, ಕಂಪ್ಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.