ಕಂಪ್ಲಿಕ್ಷೇತ್ರದ ಹಾಲಿ-ಮಾಜಿ ಶಾಸಕರ ಆರೋಪ-ಪ್ರತ್ಯಾರೋಪ ನಿಲ್ಲಿಸಿ,
ಅಭಿವೃದ್ದಿಗೆ ಮಹತ್ವನೀಡಿರಿ – ಶಿವಶಂಕರ


‌ಸಂಜೆವಾಣಿ ವಾರ್ತೆ
ಕುರುಗೋಡು.ಜು.28: ಕಂಪ್ಲಿ ವಿಧಾನಸಭಾಕ್ಷೇತ್ರದ ಹಾಲಿ ಶಾಸಕ ಜೆಎನ್.ಗಣೇಶ- ಮಾಜಿಶಾಸಕ ಟಿಹೆಚ್.ಸುರೇಶಬಾಬು ಕಳೆದ 3ದಿನಗಳಿಂದ ತಮ್ಮ-ತಮ್ಮ ಸ್ವಾರ್ಥಕ್ಕಾಗಿ ಆರೋಪ-ಪ್ರತ್ಯಾರೋಪವನ್ನು ಮಾಡುತ್ತಾರೆ ವಿನಃ ಅಭಿವೃದ್ದಿಗೋಸ್ಕರ ಅಲ್ಲ  ಆದ್ದರಿಂದ ಇವರಿಬ್ಬರ ಆರೋಪ-ಪ್ರತ್ಯಾರೋಪವನ್ನು  ಸಿಪಿಐ [ಎಂ] ಕುರುಗೋಡು ತಾಲೂಕು ಸಮಿತಿ ತೀವ್ರ ಖಂಡಿಸುತ್ತಿದೆ ಎಂದು ಸಿಪಿಐ [ಎಂ] ಪಕ್ಷದ ಜಿಲ್ಲಾ ಸಮಿತಿ ಮುಖಂಡ ವಿಎಸ್. ಶಿವಶಂಕರ್ ಆರೋಪಿಸಿದರು.
ಅವರು ಪಟ್ಟಣದ ಶ್ರೀದೊಡ್ಡಬಸವೇಶ್ವರ ದೇವಸ್ಥಾನದ ಅವರಣದಲ್ಲಿ ಸಿಪಿಐ [ಎಂ] ಕುರುಗೋಡು ತಾಲೂಕು ಸಮಿತಿವತಿಯಿಂದ ಕರೆಯಲಾಗಿದ್ದ ಪತ್ರಿಕಾಗೊಷ್ಟಿಯಲ್ಲಿ ಬಾಗವಹಿಸಿ ಮಾತನಾಡಿದ ಅವರು, ಹಾಲಿ ಶಾಸಕರು- ಮಾಜಿಶಾಸಕರು ಪಟ್ಟಣದಲ್ಲಿ ಕಳೆದ 3,4 ದಿನಗಳಿಂದ ‘ನೀನಾ-ನಾನಾ ಬಹಿರಂಗ ಚರ್ಚೆಗೆ ಬನ್ನಿ ಎಂದು ತಮ್ಮ ವ್ಯವಹಾರ, ಪರ್ಸೆಂಟೇಜ್ ಕೋಸ್ಕರ ಕಿತ್ತಾಟ ನಡೆಸಿ ಪತ್ರಿಕಾಗೋಷ್ಟಿ ನಡೆಸುತ್ತಿದ್ದಾರೆ, ಇವರಿಬ್ಬರ ಪತ್ರಿಕಾಗೊಷ್ಟಿಯನ್ನು ನಾವು ಪಕ್ಷದಿಂದ ಖಂಡಿಸುತ್ತೇವೆ. ಹಾಲಿ- ಮಾಜಿ ಶಾಸಕರು ಇಬ್ಬರೂ ತಮ್ಮ ಅಭಿವೃದ್ದಿಗೋಸ್ಕರ, ಮತ್ತು ಲಾಭಕ್ಕಾಗಿ ಕಿತ್ತಾಟ ನಡೆಸಿ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಜೊತೆಗೆ ಸೋಮಪ್ಪಕೆರೆ ಹಾಗು ಮಲ್ಲಪ್ಪನಕರೆಯಲ್ಲಿನ ವಾರಸುದಾರರಿಗೆ ಪಟ್ಟಾ ನೀಡಿಲ್ಲ, ಕುರುಗೋಡಿನಲ್ಲಿ ಬಸ್‍ಡಿಪೋ ಇದ್ದರೂ ಸುತ್ತ-ಮುತ್ತಲಿನ ಗ್ರಾಮಗಳಿಗೆ ಸಮಯಕ್ಕೆ ಸರಿಯಾಗಿ ಬಸ್ಸಿಲ್ಲ. ಇಂಥಹ ಗಂಬೀರ ಸಮಸ್ಯೆಗಳಿಗೆ ಪರಿಹಾರ ನೀಡದೇ ಹಾಲಿ-ಮಾಜಿ ಶಾಸಕರು ಕಿತ್ತಾಟ ಸರಿನಾ ಎಂದು ಪ್ರಶ್ನಿಸಿದರು?  ಆದ್ದರಿಂದ ಇವರಿಬ್ಬರೂ ತಮ್ಮ ಸ್ವಂತಃ ಲಾಭಕ್ಕಾಗಿ ಕಿತ್ತಾಟ ನಡೆಸುತ್ತಿದ್ದಾರೆ ವಿನಃ ಅಭಿವೃದ್ದಿಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಮುಖಂಡ ಎಸ್.ಪಿ. ಮಹಮ್ಮದ್‍ಖಾನ್, ಹಾಗು ಗಾಳಿಬಸವರಾಜ್ ಮಾತನಾಡಿ, ಹಾಲಿಶಾಸಕರು- ಮಾಜಿಶಾಸಕರು ಕಳೆದ 2008 ರಿಂದ 2022ರ ವರೆಗೆ ತಾವುಗಳು ಇಬ್ಬರೂ ಕಾರ್ಯನಿರ್ವಹಿಸಿದ ವಿವಿದ ಅಭಿವೃದ್ದಿ ಕಾಮಗಾರಿಗಳು ಸರಿಯಾಗಿ ಜರುಗಿಲ್ಲ. ಆದ್ದರಿಂದ ಇಬ್ಬರು ಮಾಡಿದ ಕಾಮಗಾರಿಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಪಕ್ಷದ ಮುಖಂಡ ಎ.ಮಂಜುನಾಥ್ ಹಾಗು ಎನ್.ಸೋಮಪ್ಪ ಮಾತನಾಡಿ, ಕುರುಗೋಡು ತಾಲೂಕಿಗೆ ಬಳ್ಳಾರಿ ಸಂಸದ ಕೊಡುಗೆ ಶೂನ್ಯವಾಗಿದೆ.  ಸಂಸದರು ಕುರುಗೋಡು ಬಾಗಕ್ಕೆ ಬಾರದೇ ಇರುವುದೇ ದೌರ್ಬಾಗ್ಯ ಎಂದು ವಿಷಾದವ್ಯಕ್ತಪಡಿಸಿದರು. ಬಳ್ಳಾರಿ ಜಿಲ್ಲಾ ಸಂಸದರು ಕುರುಗೋಡು ಪಟ್ಟಣಕ್ಕೆ ಒಂದು ಬಾರಿಯಾದರೂ ದರ್ಶನಬಾಗ್ಯವಿಲ್ಲ. ಆದ್ದರಿಂದ ಬಳ್ಳಾರಿ ಸಂಸದರು ಕಾಣೆಯಾಗಿದ್ದಾರೆ. ನಮಗೆ ಹುಡಿಕಿಕೊಡಿರಿ ಎಂದು ಮಾದ್ಯಮಸ್ನೇಹಿತರಲ್ಲಿ ವಿನಂತಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸಿಪಿಐ [ಎಂ] ಪಕ್ಷದ ಮುಖಂಡ ಉಪ್ಪಾರುಶಂಕ್ರಪ್ಪ, ಹಮೀನ್‍ಸಾಬ್, ಆರ್‍ಎನ್.ಅಂಜಿನೇಯ ಸೇರಿದಂತೆ ಇತರೆ ಪಕ್ಷದ ಕಾರ್ಯಕರ್ತರು ಇದ್ದರು.

Attachments area