ಕಂಪ್ಯೂಟರ ತರಬೇತಿ ಪಡೆಯುವುದರೊಂದಿಗೆ ಉತ್ತಮ ಸಮಾಜ ನಿರ್ಮಿಸಿ: ಶರಣು ಮೆಡಿಕಲ್

ಕಲಬುರಗಿ, ನ.06:ಪ್ರಸಕ್ತ ದಿನಗಳಲ್ಲಿ ಕಂಪ್ಯೂಟರ್ ಕಲೆಯುವುದು ತುಂಬಾ ಅವಶಕ್ಯವಾಗಿದ್ದು,ಗ್ರಾಮೀಣ ಪ್ರದೇಶದಲ್ಲಿ ಯುವಕ-ಯುವತಿಯರು ಬಹಳಷ್ಟು ಸಮಯ ವ್ಯರ್ಥ ಮಾಡದೆ. ಇಂತಹ ಉಚಿತ ಕಂಪ್ಯೂಟರ ತರಬೇತಿ ಶಿಬಿರಗಳನ್ನು ಗ್ರಾಮೀಣ ಪ್ರದೇಶದ ಯುವಕರು ಮತ್ತು ಯುವತಿಯರು ಬಳಸಿ ಕೊಳ್ಳುವುದರ ಮೂಲಕ ಉತ್ತಮ ಸಮಾಜ ನಿರ್ಮಾಣ ಕಡೆಗೆ ಸಾಗಲಿ ಎಂದು ಜಿಲ್ಲಾ ಪಂಚಾಯತ ಸದಸ್ಯ ಶರಣು ಮೆಡಿಕಲ್ ಕರೆ ನೀಡಿದರು.

ಗುರುವಾರ ಚಿಂಚೋಳಿ ತಾಲ್ಲೂಕಿನ ನಿಡಗುಂದಾ ಗ್ರಾಮದ ಸ್ವಾಮಿ ವಿವೇಕಾನಂದ ವಿದ್ಯ ಮಂದಿರದಲ್ಲಿ ವಿಕಾಸ ಆಕಾಡಮಿ ಚಿಂಚೋಳಿ ಮತ್ತು ಕಲಬುರಗಿಯ 3 ಎಚ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿ, ಅವರು ಗ್ರಾಮೀಣ ಪ್ರದೇಶದ ಯುವಕ ಯುವತಿಯರಿಗೆ ಇದು ಒಂದು ಸೌಭಾಗ್ಯ, ಹಣ ವ್ಯಯ ಮಾಡದೆ ಉಚಿತವಾಗಿ ಕಂಪ್ಯೂಟರ್ ತರಬೇತಿ ಪಡೆಯುವುದರ ಜೊತೆಗೆ ಉದ್ಯೋಗವನ್ನು ಕೂಡ ಪಡೆಯಬಹುದು ಎಂದು ಅವರು ತಿಳಿಸಿದರು.

ಕಲಬುರಗಿಯ 3 ಎಚ್ ಸಂಸ್ಥೆಯ ಮುಖ್ಯಸ್ಥ ಕೆ.ವಾಲಿ ಮಾತನಾಡಿ ನಿಡಗುಂದಾ ಗ್ರಾಮದ ಯುವಕ ಯುವತಿಯರು ಇದರ ಲಾಭ ಪಡೆದುಕೊಳ್ಳಬೇಕು.ಇದು ಸಂಪೂರ್ಣವಾಗಿ ಉಚಿತ ತರಬೇತಿ ಶಿಬಿರವಾಗಿದ್ದು, ಆರು ತಿಂಗಳುಗಳ ಕಾಲ ಉಚಿತವಾಗಿದ್ದು, ಶಿಬಿರಾರ್ಥಿಗಳು ಇಂತಹ ತರಬೇತಿ ಪಡೆಯುವುದರ ಮೂಲಕ ನಿಮ್ಮ ಕೌಶಲ್ಯ ಮಟ್ಟ ವೃದ್ಧಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಚಿಂಚೋಳಿ ತಾಲೂಕ ವಿಕಾಸ ಆಕಾಡಮಿ ಸಂಸ್ಥೆಯ ಸಂಚಾಲಕ ಕಾಶಿನಾಥ, ವಿವೇಕಾನಂದ ವಿದ್ಯಮಂದಿರ ಶಾಲೆಯ ಮುಖ್ಯಸ್ಥರಾದ ಬಸವರಾಜ ನಿಷ್ಠಿ, ವಿವೇಕಾನಂದ ವಿದ್ಯ ಮಂದಿರ ಶಾಲೆಯ ಮುಖ್ಯ ಗುರುಗಳಾದ ದಂಡಪ್ಪ, ಕಲಬುರಗಿ 3 ಎಚ್ ಸಂಸ್ಥೆಯ ತರಬೇತಿದಾರ ರಾಜಶೇಖರ ಬಿರಾದಾರ, ನಿಡಗುಂದಾ ವಿಕಾಸ ಅಕಾಡೆಮಿ ಪ್ರಮುಖರಾದ ಶಂಕರ್ ಜಡಲ್, ಮಹಮದ್ ಖುರೆಷಿ, ವೆಂಕಟೇಶ ಮಡಿವಾಳ, ರಮೇಶ್ ಮಡಿವಾಳ , ವಿಷ್ಣು ವರ್ಧನ ರೆಡ್ಡಿ , ರಾಕೇಶ್ ಚೌದ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

sಇದೇ ಸಂದರ್ಭದಲ್ಲಿ ಗ್ರಾಮದ ಪತ್ರಿಕೋದ್ಯಮ ಪದವಿ ಮುಗಿಸಿರುವ ಹಾಗೂ ಹವ್ಯಾಸಿ ಬರಹಗಾರಾದ ಸಂಜೀವಕುಮಾರ ಎಸ್.ನಿಡಗುಂದಾ ಮತ್ತು ನಿಡಗುಂದಾ ಗ್ರಾಮದ ಕಿರು ಚಿತ್ರಗಳ ನಿರ್ದೇಶಕರಾದ ಶ್ರೀ ನಿವಾಸ ಗುತ್ತೇದಾರ ಅವರಿಗೆ ವಿಕಾಸ ಆಕಾಡೆಮಿ ಸಂಸ್ಥೆಯ ವತಿಯಿಂದ ಸನ್ಮಾನ ಮಾಡಲಾಯಿತು.