ಕಂಪ್ಯೂಟರ್ ಸೈನ್ಸ್ ನಲ್ಲಿ ಪಿಎಚ್.ಡಿ

ಕಲಬುರಗಿ:ಜ.1:ನಗರದ ಶೆಟ್ಟಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಚಂದ್ರಕಲಾ ವಿ. ಪಾಟೀಲ ಅವರು ಸಲ್ಲಿಸಿದ “ಚಿತ್ರದ ನಕಲಿ ಪತ್ತೆಗಾಗಿ ಅಸ್ಪಷ್ಟ ತರ್ಕ ಬಳಸಿಕೊಂಡು ಮಾಡುವ ತನಿಖಾ ವಿಧಾನ” ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್‍ನಲ್ಲಿ ಪಿಎಚ್.ಡಿ ನೀಡಿದೆ.
ಡಾ. ಮುಂಗಮುರಿ ಶಶಿಕಲಾ ಅವರು ಚಂದ್ರಕಲಾ ವಿ. ಪಾಟೀಲರಿಗೆ ಮಾರ್ಗದರ್ಶಕರಾಗಿದ್ದರು.
ಅಭಿನಂದನೆ: ಶೆಟ್ಟಿ ಗ್ರುಪ್ ಆಫ್ ಇನ್‍ಸ್ಟಿಟ್ಯೂಶನ್ಸ್ ಅಧ್ಯಕ್ಷರಾದ ಉದಯಶಂಕರ ಶೆಟ್ಟಿ, ಅನಿರುದ್ಧ ಶೆಟ್ಟಿ, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿ ಶ್ವೇತಾ ಎ. ಶೆಟ್ಟಿ ಹಾಗೂ ಪ್ರಾಂಶುಪಾಲ ಡಾ. ವಿಜಯಕುಮಾರ್ ದೇವಪ್ಪ ಅವರು ಡಾ. ಚಂದ್ರಕಲಾ ಅವರನ್ನು ಅಭಿನಂದಿಸಿದ್ದಾರೆ.