ಕಂಪ್ಯೂಟರ್ ಶಿಕ್ಷಣ ವಿದ್ಯಾರ್ಥಿಗಳಿಗೆ ಅತ್ಯವಶ್ಯಕ : ಸಿಪಿಐ ನಧಾಫ್

ಜೇವರ್ಗಿ:ಸೆ.7 : ನಮ್ಮ ಜೀವನದಲ್ಲಿ ನಮಗೆ ಯಾವುದೆ ಕ್ಞಾನ ಸಿಕ್ಕರು ಕೂಡ ಅದರ ಸದುಪಯೋಗ ಮಾಡೊಕೊಳ್ಳಬೇಕೆ ಹೋರೆತು ದುರು[ಯೋಗವಲ್ಲ. ಇಂದಿನ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ವಿದ್ಯಾರ್ಧೀಗಳಿಗೆ ಅತ್ಯವಶ್ಯಕವಾಗಿದೆ ಎಂದು ಜೇವರ್ಗಿ ಸಿಪಿಐ ನಧಾಫ್ ರವರು ತಿಳಿಸಿದರು.

ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ಎಸ್ ಎಲ್ ಈ ಫೌಂಡೇಶನ್ ಕಂಪ್ಯೂಟರ್ ತರಬೇತಿ ಕೇಂದ್ರದ ವತಿಯಿಂದ ಬಾನುವಾರ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕೋರ್ಸ್ ಗಳ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮವನ್ನುದ್ದೆಶಿಸಿ ಸಿಪಿಐ ನದಾಫ್ ಅವರು ಮಾತನಾಡಿ ಕಂಪ್ಯೂಟರ್ ಶಿಕ್ಷಣ ಎಷ್ಟು ಅವಶ್ಯಕತೆ ಇದೆಯೋ ಅಷ್ಟೇ ಬಳಸಿಕೊಳ್ಳಬೇಕು. ಅನವಶ್ಯಕವಾಗಿ ಬಳಸುವುದರಿಂದ ಮನುಷ್ಯರ ಮೇಲೆ ದುಷ್ಪರಿಣಾಮಗಳು ಬೀರುತ್ತವೆ. ನಮಗೆ ಯಾವುದೆ ಜ್ಞಾನ ಸಿಗಲಿ ಅದರ ಉಪಯೋಗವನ್ನ ಸರಿಯಾಗಿ ಮಾಡಿಕೊಳಬೇಕೆ ಹೋರತು ದುರುಪಯೋಗವಲ್ಲ. ಕಂಪ್ಯೂಟರ್ ಶಿಕ್ಷಣ ಅತ್ಯವಶ್ಯಕ, ಅದಕ್ಕಾಗಿ ಎಲ್ಲರೂ ಕಂಪ್ಯೂಟರ್ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪೆÇೀಸ್ಕೋ ಕಾಯ್ದೆ ಮತ್ತು ಇತರ ಪೆÇಲೀಸ್ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.

ನಂತರ ಸಂಸ್ಥೆ ಮುಖ್ಯಸ್ಥರಾದ ಸುನಿ¯ ಪ್ರಸ್ತಾವಿಕವಾಗಿ ಮಾತನಾಡಿ ಒಟ್ಟು ನಮ್ಮ ರಾಜ್ಯದಲ್ಲಿ 56 ಎಸ್ ಎಲ್ ಇ ಫೌಂಡೇಶನ್ ವತಿಯಿಂದ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಈ ಒಂದು ಸಂಸ್ಥೆ ನಮ್ಮ ಜೇವರ್ಗಿ ಪಟ್ಟಣದ ಕೆನರಾ ಬ್ಯಾಂಕ್ ಹತ್ತಿರ ಶಾಸ್ತ್ರಿ ಚೌಕಿನಲ್ಲಿದ್ದು, ಸುಮಾರು 500 ರಿಂದ 600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅತ್ಯಂತ ಕಡಿಮೆ ದರದಲ್ಲಿ ಒಂದು ವರ್ಷದ ಕಂಪ್ಯೂಟರ್ ಕೋರ್ಸ್ ಕಲಿಸಿಕೊಡಲಾಗುತ್ತಿದೆ. ಈ ಒಂದು ಆಧುನಿಕ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ಅತ್ಯವಶ್ಯಕ ಅದಕ್ಕಾಗಿ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣ ಪಡೆದರೆ ಸ್ವಯಂ ಉದ್ಯೋಗಿಗಳಾಗಿ ಜೀವನ ಮಾಡಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಸುನಿ¯ ಬಂಡಗರ, ದೇವೇಂದ್ರ ಬಡಿಗೇರ, ನಿಜಲಿಂಗ ದೊಡ್ಡಮನಿ, ಶರಣು ನೆರಡಗಿ, ಸುರೇಶ್ ಹಿರೇಮಠ್, ಕಂಡೊಬಾ ಕೊಡ್ಲೆಕರ್, ಶ್ರೀಮತಿ ಗೀತಾ, ಭೀಮಣ್ಣ ಶಾಹಬಾದ, ಬೀರು ಗುಡದಿನ್ನಿ, ವಂದನಾ ಕೊಡ್ಲೆಕರ್, ಲಖನ್ ಖರ್ಜೆ, ಶ್ರೀಮತಿ ಲಕ್ಷ್ಮೀ, ಶ್ರೀಮತಿ ಸರಿತಾ ಸೆರಿದಂತೆ ಎಸ್ ಎಲ್ ಈ ಫೌಂಡೇಶನ್ ಕಂಪ್ಯೂಟರ್ ತರಬೇತಿ ಕೇಂದ್ರದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು