ಕಂಪ್ಯೂಟರ್ ಶಿಕ್ಷಣ ಪ್ರತಿಯೊಬ್ಬರಿಗೂ ಅನಿವಾರ್ಯ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮಾ.14: ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ ಎಂದು
ತಾ.ಪಂ ಸದಸ್ಯ ಬಿ.ಎಸ್ ರಾಜಪ್ಪ ಹೇಳಿದರು.
ಅವರು ಮರಿಯಮ್ಮನಹಳ್ಳಿಗೆ ಸಮೀಪದ ಚಿಲಕನಹಟ್ಟಿ  ಗ್ರಾಮದಲ್ಲಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯಕಷನಲ್ ಟ್ರಸ್ಟ್ ಹಾಗೂ ಸಾಯಿ ವಿಜಯ ಪ್ರಗತಿ ಸ್ಟೀಲ್ ರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ  ಕಂಪ್ಯೂಟರ್ ತರಬೇತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಾವು ಎಷ್ಟೇ ಉತ್ತಮ‌ ಶಿಕ್ಷಣ ಪಡೆದರೂ ಕಂಪ್ಯೂಟರ್ ಶಿಕ್ಷಣದ ಜ್ಞಾನವಿಲ್ಲದಿದ್ದರೇ ನಾವು ಅನಕ್ಷರಸ್ಥರಿದ್ದಂತೆ. ಇಂದು ಬೇಸಿಕ್ ಕಂಪ್ಯೂಟರ್ ತರಬೇತಿ ಇಲ್ಲದ ಹೊರತು ಯಾವುದೇ ಉದ್ಯೋಗ ದೊರೆಯುವುದು ಕಷ್ಟಸಾಧ್ಯ. ಹಾಗಾಗಿ ಪ್ರತಿಯೊಬ್ಬರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ‌ ಕಂಪ್ಯೂಟರ್ ತರಬೇತಿ ಪಡೆದುಕೊಳ್ಳಿ ಎಂದು ಸಲಹೆ ಮಾಡಿದರು.
ಕಂಪ್ಯೂಟರ್ ಶಿಕ್ಷಣದ ಜ್ಞಾನವಿದ್ದರೇ ಉದ್ಯೋಗ ಪಡೆದುಕೊಳ್ಳಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್‌ ಸಂಸ್ಥೆ ವಿದ್ಯಾರ್ಥಿಗಳಿಗೆ ಮತ್ತು ಯುವಕ ಯುವತಿಯರಿಗೆ ಕಂಪ್ಯೂಟರ್ ತರಬೇತಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಸಂಸ್ಥೆಯ ಕಾರ್ಯವನ್ನು ಪ್ರಶಂಸಿದರು.
ಈ ಸಂದರ್ಭದಲ್ಲಿ ಸಾಯಿ ವಿಜಯ ಪ್ರಗತಿ ಸ್ಟೀಲ್ ವ್ಯವಸ್ಥಾಪಕ ಅಮೃತ್, ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್‌ನ ಅಧ್ಯಕ್ಷ ಭೀಮರಾಜ ಯು, ಕಾರ್ಯದರ್ಶಿ ಉಷಾ ಯು.ಆರ್, ಗ್ರಾ.ಪಂ ಸದಸ್ಯರಾದ ಧರ್ಮಪ್ಪ, ಚಿನ್ನಾಪುರಪ್ಪ
ಲಕ್ಷ್ಮೀ ಬಾಯಿ ಚಂದ್ರನಾಯ್ಕ್, ಶಕುಂತಲಾ ಅಂಜಿನಪ್ಪ, ಲಕ್ಷ್ಮೀದೇವಿ ಚಂದ್ರಪ್ಪ, ಸಂಸ್ಥೆಯ ಶಿಕ್ಷಕಿ ಭಾಗ್ಯ ಯು, ವಿದ್ಯಾರ್ಥಿಗಳಾದ ಕರಿಬಸಮ್ಮ, ಕೀರ್ತಿ, ಓಬಮ್ಮ, ದುರುಗೇಶ್ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಹಾಗೂ ಇತರರು ಇದ್ದರು.