ಕಂಪ್ಯೂಟರ್-ಲ್ಯಾಪ್ ಟಾಪ್ ಕಳ್ಳನ ಬಂಧನ: 6 ಲಕ್ಷ ರೂ. ಮೌಲ್ಯದ ವಸ್ತುಗಳ ವಶ

ಸಂಜೆವಾಣಿ ವಾರ್ತೆ
ಮಂಡ್ಯ: ಆ.12:- ನಾಗಮಂಗಲದ ಬೆಳ್ಳೂರು ಠಾಣೆಯ ಪೆÇಲೀಸರು ಗೋಡೌನ್ ಗೆ ಕನ್ನಹಾಕಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿ 6.54 ಲಕ್ಷ ನಗದು ಮತ್ತು ಕಂಪ್ಯೂಟರ್ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಸಮೀಪದ ಹೊಸಕೋಟೆಯ ದರ್ಶನ್(28) ಎಂಬಾತನೇ ಬಂಧಿತ ಆರೋಪಿ,ಕಳೆದ 31.07.2023 ರಂದು ಬೆಳ್ಳೂರು ಪಟ್ಟಣದಲ್ಲಿರುವ ವಿಲ್ ಕಾರ್ಟ್ ಸಂಸ್ಥೆಯ ಸಂಜಯ್ ಎಂಬುವರು ತಮ್ಮ ವಿಲ್ ಕಾರ್ಟ್ ಗೋಡೌನ್ ರೋಲಿಂಗ್ ಶಟರ್ ಅನ್ನು ಯಾರೋ ಕಳ್ಳರು ಆಯುಧದಿಂದ ಮೀಟಿ ಒಳಗೆ ಹೋಗಿ ಬೀರುವಿನಲ್ಲಿಟ್ಟಿದ್ದ 6.54 ಲಕ್ಷ ನಗದು, ಸಿಪಿಯು, ಮಾನಿಟರ್ ಹಾಗೂ ಲ್ಯಾಪ್ ಟಾಪ್ ಅನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಬೆಳ್ಳೂರು ಪೆÇಲೀಸ್ ಠಾಣೆ ಮೊ.ಸಂ. 153/2021 ಕಲಂ 457, 380 ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.
ಈ ಸಂಬಂಧ ಮಂಡ್ಯ ಜಿಲ್ಲಾ ಅಪರ ಪೆÇಲೀಸ್ ಅಧೀಕ್ಷಕರಾದ ಸಿ.ಈ. ತಿಮ್ಮಯ್ಯ ರವರು ಹಾಗೂ ನಾಗಮಂಗಲ ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಪ್ರಸಾದ್ ರವರ ಮಾರ್ಗದರ್ಶನದಲ್ಲಿ ನಿರಂಜನ ಕೆ.ಎಸ್., ಸಿ.ಪಿ.ಐ, ನಾಗಮಂಗಲ ವೃತ್ತರವರ ನೇತೃತ್ವದಲ್ಲಿ ಬಸವರಾಜ ಪಿ.ಎಸ್.ಐ ಬೆಳ್ಳೂರು, ಲೋಕೇಶ್, ಪಿಎಸ್‍ಐ,ಕಾನ್ಸಟೇಬಲ್ಗಳಾದ ಪ್ರಶಾಂತ್ ಕುಮಾರ್, ಉಮೇಶ್, ಕಿರಣ್ ಕುಮಾರ್, ಲೋಕೇಶ್, ಶಂಕರ್ ನಾಯ್ಕ, ಬಸವರಾಜು ಒಳಗೊಂಡ ತಂಡ ರಚನೆ ಮಾಡಲಾಗಿತ್ತು.
ಈ ತಂಡವು 10.08.2023 ರಂದು ಬೆಳ್ಳೂರು ಟೌನಿನ ವಿಲ್‍ಕಾರ್ಟ್‍ನ ಉದ್ಯೋಗಿಯಾದ ದರ್ಶನ್‍ಎಂ ಬ ಆರೋಪಿಯನ್ನು ಪತ್ತೆ ಮಾಡಿ, ಆತ ಕಳ್ಳತನ ಮಾಡಿದ್ದ 6,54,360 ರೂ. ನಗದು ಹಣ,ಒಂದು ಸಿಪಿಯು, ಒಂದು ಮಾನಿಟರ್, ಲ್ಯಾಪ್ಟಾಪ್ ಸೇರಿದಂತೆ 6,97,360 ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಾಗಮಂಗಲ ವೃತ್ತದ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಈ ಎಸ್ಪಿ ಯತೀಶ್ ಪ್ರಶಂಸಿದ್ದಾರೆ.