ಕಂಪ್ಯೂಟರ್ ಜ್ಞಾನ ಅತ್ಯಂತ ಅವಶ್ಯಕ : ದುರ್ಗಪ್ಪ ನಾಯಕ

ಶಹಾಪುರ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕ – ಯುವತಿಯರು ಕಂಪ್ಯೂಟರ್ ಜ್ಞಾನಹೊಂದುವುದು ಅತ್ಯಂತ ಅವಶ್ಯಕವಾಗಿದೆ ಎಂದು ಸುರಪುರ ನಗರಸಭೆಯ ಸಮುಧಾಯ ಸಂಘಟಕರಾದ ಶ್ರೀ. ದುರ್ಗಪ್ಪ ನಾಯಕ ಹೇಳಿದರು. ರಂಗಂಪೇಟೆಯಲ್ಲಿ ಇಂದು ಡೆನಲ್ಮ್ ಅಭಿಯಾನ ಬೆಂಗಳೂರು ಹಾಗೂ ನಗಸಭೆ ಸುರಪುರ ಟರ್ನಿಂಗ್ ಪಾಯಿಂಟ್ ಕಂಪ್ಯೂಟರ್ ಸಹಯೋಗದೊಂದಿಗೆ ಪ್ರಸಕ್ತ ಸಾಲಿನ ಡೆನಲ್ಮ್ ಯೋಜನೆಯಡಿ ಆಯ್ಕೆಯಾದ ಸುರಪುರ ನಗರದ ನಿರುದ್ಯೋಗಿ ಯುವಕರಿಗಾಗಿ ಕಂಪ್ಯೂಟರ್ ತರಬೇತಿ ಚಾಲನೆ ಸಮರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಪ್ರತಿ ಹಂತದಲ್ಲು ವಿವಿಧ ಇಲಾಖೆಗಳಲ್ಲಿ ಹಾಗೂ ವಿವಿಧ ವಲಯಗಳಲ್ಲಿ ಕಂಪ್ಯೂಟರ್ ಜ್ಞಾನ ಪಡೆದವರಿಗೆ ಹೆಚ್ಚಿನ ಆದ್ಯತೆ ಇದ್ದು, ಇಂದು ಸಂಪೂರ್ಣ ಜಗತ್ತು ಕಂಪ್ಯೂಟರ್‍ಮಯ ವಾಗುತ್ತಿದ್ದು, ಆ ದಿಶೆಯಲ್ಲಿ ಯುವಕ-ಯುವತಿಯರು ಕಂಪ್ಯೂಟರ್ ಜ್ಞಾನ ಪಡೆಯುವ ನಿಟ್ಟಿನಲ್ಲಿ ಸರಕಾರದ ಈ ಸೌಲತ್ತನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಹೇಳಿದರು. ವಿಜಯಪುರ ಟರ್ನಿಂಗ್ ಪಾಯಿಂಟಿನ ಮುಖ್ಯಸ್ಥರಾದ ಶ್ರೀ. ಬಸವರಾಜ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು, ಅತಿಥಿಗಳಾಗಿ ನಗರಸಭೆಯ ಸಿಬ್ಬಂದಿಗಳಾದ ಶ್ರೀದೇವಿ ಹಿರೇಮಠ, ಬಸಮ್ಮ ಇಟ್ಟಂಗಿ, ಗೀತಾ, ಆರ್.ಐ. ಶ್ವೇತಾ ವೇದಿಕೆ ಮೇಲಿದ್ದರು. ಸುರಪುರ ತರಬೇತಿ ಕೇಂದ್ರದ ಮುಖ್ಯಸ್ತ ಪ್ರಕಾಶ ಅಂಗಡಿ ಕನ್ನೆಳ್ಳಿ ನಿರೂಪಿಸಿ ವಂದಿಸಿದರು.