ಕಂಪ್ಯೂಟರ್ ಜ್ಞಾನದಿಂದ ಅವಕಾಶಗಳು ಹೆಚ್ಚಳ

ಕಲಬುರಗಿ:ಡಿ.02: ಕೆಲವು ವರ್ಷಗಳ ಹಿಂದೆ ಸೀಮಿತ ಕ್ಷೇತ್ರಕ್ಕೆ ಮೀಸಲಾಗಿದ್ದ ಕಂಪ್ಯೂಟರ ಬಳಕೆ, ಪ್ರಸ್ತುತ ದಿನಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿ ಕಂಪ್ಯೂಟರ ಬಳಕೆ ಮಾಡುವುದು ಅಗತ್ಯವಾಗಿದೆ. ಇದರಿಂದ ಕೆಲಸದ ವೇಗ ಹೆಚ್ಚಳ, ಸಮಯದ ಉಳಿತಾಯ, ದಕ್ಷತೆ, ನಿಖರವಾಗಿ ಕೆಲಸವಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕಂಪ್ಯೂಟರ ಬಳಕೆಯ ಶಿಕ್ಷಣದ ತರಬೇತಿ ಪಡೆಯುವುದು ಅವಶ್ಯಕವಾಗಿದೆ. ಇದರಿಂದ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆ ಎಂದು ಹಿರಿಯ ಕಂಪ್ಯೂಟರ ಬೋಧಕ ಅಸ್ಲಾಂ ಶೇಖ್ ಅಭಿಪ್ರಾಯಪಟ್ಟರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ‘23ನೇ ವಿಶ್ವ ಕಂಪ್ಯೂಟರ ಸಾಕ್ಷರತೆ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಕಂಪ್ಯೂಟರ ಜ್ಞಾನವಿಲ್ಲದಿದ್ದರೆ ಅನಕ್ಷರಸ್ಥ ಎಂಬ ಸ್ಥಿತಿಗೆ ಬಂದಿರುವುದು ಕಂಪ್ಯೂಟರ್‍ನ ಮಹತ್ವವವನ್ನು ಸಾರುತ್ತದೆ. ವಿದ್ಯಾರ್ಥಿಗಳು ಯಾವುದೇ ಪದವಿ, ಕೋರ್ಸ್ ಮಾಡುವುದುರ ಜೊತೆಗೆ ಕಂಪ್ಯೂಟರ ಶಿಕ್ಷಣ ಪಡೆಯಬೇಕು. ಇದರಿಂದ ನಿಮಗೆ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ. ಕಂಪ್ಯೂಟರವಿಲ್ಲದ ಕ್ಷೇತ್ರ ನಾವಿಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಪ್ರಿಯಾಂಕಾ ದೋಟಿಕೊಳ್ಳ, ಸಾನಿಯಾ ಶೇಖ್, ಐಶ್ವರ್ಯ ಬಿರಾದಾರ, ಪಾಯಲ್ ಹಿಬಾರೆ, ಸೋಹೆಲ್ ಶೇಖ್, ನಿಲೋಫರ್ ಶೇಖ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.