ಕಂಪ್ಯೂಟರ್ ಆಪರೇಟರ್ ನೇಮಕ ಮಾಡಿ ; ಪಿಡಿಓಗೆ ಕರವೇ ಮನವಿ

ಸೇಡಂ, ಜು,26: ತಾಲೂಕಿನ ದುಗ್ನೂರ್ ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ್ ಆಪರೇಟರ್ ಹಾಗೂ ಕಸದ ತೊಟ್ಟಿಯ ವಾಹನ ಡ್ರೈವರ್ ಉದ್ಯೋಗಗಳ ಕಾಲಿ ಇರುವುದರಿಂದ ಈ ಉದ್ಯೋಗಗಳನ್ನು ಸೂಕ್ತವಾಗಿ ಸರ್ಕಾರದ ಆದೇಶದ ಪ್ರಕಾರ ಪರಿಗಣಿಸಿ ನೋಟಿಸ್ ಸೂಚನೆ ಪಲಕಕ್ಕೆ ಅಂಟಿಸಿ ತೆಗೆದುಕೊಳ್ಳಬೇಕು ಹಾಗೂ ನಮ್ಮ ದುಗ್ನೂರ್ ಗ್ರಾಮ ಪಂಚಾಯತಿಯಲ್ಲಿ ಶುದ್ಧ ನೀರಿನ ಘಟಕವನ್ನು ನಿರ್ಮಿಸಿ ಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಿಡಿಓ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆಯಲ್ಲಿ ನೀಲಕಂಠಪ್ಪ ಗೌಡ, ಸಚಿನ್, ವಿಶ್ವನಾಥ್ ರೆಡ್ಡಿ, ಗುರುನಾಥ್ ಗೌಡ, ಅಂಬರೀಶ್, ಶ್ರೀಕಾಂತ್ ರೆಡ್ಡಿ, ಶೇಖರ,ಭರತಕುಮಾರ್, ಬಸವಂತ ರೆಡ್ಡಿ, ಅಶೋಕ್, ಬಸವರಾಜ, ಸಂಗಮೇಶ, ರಾಜು, ಶೇಖರ್, ಇನ್ನಿತರರಿದ್ದರು.