ಕಂಪೆನಿಯಲ್ಲಿ ಅಗ್ನಿ ಅವಘಡ

ಮಂಗಳೂರು, ಎ.2೫- ಬಜ್ಪೆ ಸಮೀಪದ ಪೆರ್ಮುದೆ ಎಂಬಲ್ಲಿ ಎಂಎಸ್‌ಇಝೆಡ್ ವ್ಯಾಪ್ತಿಯೊಳಗಿರುವ ಕ್ಯಾಟಸಿಂತ್ ಸ್ಪೆಷಾಲಿಟಿ ಕೆಮಿಕಲ್ಸ್ ಪ್ರೈವೆಟ್ ಲಿ. ಎಂಬ ಹೆಸರಿನ ನೂತನ ಸುಗಂಧ ದ್ರವ್ಯ ತಯಾರಿ ಕಂಪೆನಿಯಲ್ಲಿ ಶನಿವಾರ ಅಪರಾಹ್ನ ಅಗ್ನಿ ಅನಾಹುತ ಸಂಭವಿಸಿದೆ.

ಈ ಸಂದರ್ಭ ಕಂಪೆನಿಯಲ್ಲಿ ಕೆಲಸಗಾರರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಇದರಿಂದ ಪರಿಸರದಲ್ಲಿ ದಟ್ಟ ಹೊಗೆ ಕಾಣಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿದ್ದು, ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.