ಕಂಪಾನಿಯೋ ಉಚಿತ ನಡೆಸಿದ 8 ಸಾವಿರ ಕ್ಯಾಂಪುಗಳು ಯಶಸ್ವಿ:ಡಾ.ರತ್ನಾಕರ

ತಾಳಿಕೋಟೆ :ಡಿ.28: ಭಾರತದಲ್ಲಿ ಪರಿಚಯಿಸುತ್ತಾ ಸಾಗಿ ಬರಲಾದ ಕಂಪಾನಿಯೋ ಸಂಸ್ಥೆಯು ಇಲ್ಲಿಯವರೆಗೆ ಉಚಿತ ಪುಟ್ ಫಲ್ಸ್ ಥೇರಫಿ ಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಂಡು 398 ಬ್ರಾಂಚ್‍ಗಳಲ್ಲಿ ಆರೋಗ್ಯ ಸಂಬಂದಿತ ನಡೆಸಿರುವ 8 ಸಾವಿರ ಕ್ಯಾಂಪುಗಳು ಯಶಸ್ವಿಯಾಗಿ ನಡೆದಿವೆ ಎಂದು ಕಂಪಾನಿಯೋ ಸಂಸ್ಥೆಯ ಡಾ.ರತ್ನಾಕರ ಶೆಟ್ಟಿ ಅವರು ಹೇಳಿದರು.
ಬುಧವಾರರಂದು ಶ್ರೀ ಖಾಸ್ಗತೇಶ್ವರ ಮಠದಲ್ಲಿ ಶ್ರೀ ಮಠದ ಸಹಯೋಗದೊಂದಿಗೆ ಡಿ.20 ರಿಂದ ಪ್ರಾರಂಬಿಸಲಾದ ಕಂಪಾನಿಯೋ ಸಂಸ್ಥೆಯ ಉಚಿತ ಪುಟ್‍ಫಲ್ಸ್ ಥೇರಪಿ ಚಿಕೀತ್ಸಾ ಶಿಬಿರದಲ್ಲಿ ಪಾಲ್ಗೊಂಡು ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಎಧೆಯಲ್ಲಿ ಹೃದಯದ ಮೊದಲನೇಯ ಭಾಗವಾಗಿದೆ ಅದರಂತೆ ಕಾಲುಗಳು ಎರಡನೇ ಹೃದಯವಾಗಿ ಕಾರ್ಯ ಮಾಡಬೇಕಾಗುತ್ತದೆ ಎಂದರು. ಯುಮ್ಯಾನಿಟ್ ಎಂಬುದು ಈ ಹಿಂದಿನ ಕಾಲದ ಜನತೆಯಲ್ಲಿ ಶೇ.97 ರಷ್ಟು ಇದುದ್ದು ಇಂದಿನ ದಿನಮಾನದಲ್ಲಿ ಶೇ.60 ರಷ್ಟಾಗಿದೆ ಯಾಕೆಂದರೆ ಹಿಂದಿನ ಹಿರಿಯರು ಮಾಡುತ್ತಿದ್ದ ಕೆಲಸಕ್ಕಿಂತ ಇಂದಿನ ಕೆಲಸಗಳು ಕಡಿಮೆಯಾಗಿವೆ ಕಾರಣ ಜನತೆ ಇದನ್ನು ಅರ್ಥೈಸಿಕೊಳ್ಳಬೇಕಾಗಿದೆ ಎಂದರು. ಹಾರ್ಟ್ ಅಟ್ಯಾಕ್ ಎಂಬವುಗಳು ಹೆಚ್ಚಾಗುತ್ತಲಿವೆ ಹಾರ್ಟ್‍ದಲ್ಲಿ ಬ್ಲಾಕ್ ಬರಲು ಕಾರಣವೇನೆಂಬುದರ ಕುರಿತು ತಿಳಿ ಹೇಳಿದ ಅವರು ತಂದಂತ ಬ್ಯಾಡ್ ಹೊರಹಾಕುವಂತಹ ಯುಮ್ಯಾನಿಟ್ ಫಾವರ್ ಇರಲಾರದ್ದೇ ಕಾರಣವಾಗಿದೆ ಎಂದು ಹೇಳಿದ ಡಾ.ರತ್ನಾಕರ ಅವರು ಇಂತಹದ್ದನ್ನು ಹೆಚ್ಚಿಸಿಕೊಳ್ಳಲು ಬಿಸಿ ನೀರು ಕುಡಿಯಬೇಕು ಮಲ ಮೂತ್ರ ಸರಿಯಾಗಿ ಆಗುತ್ತದೆ 84 ಕಾಯಿಲೆಗಳಿಗೆ ಹೊಟ್ಟೆಯೇ ಕಾರಣವಾಗುತ್ತದೆ ಎಂದರು. ಕಂಪ್ಯಾಯ್ ಎನ್ನುವಂತಹದ್ದು ಪರ್ಯಾಯ ಚಿಕೀತ್ಸಾ ವಿಧಾಯವಾಗಿದ್ದು ಈ ಕುರಿತು ಟೆಕ್ನಾಲಾಜಿ ಅನ್ನುವಂತಹದ್ದು ರಕ್ತವನ್ನು ಉತ್ತೇಜನ ಮಾಡಲು ಮಸೀನ್‍ನ್ನು ತಯಾರಿಸಲಾಗಿದೆ ಈ ಮಸೀನದಲ್ಲಿ 30 ನಿಮಿಷದಲ್ಲಿ 30 ಪ್ರೋಗ್ರಾಮ್‍ಗಳನ್ನು ಅಳವಡಿಸಲಾಗಿದ್ದು ಕಂಪೋನಿಯಾ ಅನ್ನುವಂತಹದ್ದು ಮೇಕಿನ್ ಇಂಡಿಯಾದಲ್ಲಿ ತಯಾರಿಸಲಾಗಿದ್ದು ಈ ಮಸೀನ್‍ಗಳನ್ನು 42 ದೇಶಗಳಿಗೆ ಕಳುಹಿಸಿಕೊಡಲಾಗಿದೆ ಎಂದ ಡಾ.ರತ್ನಾಕರ ಅವರು ಆರೋಗ್ಯ ಸುದಾರಣೆ ಮಾಡುವಂತಹ ಈ ಮಸೀನ್ ಪರಿಚಯಿಸಲು ಉಚಿತ ಶಿಬಿರಗಳನ್ನು ಮಾಡುತ್ತಾ ಸಾಗಲಾಗಿದೆ ಎಂದು ಆರೋಗ್ಯವೇ ಭಾಗ್ಯವೆಂಬುದನ್ನು ಜನತೆ ಅರೀತುಕೊಂಡು ನಡೆದರೆ ಜೀವನದಲ್ಲಿ ಯಶಸ್ವಿ ಕಾಣಬಹುದಾಗಿದೆ ಎಂದು ಅನೇಕ ರೋಗಗಳಿಗೆ ಸಲಹೆ ಸೂಚನೆಗಳನ್ನು ಶಿಬಿರಾರ್ಥಿಗಳಿಗೆ ಡಾ.ರತ್ನಾಕರ ಅವರು ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ಔಷಧ ವ್ಯಾಪಾರಸ್ಥರಾದ ರಮೇಶ ಸಾಲಂಕಿ ಅವರು ಮಾತನಾಡಿ ಆಸ್ತಿ ಅಂತಸ್ತು ಗಳಿಸಬಹುದು, ಹಣ ಗಳಿಸಬಹುದು ಆದರ ದೇಹ ಸದೃಡವಾಗಿ ಇಟ್ಟುಕೊಳ್ಳಬೇಕಾದರೆ ಮಾನವನ ಎಲ್ಲ ಅಂಗಾಂಗಗಳು ಸದೃಢವಾಗಿ ಇರುವದು ಅಗತ್ಯ ಆಯಾ ಅವಯವಗಳಿಗೆ ದೊರೆಯುವಂತಹ ರಕ್ತ ಚಲನ ವಲನೆಯು ಸರಿಯಾಗಿ ಇದ್ದರೆ ಮಾನವ ನಿರೋಗಿಯಾಗಿ ಇರಬಲ್ಲಾ ಕಾರಣ ಈ ಹಿಂದಿನ ಕಾಲದ ಇಂದಿನ ಕಾಲದ ಕೆಲಸ ಕಾರ್ಯಗಳ ಬಗ್ಗೆ ಹಾಗೂ ಆಹಾರ ಜೀರ್ಣಿಸಿಕೊಳ್ಳುವಂತಹ ಸ್ತಿತಿಗತಿ ಕುರಿತು ವಿವರಿಸಿದರು.
ಇನ್ನೋರ್ವ ಶಿಬಿರಾರ್ಥಿಯಾದ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಎಚ್.ಬಿ.ಮೇಟಿ ಅವರು ಶಿಬಿರದಲ್ಲಿ ಪಾಲ್ಗೊಂಡು ತಮಗಾದ ಅನುಭವ ಹಂಚಿಕೊಂಡರಲ್ಲದೇ ಉಚಿತ ಆರೋಗ್ಯ ಮಾಹಿತಿ ನೀಡಲು ಕೈಕೊಂಡ ಕಂಪಾನಿಯೋ ಸಂಸ್ಥೆಯ ಕುರಿತು ಮಾಹಿತಿ ನೀಡಿದ ಡಾ.ರತ್ನಾಕರ ಶೆಟ್ಟಿ ಅವರ ಕುರಿತು ಗುಣಗಾನ ಮಾಡಿದರು.
ಶ್ರೀ ಖಾಸ್ಗತೇಶ್ವರ ಮಠದ ವೇ.ವಿಶ್ವನಾಥ ವಿರಕ್ತಮಠ ಅವರು ಸಾನಿದ್ಯ ವಹಿಸಿದ್ದರು.
ಕಂಪಾನಿಯೋ ಸಂಸ್ಥೆಯ ಶಿಬಿರದ ನೇತೃತ್ವ ವಹಿಸಿದ ರಘುಗೌಡ, ಫವನಗೌಡ, ನಾಗರಾಜು ಹುಣಸೇಮನೆ, ಶಿಬಿರಾರ್ಥಿಗಳಾದ ಶಿವಲಿಂಗಪ್ಪ ಪಾಲ್ಕಿ, ಮೋಹನ ಹಜೇರಿ, ಗಂಗಾಧರ ಬಡಿಗೇರ, ಬಸನಗೌಡ ಹೊಸಮನಿ, ಚಂದ್ರಶೇಖರ ಸಜ್ಜನ, ಮಹಾದೇವಿ ಕೇಂಭಾವಿ, ಶೈಲಜಾ ಬಬಲೇಶ್ವರ, ಸರಸ್ವತಿ, ಯಮನಪ್ಪ ಕೆಸರಟ್ಟಿ, ಅವರನ್ನೋಳಗೊಂಡು ನೂರಾರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.