ಕಂಪನಿ ನಾಟಕ ಕಲಾವಿದರ ಸಮ್ಮೇಳನ
 ವಿಭಿನ್ನ ನಾಟಕಗಳ ದೃಶ್ಯಾವಳಿಗಳ ಅನಾವರಣ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಗರದ ರಾಘವ ಕಲಾ ಮಂದಿರದಲ್ಲಿ ನಡೆದಿರುವ ಎರೆಡು ದಿನಗಳ ಕಂಪನಿ ನಾಟಕಗಳ ಕಲಾವಿದರ ಪ್ರಥಮ ರಾಜ್ಯ  ಸಮ್ಮೇಳನದ ಅಂಗವಾಗಿ ನಿನ್ನೆ ಸಂಜೆ ವಿಭಿನ್ನ‌ ನಾಟಕಗಳ  ವಿವಿಧ ದೃಶ್ಯಾವಳಗಳು ನೆರೆದ ಪ್ರೇಕ್ಷಕರ ಮನ ರಂಜಿಸಿದವು.
ಆರಂಭದಲ್ಲಿ ರಾಜ್ಯದ  ಪ್ರಸಿದ್ದ ಕುಮಾರೇಶ್ವರ ನಾಟ್ಯ ಸಂಘದಿಂದ
ಗುರು ತಿಪ್ಪೇರುದ್ರ ಸ್ವಾಮಿ ನಾಟಕದ ದೃಶ್ಯ ಪ್ರದರ್ಶಿಸಲಾಯಿತು. ನಂತರ ಆಶಾಪುರದ ಸಂಗಮೇಶ್ವರ ನಾಟ್ಯ ಸಂಘದ  ಭೀಮವ್ವ ಗುಳೇದ ಗುಡ್ಡ ಇವರಿಂದ ಕಿತ್ತೂರು ರಾಣಿ ಚೆನ್ನಮ್ಮನ ಏಕ ಪಾತ್ರಾಭಿನಯ,  
“ಕುಂಟ ಕೋಣ ಕುರುಡ ಜಾಣ” ಹಾಸ್ಯ ನಾಟಕದ ದೃಶ್ಯ ಗುಬ್ಬಿ ಕಂಪನಿಯ ಕಲಾವಿದರಿಂದ, ಘನಮಠೇಶ್ವರ ನಾಟ್ಯ ಸಂಘದಿಂದ ಪ್ರಾಣ “ಹೋದರೂ ಮಾನ ಬೇಕು” ನಾಟಕದ ದೃಶ್ಯ.
ರಾಣಿಬೆನ್ನೂರಿನ ಮಂಜುನಾಥ ನಾಟ್ಯ ಸಂಘದಿಂದ ತಾಯಿ‌ಕರುಳು ನಾಟಕದ ದೃಶ್ಯ ಸೇರಿದಂತೆ ಹಲವು ನಾಟಕಗಳ ದೃಶ್ಯಾವಳಿಗಳ ಪ್ರದರ್ಶನ ನಡೆಯಿತು.
ಬಹುತೇಕ ದೃಶ್ಯಗಳು ಇನ್ನೂ ಸಾಂಪ್ರದಾಯಿಕ ಶೈಲಿಯಲ್ಲಿಯೇ ಇದ್ದವು. ಅಧುನಿಕತೆಯ ಸ್ಪರ್ಶ ಇರಲಿಲ್ಲ. ಈಗ ಸಿನಿಮಾ, ಮೊಬೈಲ್ ಹಾವಳಿಯಲ್ಲಿ  ಪ್ರೇಕ್ಷಕರನ್ನು ಗೆಲ್ಲಲು ನಾಟಕದ ಪ್ರದರ್ಶನವೂ ವಿಭಿನ್ನವಾಗಿರಬೇಕಿದೆ.