ಕಂಪನಿಗಳಿಂದ ರೈತರ ಜಮೀನು ಒತ್ತುವರಿ: ಸಭೆ ನಡೆಸಿದ ತಹಶಿಲ್ದಾರ

ಚಿಂಚೋಳಿ,ಜು.29- ತಾಲೂಕಿನ ಸುಲೇಪೇಟ್ ಗ್ರಾಮದ ಹತ್ತಿರದ ಸೋಲಾರ್ ಪವರ್ ಪ್ಲಾಂಟ್‍ನ ರಸ್ತೆ ಬಗ್ಗೆ ಜನರು ನೀಡಿದ ದೂರಿನ ಹಿನ್ನಲೆಯಲ್ಲಿ ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರ ಅಧ್ಯಕ್ಷತೆಯಲ್ಲಿ
ಎರಡು ಕಂಪನಿಗಳಿಗೆ ಮತ್ತು ಜನರಿಗೆ ಸ್ಥಳದಲ್ಲೇ ಜನರ ಸಮಸ್ಯೆ ಬಗ್ಗೆ ಕಂಪನಿ ಹತ್ತಿರ ಸ್ಥಳದಲ್ಲೇ ದಾಖಲಾತಿ ಪ್ರಕಾರ ರಸ್ತೆ ನಿರ್ಮಿಸಿಕೊಡಲು ಕಂಪನಿಯವರಿಗೆ ಹೇಳಿದರು.
ಇದೇ ಸಂದರ್ಭದಲ್ಲಿ ರೈತರದ ಮಲ್ಲಿಕಾರ್ಜುನ್ ಅವರು ಮಾತನಾಡಿ ಸುಲೇಪೇಟ್ ಗ್ರಾಮ ಹಾಗೂ ಹೊಸಳ್ಳಿ ಗ್ರಾಮದ ರೈತರು ಸುಮಾರು ವರ್ಷಗಳಿಂದ ಹೋಲಕೆ ಹೋಗುತ್ತಿದ್ದೇವೆ ಆದರೆ ಎರಡು ಕಂಪನಿಯವರು ಒತ್ತುವರಿ ಮಾಡುತ್ತಿದ್ದರಿಂದ ರೈತರಿಗೆ ಬಹಳಷ್ಟು ತೊಂದರೆ ಆಗುತ್ತಿದ್ದು ಒಂದು ವಾರದ ಒಳಗಾಗಿ ಎರಡು ಕಂಪನಿಯವರು ಒತ್ತುವರಿ ಮಾಡಿಕೊಂಡಿರುವ 33 ಅಡಿ ವಿಸ್ತಾರ ಜಾಗವನ್ನು ಮರು ರೈತರಿಗೆ ನೀಡಿ ರೈತರಿಗೆ ಹೊಲಕ್ಕೆ ಹೋಗಲು ಅನುಕೂಲ ಮಾಡಿಕೊಡಬೇಕು ಒಂದು ವೇಳೆ ಒಂದು ವಾರದ ಒಳಗಾಗಿ ಎರಡು ಕಂಪನಿ ಅವರು ರೈತರಿಗೆ ಹೊಲಕ್ಕೆ ಹೋಗಲು ರಸ್ತೆ ಒದಗಿಸಲಿದ್ದರೆ ಮುಂಬರುವ ದಿನಗಳಲ್ಲಿ ಎರಡು ಗ್ರಾಮದ ರೈತರು ಪ್ರತಿಭಟನೆ ಮಾಡಲಾಗುವುದು ಎಂದು ಮಲ್ಲಿಕಾರ್ಜುನ್ ಅವರು ಸಭೆಯಲ್ಲಿ ಹೇಳಿದರು.
ಈ ಸಭೆಯಲ್ಲಿ ಸುಲೇಪೇಟ್ ಪಿಎಸ್‍ಐ ಮತ್ತು ಸುಲೇಪೇಟ್ ಉಪತಹಸೀಲ್ದಾರರು ಭೂದಾಖಲೆಗಳ ಸಹಾಯಕ ನಿರ್ದೇಶಕರು ತಾಲೂಕ ಭೂಮಾಪಕರು ಕಂದಾಯ ನಿರೀಕ್ಷಕರು ಸುಲೇಪೇಟ್ ಗ್ರಾಮ ಲೇಖಪಾಲಕರು ಸುಲೇಪೇಟ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸುಲೇಪೇಟ್ ಮತ್ತು ಸುಲೇಪೇಟ್ ಗ್ರಾಮಸ್ಥರು ಹಾಗೂ ಹೊಸಳ್ಳಿ ಗ್ರಾಮಸ್ಥರು ಸಭೆಯಲ್ಲಿ ಇದ್ದರು.