ಕಂಪನಿಗಳಿಂದ ತಂಬಾಕಿಗೆ ನಿಗದಿತ ದರ ನೀಡದೆ ರೈತರಿಗೆ ಅನ್ಯಾಯ

ಪಿರಿಯಾಪಟ್ಟಣ, ನ.03: ರಾಜ್ಯದಲ್ಲಿ ತಂಬಾಕು ಬೆಳೆಯುವ ರೈತರಿಗೆ ನಿಗದಿತ ದರ ನೀಡದೆ ರೈತರಿಗೆ ಕಂಪನಿಗಳು ಅನ್ಯಾಯ ಮಾಡುತ್ತಿವೆ ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ನೆರವಿಗೆ ಬಾರದೆ ನಿರ್ಲಕ್ಷ್ಯ ವಹಿಸುತ್ತಿವೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲೋಕೇಶ್ ರಾಜ್ ಅರಸ್ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕೋವಿಡ್ 19 ಸಂದರ್ಭ ಇದ್ದರೂ ರೈತರು ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿ ತಂಬಾಕು ಬೆಳೆ ಬೆಳೆದು ಸರಿಯಾದ ದರ ನಿಗದಿ ಮಾಡಿದೆ ರೈತರು ಕಂಗಾಲಾಗಿದ್ದಾರೆ ಕಳೆದ ಸಭೆಯಲ್ಲಿ ರೈತರಿಗೆ ತಂಬಾಕು ಬೆಳೆಗಾರರಿಗೆ ಉತ್ತಮ ಬೆಲೆ ಕೊಡುವುದಾಗಿ ಹೇಳಿದ ಉಸ್ತುವಾರಿ ಸಚಿವರು ಹಾಗೂ ಸಂಸದರ ಪತ್ತೆ ಇಲ್ಲ ಕುಟುಂಬದ ನಿರ್ವಹಣೆಗೆ ತಂಬಾಕು ಹಾಗೂ ಇನ್ನಿತರ ಬೆಳೆಗಳನ್ನು ಬೆಳೆದ ರೈತರಿಗೆ ಯಾವುದೇ ಬೆಲೆಗೂ ಸರಿಯಾದ ರೀತಿಯಲ್ಲಿ ಬೆಲೆ ನೀಡಿಲ್ಲ ಶುಂಠಿ ಜೋಳ ಹಾಗೂ ಇನ್ನಿತರ ಬೆಳೆಗಳ ದರ ಕುಸಿದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ರೈತರು ಸಂಕಷ್ಟದಲ್ಲಿದ್ದರೂ ಸಹ ಉಪಚುನಾವಣೆ ಅವರಿಗೆ ದೊಡ್ಡ ಸವಾಲಾಗಿದೆ ಬಿಜೆಪಿ ಸರ್ಕಾರ ರಾಜೀನಾಮೆ ಪರ್ವ ಮುಂದುವರಿದಿದೆ ರೈತರ ಹಿತ ಕಾಪಾಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಇದೇ ರೀತಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಸಮಸ್ಯೆಗಳು ಹಾಗೂ ಅವರಿಗೆ ಉತ್ತಮ ರೀತಿಯಲ್ಲಿ ದರ ನಿಗದಿ ಮಾಡದೆ ಇದ್ದಲ್ಲಿ ರಾಜ್ಯದ ಎಲ್ಲ ರೈತರ ಒಗ್ಗೂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಮೈಸೂರಿನ ಎಪಿಎಂಸಿ ನಂಜನಗೂಡು ರಸ್ತೆ ತಡೆದು ರಸ್ತೆತಡೆ ಪ್ರತಿಭಟನೆ ಮಾಡಲಾಗುತ್ತಿದೆ.
ತಂಬಾಕು ಬೆಳೆಗಾರರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿರುವ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು 8/11 / 2020 ರಂದು ಮೈಸೂರು ಜಿಲ್ಲೆಯ ತಂಬಾಕು ಬೆಳೆಗಾರರ ಸಭೆಯನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದು ಸಭೆಯಲ್ಲಿ ತೀರ್ಮಾನಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುತ್ತದೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ವಸೂರು ಕುಮಾರ್ ಮಾತನಾಡಿ ಆಂಧ್ರದಲ್ಲಿ ಸಂಕಷ್ಟದಿಂದ ರೈತರು ತೊಂದರೆ ಅನುಭವಿಸುತ್ತಿರುವುದು ಅರಿತು ರೈತರ ತಂಬಾಕಿನಲ್ಲಿ ಶೇಕಡ 35ರಷ್ಟು ತಂಬಾಕನ್ನು ಸರ್ಕಾರವೇ ಖರೀದಿಸಿದೆ ಮೈ ರಾಜ್ಯದಲ್ಲಿ ಸಹ ರೈತರ ತಮ್ಮ ಕಣ್ಣು ಖರೀದಿಸಿ ರೈತರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಹುಣಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮೇಗೌಡ ಗೌರವಾಧ್ಯಕ್ಷ ಕೃಷ್ಣೇಗೌಡ ಪಿರಿಯಾಪಟ್ಟಣ ಘಟಕದ ಅಧ್ಯಕ್ಷ ಶಿವಣ್ಣ ಶೆಟ್ಟಿ ಪದಾಧಿಕಾರಿಗಳಾದ ರಾಜು ಗಣೇಶ್ ಜವರೇಗೌಡ ಈಶ್ವರ ದಸಂಸ ಮುಖಂಡ ರಾಜು ಹಾಜರಿದ್ದರು