ಕಂದು ಮೀನು ಗೂಬೆ ಮಾರುತ್ತಿದ್ದ ಮೂವರ ಬಂಧನ

ಮೈಸೂರು, ನ.21: ಅರಣ್ಯ ಸಂಚಾರಿ ದಳ ಸಿಬ್ಬಂದಿ ಶ್ರೀರಂಗಪಟ್ಟಣ ಬಳಿ ಕಂದು ಮೀನು ಗೂಬೆ ಮಾರುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.
ಮಂಡ್ಯ ನಿವಾಸಿ ಕುಮಾರ್ ಮತ್ತು ಮೊಹಮ್ಮದ್ ರಫಿ ಹಾಗೂ ಮದ್ದೂರಿನ ರಾಜೇಶ್ ಬಂಧಿತರು.
ಗೂಬೆ ಮಾರಾಟದ ಸಂಚಿನ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಡಿಸಿಎಫ್ ಎ.ಟಿ.ಪೂವಯ್ಯ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಆರ್‍ಎಫ್‍ಓ ವಿವೇಕ್, ಡಿಆರ್‍ಎಫ್‍ಒ ಮೋಹನ್, ಸುಂದರ್, ಪ್ರಮೋದ್, ನಾಗರಾಜು ಹಾಗೂ ಸಿಬ್ಬಂದಿ ರವಿಕುಮಾರ್, ರವಿನಂದನ್, ಗೋವಿಂದ ಹಾಗೂ ಚಾಲಕರಾದ ಪುಟ್ಟಸ್ವಾಮಿ, ಮಧು ಪಾಲ್ಗೊಂಡಿದ್ದರು.