ಕಂದಾಯ ನಿರೀಕ್ಷಕರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

ಗುರುಮಠಕಲ್,ಡಿ.5- ತಾಲೂಕ ಸರ್ಕಾರಿ ನೌಕರರ ಸಂಘದ ನೆತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ಕೈಗೊಂಡು, ಬಳ್ಳಾರಿ ಜಿಲ್ಲೆ ಮತ್ತು ತಾಲೂಕಿನ ಕಂದಾಯ ನಿರೀಕ್ಷಕರಾದ ವೆಂಕಟಸ್ವಾಮಿ ಮತ್ತು ಅವರ ಕುಟುಂಬದ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಅಪರಿಚಿತ ವ್ಯಕ್ತಿಗಳ ಗುಂಪು ಕಂದಾಯ ನಿರೀಕ್ಷಕರ ಮನೆಗೆ ನುಗ್ಗಿ ಮಾರಕಾಸ್ತ್ರ ಗಳಿಂದ ಹಲ್ಲೆಮಾಡಿರುವುದು ಖಂಡನೀಯ, ಈ ಪ್ರಕರಣದ ಆರೋಪಿಗಳನ್ನು ಜೈಲಿಗೆ ಹಾಕಬೇಕು ಎಂದು ತಾಹಶೀಲ್ದಾರ ಮುಖಾಂತರ ಮಂತ್ರಿಗಳಿಗಳಿಗೆ ಬೇಡಿಕೆಯ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸ.ನೌ.ಸಂಘದ ತಾಲೂಕ ಅಧ್ಯಕ್ಷರಾದ ಸಂತೋಷ ಕುಮಾರ ನಿರೇಟಿ. ಗೌರವ ಅಧ್ಯಕ್ಷರಾದ ಗೋಪಾಲರೆಡ್ಡಿ.ಖಜಾಂಚಿ ವೆಂಕಟೇಶ್.ಸಂಘಟನ ಕಾರ್ಯದರ್ಶಿ ಪ್ರೇಮರಾಜ.ಕ್ರಿಡಾ ಕಾರ್ಯದರ್ಶಿ ನಾಗೇಶ್.ಜಾನುವಾರು ಅಧಿಕಾರಿ ಕಾಶಿನಾಥ್ ದೊಡ್ಮನಿ.ಆಹಾರ ನಿರೀಕ್ಷಕ ರು ಅನ್ವರ್ ಹುಸೇನ್. ಕಂದಾಯ.ಪುರಸಭೆ ಹಾಗೂ ಇನ್ನಿತರ ಇಲಾಖೆ ಗಳ ಸರ್ಕಾರಿ ನೌಕರರು ಭಾಗವಹಿಸಿದ್ದರು.