ಕಂದಾಯ ದಿನಾಚರಣೆ ಕಾರ್ಯಕ್ರಮ

ಬ್ಯಾಡಗಿ,ಜು4:ಸ್ವಾತಂತ್ರ್ಯ ಪೂರ್ವದಲ್ಲಿಯೇ ಅಸ್ತಿತ್ವದಲ್ಲಿದ್ದ ಕಂದಾಯ ಇಲಾಖೆ ಭಾಷೆಯೇ ಬಾರದ ಬ್ರಿಟೀಷ್ ಅಧಿಕಾರಿಗಳೊಂದಿಗೆ ಸಮನ್ವ ಯದಿಂದ ಜನಸ್ನೇಹಿಯಾಗಿ ದೇಶದ ಅಭಿವೃದ್ಧಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿರುವುದು ಗಿನ್ನಿಸ್ ದಾಖೆಲೆಗೆ ಸಮನಾದ ಸಾಧನೆ ಎಂದು ತಾಪಂ.ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಬಣ್ಣಿಸಿದರು.
ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಕಂದಾಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಅಭಿವೃದ್ಧಿಯಲ್ಲಿ ಕಂದಾಯ ಇಲಾಖೆಯು ತನ್ನದೇ ಆದ ಪಾತ್ರ ವಹಿಸುತ್ತಾ ಬಂದಿದೆ, ಜನ ಸಾಮಾನ್ಯರೊಂದಿಗೆ ನಿಕಟ ಸಂಪರ್ಕ ಹೊಂದುವ ಮತ್ತು ಅವರ ಕ?À್ಟಸುಖಗಳಿಗೆ ಹೆಚ್ಚು ಸ್ಪಂದಿಸುವುದು ಕಂದಾಯ ಇಲಾಖೆಯ ನೌಕರರ ಜವಾಬ್ದಾರಿಯಾಗಿದ್ದು ಆ ನಿಟ್ಟಿನಲ್ಲಿ ಇಲಾಖೆಯ ಸಿಬ್ಬಂದಿ ಇನ್ನ?À್ಟು ಹೊಣೆಗಾರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದರು.
ದೃಷ್ಟಿಕೋನದಲ್ಲಿ ಬದಲಾವಣೆಯಾಗಲಿ:ಕಂದಾಯ ಇಲಾಖೆ ಸ್ವಾತಂತ್ರ್ಯಾನಂತರದಲ್ಲಿ ಅತ್ಯಂತ ನಿರ್ಲಕ್ಷಿತ ಹಾಗೂ ನಿಂದನೆ ಗೊಳಗಾದ ಇಲಾಖೆ ಎಂದರೂ ತಪ್ಪಿಲ್ಲ, ಎಲ್ಲದಕ್ಕೂ ತಹಶೀಲ್ದಾರ ಕಚೇರಿಯ ಸಿಬ್ಬಂದಿಗಳ ಮೇಲೆ ಸವಾರಿ ಮಾಡುವಂತಹ ಕೆಲಸಗಳಾಗುತ್ತಿದೆ ಸಾರ್ವಜನಿಕರು ಇನ್ನಾದರೂ ತಮ್ಮ ವಿಚಾರಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಕಂದಾಯ ಇಲಾಖೆಯ ಸಿಬ್ಬಂದಿಯನ್ನು ನೋಡುವಂತಹ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವಂತೆ ಸಲಹೆ ನೀಡಿದರು.
ಗ್ಲೋಬಲ್ ಸರ್ವೀಸ್: ಅತಿಥಿಯಾಗಿದ್ದ ಎಪಿಎಂಸಿ ಕಾರ್ಯದರ್ಶಿ ಎಚ್.ವೈ.ಸತೀಶ್ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಕಂದಾಯ ಇಲಾಖೆ ಪಾತ್ರ ಪ್ರಮುಖವಾಗಿದ್ದು ಒಂದರ್ಥದಲ್ಲಿ ಗ್ಲೋಬಲ್ ಸರ್ವೀಸ್ ನೀಡುವ ಪಾಲುದಾರಿಕೆ ಸಂಸ್ಥೆಯಿ ದ್ದಂತೆ, ಕುಟುಂಬ ಸಮಾಜ ಸೇರಿದಂತೆ ಇಡೀ ದೇಶದ ಎಲ್ಲಾ ಮಾಹಿತಿಗಳು ಕಂದಾಯ ಇಲಾಖೆಯಲ್ಲಿ ಲಭ್ಯವಾಗಲಿದ್ದು ಗ್ರಾಮ ಲೆಕ್ಕಾಧಿಕಾರಿಗಳಿಗೆ ಹೆಚ್ಚು ಬದ್ಧತೆ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಾಗಬೇಕು ಎಂದರು.
ಅಗ್ರಪಂಕ್ತಿಯಲ್ಲಿರುವ ಜನಸ್ನೇಹಿ ಇಲಾಖೆ:ಅಧ್ಯಕ್ಷತೆ ವಹಿಸಿದ್ದು ತಹಶೀಲ್ದಾರ ಎಸ್.ಎ.ಪ್ರಸಾದ್ ಮಾತನಾಡಿ, ಜನರ ಸಂಕ?À್ಟ ಗಳಿಗೆ ತಕ್ಷಣ ಪ್ರತಿಕ್ರಿಯಿ ಸುವ ಮೂಲಕ ನಿಜವಾದ ಸಂಬಂಧಗಳು ಹೊಂದಿರುವ ಜನಸ್ನೇಹಿ ಇಲಾಖೆಯಾಗಿದೆ, ನಮ್ಮ ಬದ್ಧತೆಯನ್ನು ಪ್ರಶ್ನಿಸಲು ಯಾರಿಂದಲೂ ಸಾಧ್ಯವಿಲ್ಲ ಇಲಾಖೆಯ ಸಿಬ್ಬಂದಿಗಳ ಹಗಲಿರುಳು ನಡೆಸುವ ಶ್ರಮದಿಂದ ಸೇವೆ ಒದಗಿಸುವಲ್ಲಿ ಕಂದಾಯ ಇಲಾಖೆ ಆಗ್ರಪಂಕ್ತಿಯಲ್ಲಿದೆ ಎಂದರು. ಕಂದಾಯ ದಿನಾಚರಣೆ ನಿಮಿತ್ತ ಸಿಬ್ಬಂದಿಗೆ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ವೇದಿಕೆಯಲ್ಲಿ ನೌಕರರ ಸಂಘದ ತಾಲೂಕಾಧ್ಯಕ್ಷ ಎಮ್.ಎಫ್.ಕರಿಯಣ್ಣನವರ, ಶಿರಸ್ತೇದಾರ ಎಸ್.ಎನ್.ಮಲ್ಲಾಡದ, ಎಚ್.ಬಿ.ಹತ್ತಿಮತ್ತೂರ, ನಜೀರ್ ತಹಶೀಲ್ದಾರ್, ಸುಭಾ?ï ಕನ್ನಮ್ಮನವರ, ಗುಂಡಪ್ಪ ಹುಬ್ಬಳ್ಳಿ ಶಬ್ಬೀರ್ ಬಾಗೇವಾಡಿ, ರಾಮ ನಗೌಡ ದ್ಯಾಮನಗೌಡ, ಎಂ.ಸಿ.ಮೇಗಳಮನಿ, ಶೋಭಾ ಅಂಗಡಿ, ರಾಘವೇಂದ್ರ ಕುಲಕರ್ಣಿ, ವೆಂಕಟೇಶ್ ಕುಲಕರ್ಣಿ, ಜಿ. ಜಿ.ಮನಗೂಳಿ, ಮಾಲತೇಶ ಮಡಿವಾಳರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.