ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ

ಹುಮನಾಬಾದ:ನ.25: ತಾಲ್ಲೂಕಿನ ಘಾಟಬೋರಳ ಗ್ರಾಮ ಹಾಗೂ ಪಂಚಾಯತ ವ್ಯಾಪ್ತಿಯ ಗ್ರಾಮಗಳು ಹುಲಸೂರ ತಾಲ್ಲೂಕಕ್ಕೆ ಸೆರ್ವಡೆ ಮಾಡಿದ್ದನು ಹಿಂತೆಗೆದುಕೊಳಬೇಕೆಂದು ಆಗ್ರಹಿಸಿ ಶಾಸಕ ರಾಜಶೇಖರ ಪಾಟೀಲ ಹಾಗೂ ವಿಧಾನ ಪರಿಷತ್ತ ಸದಸ್ಯರಾದ ಚಂದ್ರಶೇಖರ ಪಾಟೀಲ ನೇತ್ರತ್ವದಲ್ಲಿ ನಿಯೊಗವನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಹುಲಸೂರು ತಾಲ್ಲೂಕಿಗೆ ಸೇರ್ಪಡಿಸಿರುವುದರಿಂದ ಹಲವಾರು ನುನ್ಯತೆಗಳು ಇವೆ. ಗ್ರಾಮಸ್ಥರು ಹುಮನಾಬಾದ ತಾಲ್ಲೂಕಿನಲ್ಲಿ ಇರಲು ಆಗ್ರಹಿಸಿದ್ದಾರೆ. ಹುಮನಾಬಾದ ತಾಲ್ಲೂಕ ಕೇಂದ್ರ ಘಾಟಬೋರಳಕ್ಕೆ ಸಮೀಪದಲ್ಲಿದೆ. ಯಥಾಸ್ಥಿತಯಿರಲು ಶಾಸಕ ರಾಜಶೇಖರ ಪಾಟೀಲ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಯರಾಮ ಅವರಿಗೆ ಮನವಿ ಪತ್ರ ಸಲ್ಲಿಸಿ ವಿವರಿಸಿದರು. ಹೋರಾಟ ಸಮಿತಿಯ ಸದಸ್ಯರುಗಳಾದ ಗ್ರಾಮ ಹಿರಿಯರಾದ ರಾಜಕುಮಾರ ಪಾಟೀಲ, ಕಾಗ್ರೇಸ್ ಮುಖಂಡರಾದ ರಂಜೀತ ಮಾನಕಾರೆ, ಜ್ಞಾನೇಶ್ವರ ಬೋಸ್ಲೆ, ಬಸವರಾಜ ಸ್ವಾಮಿ, ವಿಷ್ಣು ಜಮಾದರ, ಅಭಿಮನ್ಯು ನಿರಗುಡಿ, ಒರಮೇಶ್ವರ ಪಾಟೀಲ ನಿಯೋಗದಲ್ಲಿ ಮನವಿ ಪತ್ರ ಸಲ್ಲಿಸುವಾಗ ಉಪಸ್ಥಿತರಿದ್ದರು.