ಕಂದಾಯ ಇಲಾಖೆ ಪ್ರಕರಣ ಇತ್ಯರ್ಥ ವಿಳಂಬ ಅಧಿಕಾರಿ ವಿರುದ್ಧ ಸಚಿವರು ಗರಂ

ರಾಯಚೂರು, ಜ.೧೬- ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕಂದಾಯ ಇಲಾಖೆ ಪ್ರಕರಣಗಳನ್ನು ಇತ್ಯಾರ್ಥಗೊಳಿಸದೆ ವಿಳಂಬ ಹಾಗೂ ಬೇಜವಾಬ್ದಾರಿದಿಂದ ವರ್ತಿಸಿರುವ ಅಧಿಕಾರಿಗಳಿಗೆ ಕಂದಾಯ ಸಚಿವರು ತೀವ್ರ ತರಾಟೆಗೆ ತೆಗೆದುಕೊಂಡ ಇಂದು ನಡೆಯಿತು.
ಅವರಿಂದು ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪ್ರಗತಿಪರಿಶೀಲನೆ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರಗೌಡ ಅವರನ್ನು ಗರಂ ಆಗುವಂತೆ ಮಾಡಿತು.
ಹಿಂದಿನ ಸರಕಾರ ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂದು ಜನರು ಸರಕಾರ ಬದಲಾವಣೆ ಮಾಡಿದ್ದಾರೆ. ಜನರು ಅಭಿವೃದ್ಧಿ ಮತ್ತು ಬದಲಾವಣೆ ಬಯಸಿದ್ದಾರೆ. ಆದರೆ ಜಿಲ್ಲೆಯ ಜನರ ಪ್ರಮುಖ ಸಮಸ್ಯೆಗಳಲ್ಲಿ ಕಂದಾಯ ಇಲಾಖೆ ಸಮಸ್ಯೆಗಳು ಅಧಿಕವಾಗಿದೆ. ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ, ಜಿಲ್ಲಾಮಟ್ಟದ ಅಧಿಕಾರಿಗಳು ಒಗ್ಗೂಡಿ ಕಂದಾಯ ಇಲಾಖೆಯ ಕೆಲಸ ಕಾರ್ಯ ಮುತುವರ್ಜಿವಹಿಸಿ ಮಾಡಬೇಕು. ನಾವು ಹಿಂದಿನ ಸರಕಾರದಂತೆ ಕೆಲಸ ನಿರ್ವಹಿಸಿದರೆ ಹೇಗೆ ಜನರಿಂದ ವಿಶ್ವಾಸ ಕಳೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ರಾಯಚೂರು ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳು ತಾಂಡವಾಡುತ್ತಿದೆ. ಅಧಿಕಾರಿಗಳು ಉದ್ದೇಶಪೂರ್ವಕ ಮತ್ತು ನಿರ್ಲಕ್ಷದಿಂದ ಸಮಸ್ಯೆಗಳಿಗೆ ಪರಿಹಾರ ದೊರೆತ್ತಿಲ್ಲ. ಜನರು ಕಚೇರಿಗೆ ಅಲೆದಾಡದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಡಿಸಿ ನಡೆ ಹಳ್ಳಿ ಕಡೆ ಎಂಬುದು ಜಾತ್ರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಡಿಸಿ ನಡೆಯಿಂದ ಸಮಸ್ಯೆಗಳು ಪರಿಹಾರ ದೊರೆತ್ತಿಲ್ಲ ಎಂದರು. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಸೂಚನೆ ನೀಡಿದರು. ಸರಕಾರ ಅಧಿಕಾರ ಬಂದ ಮೂರು ತಿಂಗಳ ಅವಧಿಯಲ್ಲಿ ಕಂದಾಯ ಇಲಾಖೆಯಲ್ಲಿ ಒಂದು ವರ್ಷಕ್ಕಿಂತ ಅಧಿಕ ಬಾಕಿ ಇರುವ ಒಟ್ಟು ೨೨೧೫ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ.
ಡಿಸಿ ಸಿಇಒ ಜಂಟಿ ನಿರ್ದೇಶನದಲ್ಲಿ ನೀರಿನ ಟ್ಯಾಂಕರ್ ಬಾಕಿ ಇರುವ ಅನುದಾನ ೧೫ ದಿನಗಳಲ್ಲಿ ಪಾವತಿ ಮಾಡಬೇಕು.
ಜಿಲ್ಲೆಯ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ ಎಂದು ದೂರು ಬಂದ ೨೪/೭ ಗಂಟೆಯಲ್ಲಿ ನೀರಿನ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಸೇರಿದಂತೆ ಉಪಸ್ಥಿತರಿದ್ದರು.