ಕಂದಹಾರ್‌ನಲ್ಲಿ ಕಾರ್ ಬಾಂಬ್ ಸ್ಫೋಟ 4 ಸಾವು

ಕಾಬೂಲ್, ನ ೯ -ಅಫ್ಘಾನಿಸ್ತಾನದ ಎರಡನೇ ಅತಿದೊಡ್ಡ ನಗರ ಕಂದಹಾರ್‌ನಲ್ಲಿ ಕಾರ್ ಬಾಂಬ್ ಸ್ಫೋಟಗೊಂಡು ಕನಿಷ್ಟ ೪ ಜನರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ ನಾಗರಿಕರು ಸೇರಿದಂತೆ ಇತರೆ ಹಲವು ಮಂದಿ ಗಾಯಗೊಂಡಿದ್ದಾರೆ. ಎಂದು ಸ್ಥಳೀಯ ಮೂಲಗಳು ತಿಳಿಸಿವೆ.ಕಂದಹಾರ್‌ನ ಮೈವಾಂಡ್ ಜಿಲ್ಲೆಯ ಶಹರಾ ಬೆಟಾಲಿಯನ್ ಅನ್ನು ಗುರಿಯಾಗಿಸಿಕೊಂಡು ತಡರಾತ್ರಿ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಸ್ಫೋಟದಲ್ಲಿ ೧೩ ಪೊಲೀಸ್ ಅಧಿಕಾರಿಗಳು ಮತ್ತು ೧೧ ನಾಗರಿಕರು ಸೇರಿದಂತೆ ಒಟ್ಟು ೨೪ ಜನರು ಗಾಯಗೊಂಡಿದ್ದಾರೆ ಎಂದು ಕಂದಹಾರ್‌ನ ಮಿರ್ವಾಯಿಸ್ ಆಸ್ಪತ್ರೆಯ ಮೂಲಗಳು ಹೇಳಿವೆ.
ಒಂದು ಮಗು, ಇಬ್ಬರು ಮಹಿಳೆಯರು ಮೃತಪಟ್ಟವರಲ್ಲಿ ಸೇರಿದ್ದಾರೆ. ಸ್ಫೋಟದಿಂದ ಹಲವು ಅಂಗಡಿಗಳು ಮತ್ತು ಮನೆಗಳಿಗೆ ಹಾನಿಯಾಗಿದೆ ಈ ದಾಳಿಯಲ್ಲಿ ಮೂವರು ಸೈನಿಕರು ಸಹ ಗಾಯಗೊಂಡಿದ್ದಾರೆ ಎಂದೂ ಕಂದಹಾರ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ