“ಕಂದನಿಂದ ಕಥೆ” – ಬಹುಮಾನ ವಿತರಣೆ

ಕಲಬುರಗಿ:ಡಿ.25:ಪ್ರಜ್ಞಾ ದಿ ಇನ್ಸ್ ಟ್ಯೂಟ್ ಆಫ್ ಇನ್ನೋವೇಟೀವ್ ಲರ್ನಿಂಗ್ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಾ.ಶಿ.ಇ. ಕಲಬುರಗಿ ವತಿಯಿಂದ ಪ್ರಸ್ತುತ ಮಕ್ಕಳಲ್ಲಿ ಕಥೆಯ ಬಗ್ಗೆ ಆಸಕ್ತಿ ಬೆಳೆಸಲು ಮಕ್ಕಳು ಮನೆಯಲ್ಲಿಯೇ ಇರುವ ಈ ಸಮಯವನ್ನು ಸದೂಪಯೋಗ ಪಡಿಸಿಕೊಳ್ಳಲು “ಕಂದನಿಂದ ಕಥೆ” ಕಂದ ಕಥೆ ಹೇಳು, ಬಹುಮಾನ ಗೆಲ್ಲು. ಎನ್ನುವ ವಿಶೇಷ ಸ್ಪರ್ಧೆಯೊಂದನ್ನು ಹಮ್ಮಿಕೊಂಡಿತ್ತು.

ಈ ಕಾರ್ಯಕ್ರಮದ ಬಹುಮಾನ ವಿತರಣೆ ಕಾರ್ಯಕ್ರಮ ನಾಳೆ ಸಂಜೆ 4:30ಕ್ಕೆ ನಡೆಯಲಿದೆ. ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಸುರೇಶಕುಮಾರ .ಎಸ್. ಉದ್ಘಾಟಿಸಲಿದ್ದಾರೆ. ಕಲಬುರಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಇಲಾಖೆಯ ಉಪನಿರ್ದೇಶಕರಾದ ಶಾಂತಗೌಡ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ವಿಷಯ ಮಂಡನೆಕಾರರಾಗಿ ಮೌನೇಶ ನಾಲ್ಕಮನಿ ಮತ್ತು ಮಾಹಾಂತೇಶ ಮುಖ್ಯ ಅಥಿತಿಗಳಾಗಿ ಸಿ.ಎಸ್.ಮುಧೋಳ , ಚಂದ್ರಶೇಖರ ಕೌಲಗಾ, ಶಂಕರ ಅರುಣಿ, ಲಕ್ಷ್ಮಿಕಾಂತ ಕುಲಕರ್ಣಿ, ಚಿದಂಬರ ಕಾಶಿನಾಥ ಎಚ್ ಮರತೂರ. ಭಾಗವಹಿಸಲಿದ್ದಾರೆ.

ಇದರಲ್ಲಿ 6 ರಿಂದ 16 ವರ್ಷದೊಳಗಿನ ಕರ್ನಾಟಕದ ಒಟ್ಟು 25 ಜಿಲ್ಲೆಗಳಿಂದ 121 ಮಕ್ಕಳು ಭಾಗವಹಿದ್ದರು. ಅವರಿಗೆ ಬಹುಮಾನ ವಿತರಣೆಯನ್ನು ಮಾಡಲಾಗುವುದು ಎಂದು ಪ್ರಜ್ಞಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಕೆ.ಎಂ.ವಿಶ್ವನಾಥ ಮರತೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ಸಂಪರ್ಕಿಸಿ 9686714046

ಕಾರ್ಯಕ್ರಮದಲ್ಲಿ ಭಾಗವಹಿಸಲು ಲಿಂಕ್: APï: https://meet.google.com/nxg-xipg-ypm