ಕಂದನಿಂದ ಕಥೆ ಒಂದು ವಿಶೇಷವಾದ ಕಾರ್ಯಕ್ರಮ : ಶಾಂತಗೌಡ ಪಾಟೀಲ

ಕಲಬುರಗಿ :ಡಿ.27:ಪ್ರಜ್ಞಾ ದಿ ಇನ್ಸ್ ಟ್ಯೂಟ್ ಆಫ್ ಇನ್ನೋವೇಟೀವ್ ಲರ್ನಿಂಗ್ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಾ.ಶಿ.ಇ. ಕಲಬುರಗಿ ವತಿಯಿಂದ ಪ್ರಸ್ತುತ ಮಕ್ಕಳಲ್ಲಿ ಕಥೆಯ ಬಗ್ಗೆ ಆಸಕ್ತಿ ಬೆಳೆಸಲು ಮಕ್ಕಳು ಮನೆಯಲ್ಲಿಯೇ ಇರುವ ಈ ಸಮಯವನ್ನು ಸದೂಪಯೋಗ ಪಡಿಸಿಕೊಳ್ಳಲು “ಕಂದನಿಂದ ಕಥೆ” ಕಂದ ಕಥೆ ಹೇಳು, ಬಹುಮಾನ ಗೆಲ್ಲು. ಎನ್ನುವ ವಿಶೇಷ ಸ್ಪರ್ಧೆಯೊಂದನ್ನು ಹಮ್ಮಿಕೊಂಡಿತ್ತು.

ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಉಪನಿರ್ದೇಶಕರಾದ ಶಾಂತಗೌಡ ಪಾಟೀಲ್ ಅವರು ಪ್ರಜ್ಞಾ ಸಂಸ್ಥೆಯು ಉತ್ತಮವಾದ ಕೆಲಸ ಮಾಡುತ್ತಿದೆ. ಇಲಾಖೆಯ ಜೊತೆಗೆ ಸಹಕಾರಯುತವಾದ ವಿಷಯ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಮಕ್ಕಳಲ್ಲಿ ಅಡಗಿರುವ ಸೂಪ್ತ ಶಕ್ತಿಯನ್ನು ಹೊರಹಾಕಲು ಪ್ರಯತ್ನ ಮಾಡುತ್ತಿದೆ. ಪ್ರಸ್ತುತ ಕಂದನಿಂದ ಕಥೆ ಕಾರ್ಯಕ್ರಮವು ಇಡಿ ರಾಜ್ಯದ 25 ಜಿಲ್ಲೆಗಳ 121 ಮಕ್ಕಳಿಗೆ ತಲುಪಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಇಂತಹ ವಿಶೇಷ ಸ್ಪರ್ಧೆಯ ಮೂಲಕ ಮಕ್ಕಳಿಗೆ ವೇದಿಕೆ ಒದಗಿಸುವ ಮೂಲಕ ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಮುಖ್ಯ ಅಥಿತಿಗಳಾಗಿ ಮಾತನಾಡಿದ ಸಹಾಯಕ ನಿರ್ದೇಶಕರಾದ ಸಿ.ಎಸ್.ಮುದೋಳ ಅವರು ಪ್ರಜ್ಞಾ ಸಂಸ್ಥೆ ನಡೆಸಿದ ಕಂದನಿಂದ ಕಥೆ ಕಾರ್ಯಕ್ರಮವು ಅತ್ಯಂತ ಉತ್ತಮವಾಗಿದೆ. ಮಕ್ಕಳು ಕಥೆಯ ಮೂಲಕ ಕಲಿಕೆ ಮುಂದುವರೆಸುತ್ತಾರೆ. ಕಲಿಕೆ ಎಂಬುವುದು ನಿರಂತರವಾದ ಪ್ರಕ್ರಿಯೆ, ಕಥೆಗಳು ನಗರದ ಮಕ್ಕಳಲ್ಲಿ ಕಾಣೆಯಾಗುತ್ತಿದೆ ಇಂತಹ ಸಂದರ್ಭದಲ್ಲಿ ಕಥೆಗಳಲ್ಲಿ ನಾವೆಲ್ಲರೂ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಮಾಡುವುದು ಅವಶ್ಯಕತೆಯಿದೆ. ಪ್ರಜ್ಞಾ ಸಂಸ್ಥೆಯು ಮಕ್ಕಳಲ್ಲಿ ಕಥೆಯ ಆಸಕ್ತಿ ಮೂಡಿಸುವುದರ ಜೊತೆಗೆ ಮಕ್ಕಳಿಗೆ ವೇದಿಕೆ ಒದಗಿಸಿ ಕೊಡುತ್ತಿದೆ ಇನ್ನಷ್ಟು ಉತ್ತಮಾದ ಕೆಲಸಗಳನ್ನು ಮಾಡಲಿ ಎಂದರು.

ಮುಖ್ಯ ಅಥಿತಿಗಳಾಗಿ ಮಾತನಾಡಿದ ಹಿರಿಯ ಪತ್ರಕರ್ತ ಲಕ್ಷ್ಮಿಕಾಂತ ಕುಲಕರ್ಣಿ ಮಕ್ಕಳು ನಮ್ಮ ಎದುರಿನ ಮಹತ್ವದ ಪ್ರತಿಭೆಗಳು, ಮಕ್ಕಳು ಕಥೆಗಳೆಂದರೆ ನನಗೆ ಇಷ್ಟ, ನಾವೆಲ್ಲರೂ ಮಕ್ಕಳ ಕಥೆಗಳನ್ನು ಕೇಳಿ ಬೆಳೆದಿದ್ದೇವೆ. ಇಂದಿನ ದಿನಮಾನಗಳಲ್ಲಿ ಮಕ್ಕಳಲ್ಲಿರುವ ಕಥೆಗಳನ್ನು ಕಂದನಿಂದ ಕಥೆ ಕಾರ್ಯಕ್ರಮ ಹೊರಹಾಕುತ್ತಿದೆ. ಪ್ರಜ್ಞಾ ಸಂಸ್ಥೆಯು ಇಂತಹ ಉತ್ತಮವಾದ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಶಿನಾಥ ಎಚ್ ಮರತೂರ ನಮ್ಮ ಸಂಸ್ಥೆಯು ಇಲ್ಲಿಯವರೆಗೂ ಕೌನ ಬನೇಗಾ ಜ್ಞಾನಪತಿ, ಸಾಧಕರೊಂದಿಗೆ ಸಾವಿರದ ಮಾತುಗಳು, ಶಿಕ್ಷಕರೊಂದಿಗೆ ಸಂವಾದ, ಮಕ್ಕಳಿಗಾಗಿ ಭಾಷಣ ಕಲೆ ಹೀಗೆ ಹತ್ತು ಹಲವು ವಿಶಿಷ್ಠ ಕಾರ್ಯಕ್ರಮಗಳನ್ನು ಮಾಡಿದೆ ಮುಂದೆಯೂ ಇನ್ನಷ್ಟು ಹೊಸ ಕೆಲಸಗಳನ್ನು ಮಾಡಲಿದೆ ಎಂದರು.

ಕಾರ್ಯನಿರ್ವಾಹಕ ನಿರ್ದೇಶಕರಾದ ಕೆ.ಎಂ.ವಿಶ್ವನಾಥ ಮರತೂರ ಮಾತನಾಡಿ ಕಂದನಿಂದ ಕಥೆ ಕಾರ್ಯಕ್ರಮವು ರಾಜ್ಯದ 25 ಜಿಲ್ಲೆಗಳ 121 ಮಕ್ಕಳಿಗೆ ತಲುಪಿದೆ. ಪ್ರತಿ ಮಗುವು ಅತ್ಯಂತ ವಿಶೇಷವಾದ ಕೌಶಲ್ಯಗಳ ಮೂಲಕ ಕಥೆಯನ್ನು ಹೇಳಿದೆ. ಕಥೆಯ ಆಯಾಮಗಳನ್ನು ಇಟ್ಟುಕೊಂಡು ಕಥೆಯನ್ನು ಹೇಳಿದ್ದಾರೆ. ಪ್ರಜ್ಞಾ ಸಂಸ್ಥೆಯು ನಡೆಸಿದ ಈ ಕಾರ್ಯಕ್ರಮಕ್ಕೆ ಪಾಲಕರ ಸ್ಪಂದನೆ ಅತ್ಯಂತ ಅದ್ಭುತವಾಗಿತ್ತು, ಮಕ್ಕಳಿಗಾಗಿ ನಾವೆಲ್ಲರೂ ನಮ್ಮ ಸಮಯವನ್ನು ಮೀಸಲಿಡೋಣ, ಮಕ್ಕಳಿಗೆ ಮನೆಯಲ್ಲಿ ಕಥೆಗಳನ್ನು ಕೇಳಿಸಿಕೊಳ್ಳುವ ಹಾಗೂ ಕಥೆಯನ್ನು ಹೇಳುವ ಪ್ರಕ್ರಿಯೆಯನ್ನು ಮುಂದುವರೆಸೋಣ ಎಂದು ಹೇಳಿದರು.

ಮುಖ್ಯ ವಿಷಯ ಮಂಡನೆ ಮಾಡಿದ ಮಾಹಾಂತೇಶ ಅವರು ಮಕ್ಕಳ ಕಥೆಗಳು ಶಿಕ್ಷಣದಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಕಥೆಗಳ ಮೂಲಕ ಮಕ್ಕಳಲ್ಲಿ ಭಾಷೆಯ ಸ್ವಾಮಿತ್ಯ ಬೆಳೆಯುತ್ತದೆ. ಕನ್ನಡವನ್ನು ಕಲಿಯುವ ಮಾರ್ಗವಾಗಿಯೂ ಕಥೆಗಳು ಕೆಲಸ ಮಾಡುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಚಂದ್ರಶೇಖರ ಕೌಲಗಾ, ಶಂಕರ ಅರುಣಿ, ಚಿದಂಬರ ಪ್ರಸಾದ, ಹಾಗೂ 100ಕ್ಕೂ ಹೆಚ್ಚು ಪಾಲಕರು ಭಾಗವಹಿಸಿದ್ದರು.

ಇದರಲ್ಲಿ 6 ರಿಂದ 16 ವರ್ಷದೊಳಗಿನ ಕರ್ನಾಟಕದ ಒಟ್ಟು 25 ಜಿಲ್ಲೆಗಳಿಂದ 121 ಮಕ್ಕಳು ಭಾಗವಹಿದ್ದರು.

ಬಹುಮಾನದ ಪಡೆದ ವಿವರಣೆ

ಪ್ರಥಮ ಬಹುಮಾನ : ಸಿಂಚನ ಎಸ್ ಶಂಕರ್ ತಂದೆ ಬಿ.ಎಸ್.ಶಂಕರ್ – ಜಯನಗರ ಬೆಂಗಳೂರು

ದ್ವಿತೀಯ ಬಹುಮಾನ : ಸುಜಲಾ ವಿನಾಯಕ ಹೆಗಡೆ ತಂದೆ ವಿನಾಯಕ ರಾಮಚಂದ್ರ ಹೆಗಡೆ ಉತ್ತರ ಕನ್ನಡ

11 ಮಕ್ಕಳು ಸಮಾಧನಕರ ಬಹುಮಾನ ಪಡೆದರು. : ಶ್ರೀರಕ್ಷಾ ಶ್ರೀಧರ ಹೆಗಡೆ , ನಿವೇದಿತಾ ತಂದೆ ಹಣಮಂತ, ಪ್ರಜ್ಞಾ ಸಿ ತಂದೆ ಗಂಗಾಧರ , ವರ್ಷಿಣಿ ತಂದೆ ರವಿ ಎಚ್ ಎಸ್, ಅದಿತಿ ಕುಲಕರ್ಣಿ ತಂದೆ ಡಾ.ಶ್ರೀಕಾಂತ ಕುಲಕರ್ಣಿ , ಮಾನಸ್ವಿ ಎ. ತಂದೆ ಅಜಯ ಎಂ.ಪಿ., ಸಮೃದ್ಧಿ ಎಸ್ ಮೊಗವೀರ ತಂದೆ ಶ್ರೀಧರ ಮೊಗವೀರ ಕುಂದಾಪುರ, ಅದಿತಿ ಲೀಲಾಧರ ಮೊಗೇರ ತಂದೆ ಶ್ರೀ ಲೀಲಾಧರ, ನಾರಾಯಣ ಮೊಗೇರ ಭಟ್ಕಳ, ರಿತಿ ಪನ್ನಗ ಮೈಸೂರ, ಕಾವೇರಿ ತಂದೆ ಅಂಜಪ್ಪ ಗುರುಮಿಠಕಲ್, ಸ್ಪೂರ್ತಿ ಸುರೇಶ್