
ಕಲಬುರಗಿ,ಏ.18:ಜಿಲ್ಲೆಯ ಕಾಳಗಿ ತಾಲ್ಲೂಕಿನ ಕಂದಗೋಳ ಗ್ರಾಮದ ಆರಾಧ್ಯದೈವ ವೀರಭದ್ರೇಶ್ವರ ಜಾತ್ರೆಯು ಸೋಮವಾರ ಅಗ್ನಿ ಪ್ರವೇಶ,ಭವ್ಯ ರಥೋತ್ಸವ ಜರುಗಿತು. ರಾತ್ರಿ ಮನೆ ಗೆದ್ದ ಮಾನವತಿ ಅರ್ಥಾತ್ ಸತ್ಯ ಸತ್ತಿಲ್ಲ ಎಂಬ ಕೌಟುಂಬಿಕ ನಾಟಕÀ ಕಾರ್ಯಕ್ರಮದ ಸಾನಿಧ್ಯವಹಿಸಿದ ರಟಕಲ್ ವಿರಕ್ತ ಮಠ ಪೂಜ್ಯ ಸಿದ್ದರಾಮ ಸ್ವಾಮಿ ಅವರು ಉದ್ಘಾಟಸಿ ಮಾತನಾಡುತ್ತಾ ಈ ನಾಟಕÀ ದಿವಾಕರ್ ಎಸ್ ಜೋಶಿ ಅವರು ಬಹಳ ಅರ್ಥಪೂರ್ಣವಾಗಿ ರಚಿಸಿದ್ದಾರೆ.
ಕಂದಗೋಳ ಶ್ರೀ ವೀರಭದ್ರೇಶ್ವರ ನಾಟ್ಯ ಸಂಘದವರು ಅಧ್ಯಕ್ಷ ಗುರುಬಾದನ ಅವರು ಮಾಲೀಕರಾದ ಮಂಜುಗೌಡ ಕಂದಗೋಳ ಅವರು ಹಗಲಿ ಇರಳು ಶ್ರಮಿಸಿ ಜಾತ್ರೆ ನಿಮಿತ್ತ ಆಯೋಜಿಸಿದ್ದಾರೆ. ನಾಟಕವನ್ನು ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ವೀಕ್ಷಿಸಿ ಕಲಾವಿದರಿಗೆ ಪ್ರೋತ್ಸಾಹಿಸಬೇಕೆಂದು ನುಡಿದರು. ಈ ನಾಟಕದಿಂದ ನೀತಿ ಪಾಠ ಕಲಿತು ನಿಮ್ಮ ಬಾಳನ್ನು ಸುಂದರವಾಗಿಸಿಕೊಳ್ಳಿ ಎಂದು ಹೇಳಿದರು.
ರಂಗ ಭೂಮಿ ಪೂಜೆ ಜರುಗಿತು. ಮುಂತಾದ ಗಣ್ಯರಿಗೆ ಸನ್ಮಾನಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಏ. 17,18 ಮತ್ತು19 ರಂದು ಪ್ರತಿ ದಿನ ರಾತ್ರಿ 10 ಗಂಟೆಗೆÀ ನಾಟಕ ಪ್ರದರ್ಶನ ನಡೆಯಲಿದೆ. ಶ್ರೀ ಗುರು ಸಂಗೀತ ಕಲಾ ಬಳಗದವರಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಂದಗೋಳ ಹಾಗೂ ಸುತ್ತಮುತ್ತಲಿನ ಗ್ರಾಮದವರು ಹಿರಿಯರು, ಮಹಿಳೆಯರು, ಮಕ್ಕಳು ಕುಟುಂಬ ಸಮೇತ ಬಂದು ನಾಟಕ ನೋಡಿ ಆನಂದಿಸಿದರು.