ಕಂದಕ್ಕೆ ಟ್ರಕ್ ಉರುಳಿ 10 ಯಾತ್ರಾರ್ಥಿಗಳ ಸಾವು: 30 ಮಂದಿಗೆ ಗಾಯ

ಲಕ್ನೋ,ಏ.10- ಯಾತ್ರಾರ್ಥಿಗಳ ಬಸ್ ಕಂದಕ್ಕೆ ಉರುಳಿ 10 ಸಾವನ್ನಪ್ಪಿ, ಕನಿಷ್ಠ 30 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಇತವಾ ಬಳಿ ನಡೆದಿದೆ‌

ಆಗ್ರಾದಿಂದ ವಾಪ್ಪಾಸಾಗುವ ಸಮಯದಲ್ಲಿ ಬದೇ ಪುರ್ ಬಳಿ 30ಅಡಿ ಆಳದ ಕಂದಕ್ಕೆ ಉರುಳಿ ಈ ಘಟನೆ ನಡೆದಿದೆ‌

ಲಖಾನಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ವಾಪ್ಪಾಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.ಭಕ್ತಾಧಿಗಳನ್ನು ಪಿನಾಹತ ಗ್ರಾಮದವರು ಎಂದು ತಿಳಿದು ಬಂದಿದೆ.

ಮೃತಪಟ್ಟವರ ಪೈಕಿ ಮಹಿಳೆಯರು ಮಕ್ಕಳು ಇದ್ದಾರೆ.ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ‌

ಸ್ಥಳಿಯರ ಸಹಕಾರದೊಂದಿಗೆ ಕಂದಕದಿಂದ ಬಸ್ ಹೊರತೆಗೆಡದು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲಿರಕ್ಷಣಾ ಕಾರ್ಯ ಭರದಿಂದ ಸಾಗಿದೆ.ಗಾಯಗೊಂಡವರ ಪೈಕಿ ಇನ್ನೂ ಅನೇಕ ಮಂದಿ ಗಂಭೀರ ಗಾಯಗೊಂಡಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅಂದಾಜು ಮಾಡಲಾಗಿದೆ.

ಬಾಕ್ಸ್

ಮೃತ ಕುಟುಂಬಕ್ಕೆ 2 ಲಕ್ಷ ಪರಿಹಾರ

ಟ್ರಕ್ ದುರಂತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತ ಕುಟುಂಬಕ್ಕೆ ತಲಾ ಎರಡು ಲಕ್ಷ ಪರಿಹಾರ ಪ್ರಕಟಿಸಿದ್ದಾರೆ‌

ಗಾಯಗೊಂಡವರಿಗೆ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.