ಕಂದಕಕ್ಕೆ ಉರುಳಿದ ಬಸ್: ಪ್ರಯಾಣಿಕರಿಗೆ ಗಾಯ

ರಾಮದುರ್ಗ,ಮೇ25 : ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕನ ನಿಯಂತ್ರಣ ತಪ್ಪಿ ಘಾಟದಲ್ಲಿ ರಸ್ತೆಗೆ ಬದಿಗೆ ಚಲಿಸಿ ಚಾಲಕ ಸೇರಿ, ನಿರ್ವಾಹಕ ಸೇರಿ 11 ಜನರು ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ತಾಲೂಕಿನ ಮುಳ್ಳೂರ ಘಾಟದಲ್ಲಿ ನಡೆದಿದೆ.
ಜಮಖಂಡಿ ಸಾರಿಗೆ ಘಟಕಕ್ಕೆ ಸೇರಿದ್ದ ಬಸ್ ಧಾರವಾಡ ದಿಂದ ಜಮಖಂಡಿಗೆ ತೆರಳುತ್ತಿದ್ದ ವೇಳೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ತಾಲೂಕಿನ ಮುಳ್ಳೂರ ಘಾಟದಲ್ಲಿ ನೂತನ ರಸ್ತೆಯಲ್ಲಿ ರಾಮದುರ್ಗದತ್ತ ಹೋಗುವ ಸಂದರ್ಭದಲ್ಲಿ ಘಾಟದಲ್ಲಿ ಬಸ್‍ನ ಸ್ಟೇರಿಂಗ್ ಲಾಕ್ ಆದಪರಿಣಾಮ ರಸ್ತೆಯ ಬದಿ ಕಂದಕಕ್ಕೆ ಉರುಳಿದೆ. ಬಸ್‍ನಲ್ಲಿದ್ದ ಸುಮಾರು 11 ಜನರಿಗೆ ಸಣ್ಣ ಪುಟ್ಟಗಾಯಗಳಾಗಿದ್ದು ರಾಮದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಪ್ರಯಾಣಿಕರು ತೆರಳಿದರು ಎಂದು ತಿಳಿದು ಬಂದಿದೆ. ಅದೃಷ್ಟಾವಶಾತ ಯಾವದೇ ಪ್ರಾಣ ಹಾನಿಯಾಗಿರುವದಿಲ್ಲ. ಪ್ರಕರಣ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ನಡೆದಿದೆ.