ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 12 :- ಚುನಾವಣಾ ಸಂದರ್ಭದಲ್ಲಿ ಕಾಂಗ್ರೇಸ್ ನೀಡಿದ ಘೋಷಣ ಗ್ಯಾರಂಟಿಗಳಲ್ಲಿ ಒಂದಾಗಿರುವ ಶಕ್ತಿಯೋಜನೆಗೆ ನಿನ್ನೆ ರಾಜ್ಯಾದ್ಯಾoತ ಮಹಿಳೆಯರ ಉಚಿತ ಪ್ರಯಾಣಕ್ಕೆ ಸರ್ಕಾರದ ಸಿಎಂ ಸಿದ್ದರಾಮಯ್ಯಚಾಲನೆ ನೀಡಿದಂತೆ ಆಯಾ ಕ್ಷೇತ್ರದ ಶಾಸಕರು ಆಯಾ ಸಾರಿಗೆ ಸಂಸ್ಥೆ ಘಟಕದ ನಿಲ್ದಾಣದಲ್ಲಿ ಚಾಲನೆ ಮಾಡಲಾಗಿ ಕೂಡ್ಲಿಗಿ ಕ್ಷೇತ್ರದ ಶಾಸಕ ಕಣ್ಣಿನ ಡಾಕ್ಟರ್ ಸಾರಿಗೆ ಸಂಸ್ಥೆಯ ಮಿಷೆನ್ ಹಿಡಿದು ಕಂಡಕ್ಟರ್ ಆಗಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಟಿಕೇಟ್ ನೀಡುವ ಮೂಲಕ ಶಕ್ತಿ ಯೋಜನೆಗೆ ಚಾಲನೆ ನೀಡಿದರು.
ಅದಕ್ಕೂ ಮೊದಲು ವೇದಿಕೆ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡುತ್ತ ರಾಜ್ಯದ ಕಾಂಗ್ರೇಸ್ ಆಡಳಿತ ನಡೆಸುವ ಸರ್ಕಾರ ನುಡಿದಂತೆ ನಡೆಯಲಿದೆ ಎನ್ನುವುದಕ್ಕೆ ಅಂದು ನುಡಿದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ಒಂದನ್ನು ಕಾರ್ಯರೂಪಕ್ಕೆ ತಂದು ತೋರಿಸಿ ಬೇರೆ ಪಕ್ಷದವರು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ್ದೇವೆ ಹಂತ ಹಂತವಾಗಿ ಇನ್ನುಳಿದ ಗ್ಯಾರಂಟಿಗಳು ಕಾರ್ಯರೂಪಕ್ಕೆ ಶೀಘ್ರದಲ್ಲೇ ಸರ್ಕಾರ ತರಲಿದೆ ಎಂದು ಶಾಸಕ ಡಾ ಶ್ರೀನಿವಾಸ ತಿಳಿಸಿದರು.
ಕೂಡ್ಲಿಗಿ ಘಟಕವು ಐದಾರು ದಶಕದ ಹಳೇ ಘಟಕವಾಗಿದ್ದು ಅತಿದೊಡ್ಡ ತಾಲೂಕಿನ ಜನತೆಗೆ ಶಾಲಾ ಮಕ್ಕಳ ಅನುಕೂಲಕ್ಕಾಗಿ 15ಕ್ಕೂ ಹೆಚ್ಚು ಬಸ್ಸುಗಳ ಅವಶ್ಯಕತೆ ಇದ್ದು ಸಚಿವರ ಜೊತೆ ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಈ ಹಿಂದೆ ರದ್ದಾದ ಮಾರ್ಗಗಳನ್ನು ಪುನರರಾಂಭಿಸಲು ಮುಂದಾಗುವೆ ಘಟಕ ಹಾಗೂ ನಿಲ್ದಾಣದ ಅಭಿವೃದ್ಧಿಗೆ ಶ್ರಮಿಸುವೆ ಎಂದರು.
ಕಾರ್ಮಿಕ ಕೂಟದ ಕೂಡ್ಲಿಗಿ ಘಟಕದ ಅಧ್ಯಕ್ಷರಾದ ಚಂದ್ರಮೌಳಿ, ಮಹಾಂತೇಶ ಮಾಬು ದುರುಗಪ್ಪ ಹಾಗೂ ಇತರರು ವಸತಿ ಗೃಹಗಳ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಿದರು.
ಪ ಪಂ ಸದಸ್ಯ ಹಾಗೂ ಕಾಂಗ್ರೆಸ್ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಜಿ ಪಂ ಮಾಜಿ ಸದಸ್ಯ ಕೆ ಎಂ ಶಶಿಧರ, ಕಾಂಗ್ರೇಸ್ ಮಹಿಳಾ ರಾಜ್ಯ ಕಾರ್ಯದರ್ಶಿ ಜಿಂಕಲ್ ನಾಗಮಣಿ ಇತರರು ಮಾತನಾಡಿದರು.
ತಹಸೀಲ್ದಾರ್ ಕಾರ್ತಿಕ್, ಇಓ ವೈ ರವಿಕುಮಾರ, ಕೂಡ್ಲಿಗಿ ಡಿವೈಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ,
ಕೂಡ್ಲಿಗಿ ಘಟಕದ ವ್ಯವಸ್ಥಾಪಕ ಮರಿಲಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸಿದ್ದನಗೌಡ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೋಗಳಿ ಮಂಜುನಾಥ, ಜಿ ಪಂ ಮಾಜಿ ಉಪಾಧ್ಯಕ್ಷ ದೊಡ್ಡರಾಮಣ್ಣ,ಕಾಂಗ್ರೆಸ್ ಮುಖಂಡರಾದ ನಾಗರಕಟ್ಟೆ ರಾಜೇಂದ್ರಪ್ರಸಾದ, ಜಿ ಓಬಣ್ಣ, ಟಿ ಜಿ ಮಲ್ಲಿಕಾರ್ಜುನಗೌಡ, ತಾ ಪಂ ಮಾಜಿ ಸದಸ್ಯ ಬಡೇಲಡಕು ಕೊಟ್ರೇಶ,ಮಾದಿಹಳ್ಳಿ ನಜೀರ್,ಒಂಕಾರನಾಯ್ಕ್, ಗ್ರಾಮಪಂಚಾಯಿತಿ ಸದಸ್ಯ ಜಿ ಎಂ ಸಿದ್ದೇಶ,ಜಯರಾಮ ನಾಯಕ, ಕಾಂಗ್ರೇಸನ ಮಹಿಳಾ ಎಸ್ಸಿ ಘಟಕದ ಜಿಲ್ಲಾಧ್ಯಕ್ಷೆ ವಿಶಾಲಾಕ್ಷಿ ರಾಜಣ್ಣ,ಕಾಂಗ್ರೇಸ್ ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ದುರುಗೇಶ, ವೀರಭದ್ರಪ್ಪ, ಸೇರಿದಂತೆ ಇತರರಿದ್ದರು