ಕಂಟ್ರೋಲರ್ ಮಗಳಿಗೆ ಲಭಿಸಿದ ಗೌರವ ಡಾಕ್ಟರೇಟ್ ಪದವಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 23 :- ಸತತ 37ವರ್ಷಗಳ ಕಾಲ   ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕ ಹಾಗೂ ನಿಲ್ದಾಣದ ವಿಚಾರಣಾಧಿಕಾರಿಯಾಗಿ ಸೇವೆಸಲ್ಲಿಸಿ ಇತ್ತೀಚಿಗಷ್ಟೇ ನಿವೃತ್ತರಾದ ಕಂಟ್ರೋಲರ್ ನಾಯಕನಹಟ್ಟಿ ಎಂ ಬಿ ರುದ್ರಮುನಿ ಎನ್ನುವವರ ಮಗಳಾದ ರಾಜೇಶ್ವರಿ ಎಂ ಆರ್ ಅವರಿಗೆ ಶನಿವಾರ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಿಂದ ಅವರ ಗಣಿತಶಾಸ್ತ್ರದ ಸಂಶೋಧನಾ ಮಹಾಪ್ರಬಂಧ ಸಲ್ಲಿಸಿದ ಅಧ್ಯಯನಕ್ಕೆ ಡಾಕ್ಟರೇಟ್ ಪದವಿ ಪ್ರಧಾನ ನೀಡಿ ಗೌರವಿಸಿದೆ.
ಶಿವಗಂಗಮ್ಮ ರುದ್ರಮುನಿ ದಂಪತಿಯ ಐದು ಮಂದಿ ಹೆಣ್ಣು ಹಾಗೂ ಒಂದು ಗಂಡು ಮಕ್ಕಳಲ್ಲಿ ಮೊದಲಿಗರಾದ  ರಾಜೇಶ್ವರಿ ಎಂ ಆರ್ ಬಾಲ್ಯದಿಂದಲೂ ಏನನ್ನಾದರೂ ಸಾದಿಸುವ ಛಲಗಾತಿಯಾಗಿದ್ದು ಡಾಕ್ಟರೇಟ್ ಪದವಿ ಪಡೆಯಬೇಕೆಂದು ಗುರಿ ಇಟ್ಟುಕೊಂಡು ಗಣಿತಶಾಸ್ತ್ರವನ್ನು ಆಯ್ಕೆಮಾಡಿಕೊಂಡು ಶಿವಮೊಗ್ಗದ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ ಎಸ್ ಕೆ ನರಸಿಂಹಮೂರ್ತಿ ಅವರ ಮಾರ್ಗದರ್ಶನದಲ್ಲಿ ಕಂಫಾರ್ಮಲ್ ವೆಕ್ಟರ್ ಫೀಲ್ಡ್ಸ್ ಆನ್ ಫಿನಸ್ಲೆರ್ ಸ್ಪೇಸಸ್ ವಿತ್ (ಆಲ್ಫಾ, ಬೀಟಾ )- ಮೆಟ್ರಿಕ್ಸ್ ವಿಶೇಷವಾಗಿ ಫಿನಸ್ಲೆರ್ ಜೆಮೇಟ್ರಿ ಗೆ ಸಂಬಂಧಿಸಿದಂತೆ ಮಹಾಪ್ರಬಂಧ ಮಂಡಿಸಿದ್ದರಿಂದ ನಿನ್ನೆ ಶನಿವಾರ ಶಿವಮೊಗ್ಗದ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ 33ನೇ ಘಟಿಕೋತ್ಸವದಲ್ಲಿ ಗೌರವಾನ್ವಿತ ರಾಜ್ಯದ ರಾಜ್ಯಪಾಲರಾದ ಧಾವರ್ ಚಂದ್ ಅವರ ಅಧ್ಯಕ್ಷತೆಯಲ್ಲಿ ಉಪಸ್ಥಿತರಿದ್ದ  ವಿಶ್ವವಿದ್ಯಾಲಯದ ಉಪಕುಲಪತಿ ಬಿ ಸಿ ವೀರಭದ್ರಪ್ಪ ಅವರು ರಾಜೇಶ್ವರಿ ಎಂ ಆರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ  ರಿಜಿಸ್ಟರ್ ಗೀತಾ ಸಿ. ರಿಜಿಸ್ಟರ್ ಹ್ಯಾನಿಮಿಷನ್ ಪ್ರೊಫೆಸರ್ ನವೀನಕುಮಾರ ಕೆ, ಹಾಗೂ ಮುಖ್ಯಅತಿಥಿಯಾಗಿ ಆಗಮಿಸಿದ ಬೆಂಗಳೂರು ಇಸ್ರೋ ಪ್ರಾದ್ಯಾಪಕ ಹಾಗೂ ತಿರುವನಂತಪುರಂನ ಐಇಎಸ್ ಟಿಯ ಕುಲಾಧಿಪತಿ ಪದ್ಮಭೂಷಣ ಹಾಗೂ ಪದ್ಮಶ್ರೀ ಪುರಸ್ಕೃತ ಡಾ ಸುರೇಶ ಸೇರಿದಂತೆ ಇತರರು ರಾಜೇಶ್ವರಿ ಎಂ ಆರ್ ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದಾರೆ.

One attachment • Scanned by Gmail