ಕಂಟ್ರಿ ಪಿಸ್ತೂಲ್ ಜಪ್ತಿ ಆರೋಪಿತನ ಬಂಧನ

ವಿಜಯಪುರ, ಅ.2-ಅನಧಿಕೃತವಾಗಿ ಯಾವುದೋ ಉದ್ದೇಶಕ್ಕಾಗಿ ಇಟ್ಟುಕೊಂಡಿದ್ದ ಕಂಟ್ರಿ ಪಿಸ್ತೂಲ್‍ನ್ನು ಜಪ್ತ ಮಾಡಿ ಆರೋಪಿತನನ್ನು ಸಿ.ಇ.ಎನ್.ಅಪರಾಧ ಪೊಲೀಸ್ ಠಾಣೆಯ ಪೊಲೀಸ್‍ರು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರು ವಿಜಯಪುರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಿಜಯಪುರ ರವರ ಮಾರ್ಗದರ್ಶನದಲ್ಲಿ ದಿ.31.10.2020 ರಂದು 16.00 ಗಂಟೆ ಸುಮಾರಿಗೆ ವಿಜಯಪುರ ಸಿ.ಇ.ಎನ್.ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಸುರೇಶ ಸಿ.ಬೆಂಡೆಗುಂಬಳ ನೇತೃತ್ವದಲ್ಲಿ ಸಿಬ್ಬಂದಿಯನ್ನೊಳಗೊಂಡ ತನಿಖಾ ತಂಡವು ಖಚಿತ ಮಾಹಿತಿ ಮೆರೆಗೆ ವಿಜಯಪುರ ತಾಲೂಕಿನ ಖತಿಜಾಪೂರ ಗ್ರಾಮದಲ್ಲಿರುವ ಹೇಮು ಲೋಣಾರಿ ಇವರ ಸಂಬಂಧಿಕ ಆರೋಪಿತನಾದ ಅಂಬ್ರೇಶ್ ತಂ:ಸುಬಾಷ ರಾಠೋಡ ಸಾ. ಉದ್ಬವ ಹನುಮಾನ ದೇವಸ್ಥಾನದ ಹತ್ತಿರ ಹನುಮಾನ ನಗರ ಬಿದ್ದಾಪೂರ ಕಾಲನಿ ಕಲಬುರ್ಗಿ ಹಾಲಿ ವಸ್ತಿ ಖತಿಜಾಪೂರ ತಾ ವಿಜಯಪುರ ಇತನು ಬಂಧಿತ ಆರೋಪಿಯಾಗಿದ್ದಾರೆ.
ಇತನು ಅನಧಿಕೃತವಾಗಿ ಯಾವುದೋ ಉದ್ದೇಶಕ್ಕಾಗಿ ಇಟ್ಟುಕೊಂಡ ಅಜಮಾಸ 28,000 ರೂ,ಗಳ ಕಿಮ್ಮತ್ತಿನ ಒಂದು ಕಂಟ್ರಿ ಪಿಸ್ತೂಲನ್ನು ಜಪ್ತ ಮಾಡಿದ್ದಾರೆ.
ಈ ಕಂಟ್ರಿ ಪಿಸ್ತೂಲನ್ನು ಇಜಾಜ ತಂದೆ ಬಂದೇನವಾಜ ಪಟೇಲ ಸಾ. ನಂದ್ರಾಳ ತಾ: ಇಂಡಿ ಇತನ ಕಡೆಯಿಂದಾ ಖರೀದಿಸಿದ್ದು, ಸದ್ಯ ಇತನು ವಿಜಯಪುರ ಕೇಂದ್ರ ಕಾರಾಗೃಹದಲ್ಲಿರುತ್ತಾನೆ. ಇಬ್ಬರೂ ಆರೋಪಿತರ ಮೇಲೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಗುನ್ನಾ ನಂಬರ 300/2020 ಕಲಂ: 25 1, 29 (ಎ) & (ಬಿ) ಭಾರತೀಯ ಆಯುಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದಾರೆ.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಯವರ ಕರ್ತವ್ಯವನ್ನು ಶ್ಲಾಘಿಸಿದ್ದಾರೆ.