ಕಂಟೆಂಟ್ ಜೊತೆಗೆ ದೃಶ್ಯ ವೈಭವ 4 ಸಾವಿರಕ್ಕೂ ಪರದೆಗಳಲ್ಲಿ ತೆರೆಗೆ

ಕಂಟೆಂಟ್ ಆಧಾರಿತ ಚಿತ್ರ ತೆರೆಯ ಮೇಲೆ ಕಟ್ಟಿಕೊಡುತ್ತಿದ್ದ ನಿರ್ದೇಶಕ ಚಂದ್ರು, ಇದೀಗ ಕಂಟೆಂಟ್ ಜೊತೆಗೆ ದೃಶ್ಯವೈಭವ ಹೊಂದಿರುವ  ಚಿತ್ರ.“ಕಬ್ಜ” 40 ಗ್ರಾಮದ ಕೇಶಾವರದ ಹಳ್ಳಿಯಿಂದ ಬಂದ ಆರ್. ಚಂದ್ರು 4 ಸಾವಿರಕ್ಕೂ ಅಧಿಕ ಚಿತ್ರಮಂದರಿಗಳಲ್ಲಿ

ದೇಶ ವಿದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುತ್ತಿದ್ದಾರೆ. ಇದು ಕನ್ನಡ ಜೊತೆಗೆ ಭಾರತೀಯ ಚಿತ್ರರಂಗದಲ್ಲಿ ದಾಖಲೆಯೇ ಸರಿ.

ಇದುವರೆಗೂ 12 ಸಿನಿಮಾ ನಿರ್ದೇಶನ ಮಾಡಿರುವ ಚಂದ್ರು ಇಲ್ಲಿಯವರೆಗಿನ ಚಿತ್ರ ಒಂದೆಡೆಯಾದರೆ ಕಬ್ಜ ಚಿತ್ರ ಮತ್ತೊಂದು ತೂಕ. ಅದ್ದೂರಿ ವೆಚ್ಚದಲ್ಲಿ ಘಟಾನುಘಟಿ ಕಲಾವಿದರನ್ನು ಮುಂದಿಟ್ಟುಕೊಂಡು ಮಾಡಿದ ಚಿತ್ರ ಇದು. ಜನರ ನಿರೀಕ್ಷೆಗಿಂತ ಉತ್ತಮವಾಗಿ ಮೂಡಿಬಂದಿದೆ ಎಂದು ನಿರ್ದೇಶಕ ಚಂದ್ರು ಹೇಳಿಕೊಂಡಿದ್ದಾರೆ.

ಪ್ರೀ ಬುಕ್ಕಿಂಗ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉತ್ತರ ಭಾರತದಲ್ಲಿ 2 ಸಾವಿರ ಚಿತ್ರಮಂದಿರ, ದಕ್ಷಿಣ ಭಾರದಲ್ಲಿ 2 ಸಾವಿರ ಹಾಗು ಕನ್ನಡದಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಾಳೆ ಬಿಡುಗಡೆಯಾಗಲಿದೆ, ದೊಡ್ಡ ದೊಡ್ಡ ಕಲಾವಿದರನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡುವುದು ನಿಜಕ್ಕೂ ಸವಾಲಿನಿಂದ ಕೂಡಿತ್ತು. ಅದನ್ನು ಹಿರಿಯ ಕಲಾವಿದರು ಮತ್ತಷ್ಟು ಸುಲಭವಾಗಿಸಿದ್ದಾರೆ.

ಉಪೇಂದ್ರ, ಶಿವಣ್ಣ ಅವರ ಜೊತೆ ಈ ಮುಂಚೆ ಕೆಲಸ ಮಾಡಿದ್ದರಿಂದ ಕೆಲಸ ಸುಲಭವಾಯಿತು, ಸುದೀಪ್ ಸರ್ ಜೊತೆ ಮೊದಲ ಸಿನಿಮಾ ಆದರೂ ಎಲ್ಲಿಯೂ ಸಮಸ್ಯೆಯಾಗಲಿಲ್ಲ. ಈ ಮೂರು ಕಲಾವಿದರ ಜೊತೆಗೆ ಹಲವು ಹಿರಿಯ ಕಲಾವಿದರು ನಟಿಸಿದ್ದಾರೆ. ಕೆಜಿಎಫ್ ಮಾದರಿಯ ಸಿನಿಮಾ ಕಬ್ಜಕ್ಕೆ ಸ್ಪೂರ್ತಿ. ಚಿತ್ರ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಚಿತ್ರ ಜನರ ನಿರೀಕ್ಷೆ ಹುಸಿಗೊಳಿಸುವುದಿಲ್ಲ ಎನ್ನುವ ಭವರಸೆಯನ್ನೂ ನೀಡಿದ್ದಾರೆ.

ಗುಣಗಾನ

ಚಂದ್ರು ಸಾಹಸವನ್ನು ನಟರಾದ ಉಪೇಂದ್ರ , ಕಿಚ್ಚ ಸುದೀಪ್ ಹಾಡಿ ಹೊಗಳಿಣ ಚಿತ್ರ ಯಶಸ್ವಿಯಾಗಲಿ ಎಂದು ಶುಭಕೋರಿದರು. ನಾಯಕಿಯರಾದ ಶ್ರೀಯಾ ಸರಣ್, ತಾನ್ಯಾ ಹೋಪ್, ಹಾರೈಸಲು ಬಂದಿದ್ದ  ಧನಂಜಯ, ನೆನಪಿರಲಿ ಪ್ರೇಮ್ ಈ ಕ್ಷಣಕ್ಕೆ ಸಾಕ್ಣಿಯಾದರು.

[9:32 am, 15/03/2023] Ramesh Sv: ಮೊದಲ ಪುಟ👆👆