ಕಂಚಿನ ಪುತ್ಥಳಿ, ಉದ್ಯಾನವನ ನಿರ್ಮಾಣಕ್ಕೆ ಮನವಿ

ಮಾನ್ವಿ,ಜು.೧೭-
ಪಟ್ಟಣದ ವಾಲ್ಮೀಕಿ ವೃತ್ತದಲ್ಲಿರುವ ಶ್ರೀಮಹರ್ಷಿ ವಾಲ್ಮೀಕಿಯವರ ಪುತ್ಥಳಿಯ ಬದಲಾಗಿ ಐದು ಅಡಿಯ ಕಂಚಿನ ಪುತ್ಥಳಿ ಹಾಗೂ ಸುತ್ತಮುತ್ತಲಿನ ಜಾಗದಲ್ಲಿ ಉದ್ಯಾನವನ್ನು ನಿರ್ಮಾಣ ಮಾಡುವಂತೆ ಹೈದರಾಬಾದ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘಟನೆಯ ಅಧ್ಯಕ್ಷ ಎಂ ಬಿ ನಾಯಕ ತಂಡದೊಂದಿಗೆ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಮಾನವಿ ವಿಧಾನಸಭಾ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು ನಮ್ಮ ತಾಲೂಕಿನಲ್ಲಿ ೫೦೦೦೦ ಕ್ಕೂ ಹೆಚ್ಚು ವಾಲ್ಮೀಕಿ ನಾಯಕ ಜನಾಂಗಕ್ಕೆ ಸೇರಿದ ಮತದಾರರಿದ್ದು, ಕರ್ನಟಕ ರಾಜ್ಯದಲ್ಲಿ ೬೦ ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದ್ದು ಈಗಾಗಲೇ ಕರ್ನಾಟಕ ಸರ್ಕಾರವು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ತಾಲೂಕ ಆಡಳಿತ ಮಾಡುವಂತೆ ನಿರ್ದೇಶನವಿದೆ, ಪಟ್ಟಣದ ಸಿಂಧನೂರ ರಸ್ತೆಯಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯು ಚಿಕ್ಕದಾಗಿದ್ದು, ೨೦೨೩-೨೪ ನೇ ಸಾಲಿನಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿಟ್ಟು ಕ್ರಿಯಾ ತಮ್ಮ ಇಲಾಖೆಯ ಅನುದಾನದಲ್ಲಿಸುಮಾರು ೨೦ ಲಕ್ಷ ರೂಪಾಯಿಗಳ ಅಂದಾಜು ಪಟ್ಟಿ ತಯಾರಿಸಿ ೫ ಅಡಿ ಎತ್ತರದ ಕಂಚಿನ ಮತ್ತಳಿ ನಿರ್ಮಿಸಿ ಕೊಡಬೇಕೆಂದು ಮತ್ತು ಪುತ್ಥಳಿಯ ಅಕ್ಕಪಕ್ಕದಲ್ಲಿ ಸಣ್ಣ ಉದ್ಯಾನ ನಿರ್ಮಿಸಿ ವಾಲೀಕಿ ನಾಯಕ ಜನಾಂಗಕ್ಕೆ ಅನುಕೂಲವಾಗುತ್ರದೆ ಎಂದು ಮನವಿಯಲ್ಲಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರು ಭಾಗಿಯಾಗಿದ್ದರು.