ಕಂಚಿಕೆರೆ-ಮತ್ತಿಹಳ್ಳಿ ಗ್ರಾ.ಪಂ ಚುನಾವಣೆ ಮತದಾನ

ಹರಪನಹಳ್ಳಿ ಮಾ 30 : ತಾಲ್ಲೂಕಿನ ಕಂಚಿಕೆರೆ ಮತ್ತು ಮತ್ತಿಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯ ಸ್ಥಾನಕ್ಕೆ ಸೋಮವಾರ ಮತದಾನ ಪ್ರಕ್ರಿಯೆ ನಡೆದಿದ್ದು, ಕಂಚಿಕೇರಿ ಶೇ.84.19ರಷ್ಟು ಮತ್ತು ಮತ್ತಿಹಳ್ಳಿ ಶೇ.80.12ರಷ್ಟು ಮತದಾನವಾಗಿದೆ.
ಮತ್ತಿಹಳ್ಳಿ ಗ್ರಾಮದ 7 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಒಟ್ಟು 2098 ಮತದಾರರ ಪೈಕಿ, 1681 ಮತಗಳು ಚಲಾವಣೆ ಆಗಿವೆ. ಕಳೆದ ಸಲ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬ್ಯಾಲೆಟ್ ಪ್ರತಿಗಳು ಅದಲು ಬದಲಾಗಿದ್ದರಿಂದ ಗ್ರಾಮದ ವಾರ್ಡ್ ಮತದಾರರು ಮತದಾನ ಬಹಿಷ್ಕರಿಸಿದ್ದರು. ಇದರಿಂದ ಮತದಾನ ಮುಂದೂಡಲಾಗಿತ್ತು. ಸದ್ಯ 15 ಜನ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ.
ಕಂಚಿಕೇರೆ ಗ್ರಾಮ ಪಂಚಾಯಿತಿ 24 ಸದಸ್ಯರ ಪೈಕಿ 5 ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಉಳಿದ 19 ಸ್ಥಾನಗಳಿಗೆ ಸ್ಪರ್ಧೆ ನಡೆದಿದ್ದು, ಒಟ್ಟು 7510 ಮತದಾರರ ಪೈಕಿ, 6323 ಮತಗಳನ್ನು ಚಲಾಯಿಸಿದ್ದಾರೆ. ಕಣದಲ್ಲಿರುವ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿಕೇರೆ, ಹಳ್ಳಿಕೇರಿ, ಹೊನ್ನೇನಹಳ್ಳಿ, ಒಡೇರಹಳ್ಳಿ ಗ್ರಾಮಗಳು ಚುನಾವಣೆ ನೀತಿ ಸಂಹಿತೆಗೆ ಹಿನ್ನಲೆಯಲ್ಲಿ ಪೊಲೀಸ್ ಬಿಗ ಭದ್ರತೆ ಒದಗಿಲಾಗಿತ್ತು. ಎಲ್ಲಿಯೂ ಅಹಿತಕರ ಘಟನೆ ನಡೆಯದೇ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆದಿದೆ.