ಕಂಚಿಕೆರೆಯಲ್ಲಿ ಕನಕದಾಸ ಜಯಂತಿ ಆಚರಣೆ.


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ನ.16: ತಾಲ್ಲೂಕಿನ ಕಂಚಿಕೆರೆಯಲ್ಲಿ ಕುರುಬ ಸಮಾಜದ ವತಿಯಿಂದ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕನಕ ವೃತ್ತದಿಂದ ಕನಕದಾಸರ ಭಾವಚಿತ್ರದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಈ ಮೆರವಣಿಗೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ಕನಕದಾಸ, ಸಂಗೊಳ್ಳಿ ರಾಯಣ್ಣ ಹಾಗೂ ವಿವಿಧ ಮಹಾನೀಯರ ಭಾವಚಿತ್ರದೊಂದಿಗೆ ಮೆರವಣಿಗೆಯಲ್ಲಿ ಯುವಕರು ನೃತ್ಯ ಮಾಡುತ್ತ ಅದ್ದೂರಿಯಾಗಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
ಸಮಾಜದ ಮುಖಂಡರಾದ ಜೋಗಪ್ಪರ ಮಂಜಪ್ಪ ಮಾತನಾಡಿ – ಕನಕದಾಸರು ಎಲ್ಲಾ ಜನಾಂಗ ಒಂದೇ, ನಾವೆಲ್ಲ ಒಂದೇ ಎಂದು ಹೇಳಿದವರು, ಕುಲ ಕುಲವೆಂದು ಹೊಡೆದಾಡದಿರಿ ಎಂದು ಹೇಳಿದವರು, ನಾವೆಲ್ಲ ಮಾನವರು ಒಂದೇ ಎಂದು ಹೇಳಿದವರು, ಈ ಕನಕದಾಸರ ಪದಗಳು, ವಚನಗಳು ಈಗಲೂ ಪ್ರಸಿದ್ದಿಯಾಗಿವೆ, ಕನಕದಾಸರು ಈ ಇಡೀ ಪ್ರಪಂಚಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗರಾಜ್, ಕರಿಬಸಪ್ಪ, ಕೆಂಚಪ್ಪ, ಬಸಪ್ಪ, ಅಂಜಿನಪ್ಪ, ಪರುಸಪ್ಪ, ಮಂಜಪ್ಪ, ಕೊಟ್ರೇಶ್, ಸುನೀಲ್, ಜಾತಪ್ಪ, ಶಾಂತಕುಮಾರ್, ಚಂದ್ರಪ್ಪ, ದೇವೇಂದ್ರಪ್ಪ, ಹನುಮಂತಪ್ಪ ಹಾಗೂ ಸಮಾಜದ, ಊರಿನ ಮುಖಂಡರು ಹಾಜರಿದ್ದರು