ಕಂಗನಾ ರನಾವತ್ ಬೆಂಬಲಿಸಿ ಹೇಳಿಕೆ ನೀಡಿದರು ಸ್ವರಾ ಭಾಸ್ಕರ್!

ಹಲವಾರು ಸಾಮಾಜಿಕ ಮತ್ತು ರಾಜಕೀಯ ಪ್ರಕರಣಗಳಲ್ಲಿ ನಟಿ ಸ್ವರಾ ಭಾಸ್ಕರ್ ಮತ್ತು ಕಂಗನಾ ರನಾವತ್ ರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಪರಸ್ಪರರು ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಸ್ವರಾ ಭಾಸ್ಕರ್ ಅನೇಕಬಾರಿ ಕಂಗನಾರನ್ನು ಟೀಕಿಸಿದ್ದಾರೆ. ಎಲ್ಲಿಯವರೆಗೆ ಅಂದರೆ ಸ್ವರಾ ಭಾಸ್ಕರ್ ಒಮ್ಮೆ ಈ ರೀತಿ ಹೇಳಿದ್ದೂ ಇದೆ – “ಪರದೆಯಲ್ಲಿನ ಒಬ್ಬ ಉತ್ತಮ ನಟಿ ತನ್ನ ನಿಜ ಬದುಕಿನಲ್ಲಿಯೂ ಉತ್ತಮ ಮನುಷ್ಯರಾಗಿ ಇರುತ್ತಾರೆಂದು ಹೇಳುವಂತೆ ಇಲ್ಲ…”.
ಹಾಗೆ ನೋಡಿದರೆ ಸ್ವರಾ ಅಭಿನಯದ ’ತನು ವೆಡ್ಸ್ ಮನು’ ಫಿಲ್ಮಿನ ಕೋ ಸ್ಟಾರ್ ಕಂಗನಾರನ್ನು ಆಗಲೂ ಟೀಕಿಸಿದ್ದರು, ಊರ್ಮಿಳಾ ಮಾತೋಂಡ್ಕರ್ ರನ್ನು ಕಂಗನಾ ಸಾಫ್ಟ್ ಪೋರ್ನ್ ಸ್ಟಾರ್ ಎಂದಿದ್ದ ಸಮಯದಲ್ಲಿ.
ಇತ್ತ ಕಂಗನಾ ಕೂಡ ಸ್ವರಾ ಭಾಸ್ಕರ್ ಮತ್ತು ತಾಪಸಿ ಪನ್ನೂ ಅವರನ್ನು ’ಬಿ’ಗ್ರೇಡ್ ನಟಿಯರು ಎಂದದ್ದಿದೆ.
ಏನೇ ಇರಲಿ ,ಈವಾಗ ಸ್ವರಾ ಕಂಗನಾರಿಗೆ ಬೆಂಬಲವಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆ ನೀಡಿದ್ದಾರೆ.
ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಸುಖದೇವ್ ಪಾನ್ಸೆ ಅವರು ಕಂಗನಾ ರನಾವತ್ ರನ್ನು ಟೀಕಿಸುವಾಗ ಬಳಸಿದ ಭಾಷೆಯ ಕುರಿತಂತೆ ನಟಿ ಸ್ವರಾ ಭಾಸ್ಕರ್ ಶಾಸಕರನ್ನು ತೀವ್ರ ಟೀಕಿಸಿದ್ದಾರೆ. “ಶಾಸಕ ಸುಖದೇವ್ ಪಾನ್ಸೆ ಅವರು ಕಂಗನಾ ರನಾವತ್ ರ ಮೇಲೆ ಮಾಡಿದ ಕಮೆಂಟ್ ಪೂರ್ಣರೂಪವಾಗಿ ನಿಂದನೀಯವಾಗಿದೆ” ಎಂದಿದ್ದಾರೆ ಸ್ವರಾ.


ಸುಖದೇವ್ ಪಾನ್ಸೆ ಅವರು ರೈತರ ಅಂದೋಲನದ ವಿರೋಧ ಮಾಡುತ್ತಿರುವ ಕಂಗನಾ ರನಾವತ್ ರನ್ನು ಮುಂದಿಟ್ಟು “ಪೊಲೀಸರು ನಾಚ್ನೇ ಗಾನೆವಾಲಿಯ ಕಟೌಟ್ ರೂಪದಲ್ಲಿ ಕೆಲಸ ಮಾಡಬಾರದು” ಎಂದು ಕಂಗನಾಗೆ ಪರೋಕ್ಷವಾಗಿ ಟಾಂಟ್ ನೀಡಿದ್ದರು.
೨೫೦ ಕ್ಕೂ ಹೆಚ್ಚಿನ ಕಾಂಗ್ರೆಸ್ ಕಾರ್ಯಕರ್ತರು ಇತ್ತೀಚೆಗೆ ಸಾರಣಿ ಎಂಬಲ್ಲಿಗೆ ಬಂದಿದ್ದರು. ಅಲ್ಲಿ ಕಂಗನಾರ ಧಾಕಡ್ ಪಿಲ್ಮ್ ನ ಶೂಟಿಂಗ್ ನಡೆಯುತ್ತಿತ್ತು. ಕಂಗನಾ ಈಗಾಗಲೇ ಆಂದೋಲನನಿರತ ರೈತರನ್ನು ಆತಂಕವಾದಿಗಳು ಎಂದಿದ್ದ ಹೇಳಿಕೆಗೆ ಅಲ್ಲಿ ಕಂಗನಾ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದ್ದರು.
ಅದಕ್ಕೆ ಕಂಗನಾರು ಸುಖದೇವ್ ಪಾನ್ಸೆಗೆ ನೀಡಿದ ಉತ್ತರದಲ್ಲಿ ಆಲಿಯಾ ಭಟ್ ದೀಪಿಕಾ ಪಡುಕೋಣೆ ಕತ್ರಿನಾ ಕೈಫ್ ಇವರೆಲ್ಲರ ಹೆಸರನ್ನೂ ಎಳೆದಿದ್ದರು. ಹಾಗೂ “ನಾನು ದೀಪಿಕಾ ,ಕತ್ರಿನಾ, ಆಲಿಯಾ ಭಟ್ಟ್ ಅವರಂತೆ ಅಲ್ಲ. ತಾನು ಐಟಂ ನಂಬರ್ ಮಾಡುವುದಕ್ಕೆ ಬಾಲಿವುಡ್ ನಲ್ಲಿ ವಿರೋಧಿಸಿದವಳು. ನಾನು ರಾಜಪುತ್ ಮಹಿಳೆ…” ಹೀಗೆಲ್ಲ ಹೇಳಿದ್ದರು ಕಂಗನಾ. ಇದೀಗ ಸ್ವರಾ ಭಾಸ್ಕರ್ ಶಾಸಕರು ಕಂಗನಾಗೆ ಪರೋಕ್ಷವಾಗಿ ಹೇಳಿದ “ನಾಚ್ನೇ ವಾಲಿ …” ಕಾಮೆಂಟ್ ಗೆ ತೀವ್ರ ಟೀಕಿಸಿದ್ದಾರೆ.ಜೊತೆಗೆ ಕಂಗನಾರ ಹೇಳಿಕೆಗಳೂ ಇನ್ನಷ್ಟು ಕೆಳಮಟ್ಟದ್ದೇ ಇದೆ ಎಂದೂ ಪ್ರತಿಕ್ರಿಯಿಸಿದ್ದಾರೆ.

೬೦ ವರ್ಷದಿಂದ ಚಿತ್ರೀಕರಣವೇ ನಡೆಯದ ಸ್ಥಳದಲ್ಲಿ ಅಕ್ಷಯ್ ಫಿಲ್ಮ್ ತಂಡ.

ಅಕ್ಷಯ್ ಕುಮಾರ್ ರ ಫಿಲ್ಮ್ ’ಅತರಂಗೀ ರೆ’ ಶೂಟಿಂಗ್ ಬನಾರಸ್ ನಿಂದ ೪೫ ಕಿ.ಮೀಟರ್ ದೂರದ ಚಕಿಯಾ ( ಚಂದೌಲೀ) ಎಂಬಲ್ಲಿ ನಡೆದಿದೆ. ಇಲ್ಲಿನ ಒಂದು ಪಾಳುಬಿದ್ದ ಮಹಲನ್ನು ಸ್ವಚ್ಛ ಗೊಳಿಸಿ ಅಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸೆಟ್ ನಲ್ಲಿರುವ ಇತರ ಜನರು ಹೇಳುವಂತೆ ಅತರಂಗೀ ರೆ ಹೊರತಾಗಿ ೬೦ವರ್ಷದ ಮೊದಲು ಇಲ್ಲಿ ಹಿಂದಿ ಫಿಲ್ಮ್ ನ ಶೂಟಿಂಗ್ ನಡೆದಿತ್ತು. ಈ ಫಿಲ್ಮ್ ನ ಕಥೆ ಬಿಹಾರದ ಬ್ಯಾಕ್ ಡ್ರಾಪ್ ನಲ್ಲಿ ಇದೆ. ಆದರೆ ಬಿಹಾರದ ಸಿಕ್ವೆನ್ಸ್ ಉತ್ತರಪ್ರದೇಶದಲ್ಲೇ ಚಿತ್ರೀಕರಿಸಲಾಯಿತು. ಬನಾರಸ್ ನ ಸುತ್ತಮುತ್ತಲೇ ಹೆಚ್ಚಿನ ಶೂಟಿಂಗ್ ನಡೆದಿದೆ.


ನಟ ಅಕ್ಷಯ್ ಕುಮಾರ್ ಮತ್ತು ಡೈರೆಕ್ಟರ್ ಪ್ರೊಡ್ಯೂಸರ್ ಆನಂದ್ ಎಲ್ ರಾಯ್ ಮೂರು ಫಿಲ್ಮ್ ಗಳ ಡೀಲ್ ಮಾಡಿದ್ದಾರೆ .ಈ ಮೂರು ಫಿಲ್ಮ್ ಗಳೆಂದರೆ ಅತರಂಗೀ ರೆ, ರಕ್ಷಾಬಂಧನ್ , ಮತ್ತು ಇನ್ನೊಂದು ಹೆಸರಿಡದ ಫಿಲ್ಮ್ ಆಗಿರುತ್ತದೆ. ಈ ಕರಾರು ೧೨೭ ಕೋಟಿ ರೂಪಾಯಿಗೆ ನಡೆದಿದೆ.


ಅಕ್ಷಯ್ ಕುಮಾರ್ ’ರಕ್ಷಾಬಂಧನ್’ ಫಿಲ್ಮ್ ನ ಶೂಟಿಂಗ್ ಒಂದೂವರೆ ತಿಂಗಳ ನಂತರ ಆರಂಭಿಸಲಿದ್ದಾರೆ. ಮಾರ್ಚ್೧೫ರಿಂದ ಅತರಂಗೀ ರೆ ಇದರ ಮುಂದಿನ ಶೆಡ್ಯೂಲ್ ಗೆ ಜಾಯಿನ್ ಆಗಲಿದ್ದಾರೆ. ಮಾರ್ಚ್ ೧೫ ರಿಂದ ಫಿಲ್ಮ್ ನ ಹಾಡುಗಳ ಸೀಕ್ವೆನ್ಸ್ ಆರಂಭವಾಗಲಿದೆ. ಇದಕ್ಕಾಗಿ ಫಿಲ್ಮ್ ಸಿಟಿಯಲ್ಲಿ ೮ ಕೋಟಿ ರೂ ವೆಚ್ಚದ ಸೆಟ್ ನಿರ್ಮಿಸಲಾಗಿದೆ. ಹಾಡಿನ ಕೊರಿಯೋಗ್ರಫಿ ಗಣೇಶ ಆಚಾರ್ಯ ಅವರದ್ದು. ಇದರಲ್ಲಿ ಸಾರಾ ಅಲೀ ಖಾನ್ ಮತ್ತು ಅಕ್ಷಯಕುಮಾರ್ ಹೊರತಾಗಿ ನೂರು ಜೂನಿಯರ್ ಡ್ಯಾನ್ಸರ್ ಗಳೂ ಇರುವರು. ಮಾರ್ಚ್ ೨ ರ ತನಕ ಬಚ್ಚನ್ ಪಾಂಡೆ ಶೂಟಿಂಗ್ ನಲ್ಲಿ ಅಕ್ಷಯ್ ಬಿಜಿ ಇದ್ದಾರೆ.