ಕಂಕರ ಮಶೀನ್‍ಗೆ ಅಳವಡಿಸಿದ 74 ಸಾವಿರ ರೂ.ಮೌಲ್ಯದ ಸಾಮಗ್ರಿ ಕಳವು

ಕಲಬುರಗಿ,ಜೂ.26-ಕಂಕರ ಮಶೀನ್‍ಗೆ ಅಳವಡಿಸಲಾದ 74 ಸಾವಿರ ರೂ.ಮೌಲ್ಯದ ಸಾಮಗ್ರಿಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋದ ಘಟನೆ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಕೇರೂರ ಗ್ರಾಮದಲ್ಲಿ ನಡೆದಿದೆ.
ಕೇರೂರ ಗ್ರಾಮದ ಸೀಮೆಯಲ್ಲಿರುವ ಐಶ್ವರ್ಯ ಕಂಕರ ಮಶೀನ್‍ಗೆ ಅಳವಡಿಸಲಾಗಿದ್ದ 20 ಸಾವಿರ ರೂ.ಮೌಲ್ಯದ 20 ಯಂಕಲ್ ಪಟ್ಟಿ, 25 ಸಾವಿರ ರೂ.ಮೌಲ್ಯದ 5 ರುಟರ್ ಸೆಟ್ ಚೈನ್, 5 ಸಾವಿರ ರೂ.ಮೌಲ್ಯದ ಸ್ಟಾರ್ಟರ್, 4 ಸಾವಿರ ರೂ.ಮೌಲ್ಯದ ಎರಡು 3 ಹೆಚ್.ಪಿ. ಮೋಟಾರ್, 15 ಸಾವಿರ ರೂ.ಮೌಲ್ಯದ 200 ಫೀಟ್ ಉದ್ದದ ಕೇಬಲ್ ಸೇರಿ 74 ಸಾವಿರ ರೂ.ಮೌಲ್ಯದ ಸಾಮಗ್ರಿ ಕಳವು ಮಾಡಲಾಗಿದೆ.
ಈ ಸಂಬಂಧ ನಾಗಪ್ಪ ದೊಡ್ಡಮನಿ ಎಂಬುವವರು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆದಿದೆ.