ಔಷಧ ಮಾರಾಟ ಪ್ರತಿನಿಧಿಗಳ ಪ್ರತಿಭಟನೆ


ದಾವಣಗೆರೆ.ಜು.೧೯; ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ವ್ಯಾಪಾರ ಪುನರ್ ರಚಿಸುವ ನೆಪದಲ್ಲಿ ಔಷಧ ಮಾರಾಟ ಪ್ರತಿನಿಧಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿದ್ದಾರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ಸದಸ್ಯರು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ದೇಶಾದ್ಯಂತ ಕೆಲಸ ಮಾಡುತ್ತಿರುವ ಹಲವಾರು ಔಷಧ ಮಾರಾಟ ಪ್ರತಿನಿಧಿಗಳ ಕೆಲಸಗಳನ್ನು ಕೊನೆಗೊಳಿಸಿದೆ. ಜಾಗತಿಕ ನೀತಿಗೆ ಅನುಗುಣವಾಗಿ ಈ ಕಾರ್ಯತಂತ್ರದ ನಿರ್ಧಾರಗಳಾಗಿವೆ ಮತ್ತು ಭಾರತದಲ್ಲಿ ಮಾರಾಟ ಪ್ರಚಾರದ ಉದ್ಯೋಗಿಗಳ ಕೆಲಸ “ಅವಶ್ಯಕತೆಗಿಂತಲೂ ಹೆಚ್ಚಾಗಿರುವಿಕೆ” ಎಂದು ಈ ಕಂಪನಿಗಳು ಉಲ್ಲೇಖಿಸುತ್ತವೆ.
ವಿಶ್ವದಾದ್ಯಂತ ವ್ಯಾಪಾರ ವಾಹಿವಾಟನ್ನು ವಿಸ್ತರಿಸಿಕೊಂಡು ಸಾವಿರಾರು ಕೋಟಿ ರೂಪಾಯಿಗಳ ಲಾಭ ಮಾಡುತ್ತಿದ್ದರೂ ಔಷಧ ಮಾರಾಟ ಪ್ರತಿನಿಧಿಗಳ ಭವಿಷ್ಯ ನಿಧಿಯ ವಂತಿಕೆಯನ್ನ ಸಮಯಕ್ಕೆ ಸರಿಯಾಗಿ ಸಲ್ಲಿಸದೇ ನೌಕರರಿಗೆ ವಂಚನೆ ಮಾಡಿದೆ ಹಾಗೂ ನ್ಯಾಯ ಕೇಳಿದ ಮಾರಾಟ ಪ್ರತಿನಿಧಿಗಳನ್ನ ದುರುದ್ದೇಶದಿಂದ ದೂರದ ರಾಜ್ಯಗಳಿಗೆ ವರ್ಗಾವಣೆ ಮಾಡಿದೆ. ಕೆಲಸದಿಂದ ತೆಗೆದುಹಾಕಿದೆ. ಎಲ್ಲಾ ಕಾರ್ಮಿಕ ವಿರೋಧಿ ಕೆಟ್ಟ ತಂತ್ರಗಳನ್ನು ಅಳವಡಿಸಿಕೊಂಡು, ಔಷಧ ಮಾರಾಟ ಪ್ರತಿನಿಧಿಗಳನ್ನ ಭಯಭೀತಗೊಳಿಸುವ ಮೂಲಕ ಅವರ ಕೆಲಸದ ವಾತವರಣದಲ್ಲಿ ನರಕವನ್ನೇ ಸೃಷ್ಟಿಸಿದೆ. ಪ್ರತಿಭಟನೆ ನಡೆಸುತ್ತಿರುವ ಮಾರಾಟ ಪ್ರತಿನಿಧಿಗಳಿಗೆ ಬೆದರಿಕೆ, ಕಿರುಕುಳಗಳ, ವರ್ಗಾವಣೆ, ವಜಾಗೊಳಿಸುವಿಕೆ, ವೇತನ ಮತ್ತು  ಸಾರಿಗೆ ಹಾಗೂ ಇತರ ವೆಚ್ಚಗಳ ನಿಲುಗಡೆ ಮಾಡುವ ಮೂಲಕ ದೇಶದ ಕಾನೂನು ಗಳ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಔಷಧ ತಯಾರಕ ಕಂಪನಿಗಳು ದೇಶದ ಸಂವಿಧಾನದ ಆಶಯಗಳನ್ನ ಧಿಕ್ಕರಿಸಿದೆಯಲ್ಲದೇ ಮಾರಾಟ ಪ್ರತಿನಿಧಿಗಳ ರಕ್ಷಣೆಗೆ ಇರುವ ಎಸ್.ಪಿ.ಇ. ಕಾಯಿದೆಯನ್ನ ಜಾರಿಗೊಳಿಸದೇ ಔಷಧ ಮಾರಾಟ ಪ್ರತಿನಿಧಿಗಳನ್ನ ಶೋಷಣೆ ಮಾಡುತ್ತಿವೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ವೆಂಕಟೇಶ್‌ ಎ, ಆನಂದರಾಜು ಕೆ.ಹೆಚ್.   ಮಹಾವೀರ್‌ ಪಿ.ಜೆ, ಪ್ರದೀಪ್‌, ಶ್ರೀಧರ್‌, ರುದ್ರೇಶ್‌, ವಿಠಲ್‌, ಶಶಿಕುಮಾರ್‌ ಆಚಾರ್‌, ಶ್ರೀಧರಮೂರ್ತಿ ಮತ್ತಿತರರಿದ್ದರು.

Attachments area

ReplyReply to allForward