ಔಷಧ ಪಟ್ಟಿಯಿಂದ ರೆಮಿಡಿಸೀವರ್ ಹೊರಕ್ಕೆ

ನವದೆಹಲಿ,ನ.೨೧- ಕೋವಿಡ್-೧೯ ರೋಗಿಗಳಿಗೆ ನೀಡಲಾಗುತ್ತಿದ್ದ ಗಿಲೀಡ್ ರೆಮಿಡಿಸೀವರ್ ರೋಗನಿರೋಧಕ ಔಷಧಿಯನ್ನು ವಿಶ್ವಆರೋಗ್ಯ ಸಂಘಟನೆ ಔಷಧಿಗಳ ಪಟ್ಟಿಯಿಂದ ರದ್ದುಪಡಿಸಿದೆ.
ಕಳೆದ ಕೆಲವು ತಿಂಗಳಿಂದ ಕೋವಿಡ್-೧೯ ರೋಗಿಗಳ ಆರೋಗ್ಯ ಸಾಮರ್ಥ್ಯವನ್ನು ಹೆಚ್ಚಿಸಲು ಬಳಸಲಾಗುತ್ತಿತ್ತು. ಆದರೆ ಈಗ ಕೋವಿಡ್-೧೯ ಸೋಂಕಿತರಿಗೆ ರೆಮಿಡಿಸೀವರ್ ಔಷಧಿಯನ್ನು ಬಳಸದಂತೆ ಡಬ್ಲ್ಯುಹೆಚ್‌ಓ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ಕುರಿತು ಹೇಳಿಕೆ ನೀಡಿರುವ ಡಬ್ಲ್ಯುಹೆಚ್‌ಓ ಮಾಧ್ಯಮ ಪ್ರತಿನಿಧಿ ತಾರಿಕ್ ಜೆಸರವೀಕ್, ಚಿಕಿತ್ಸೆಯ ಮಾರ್ಗಸೂಚಿಗಳ
ಅನುಸರಣೆ ಕೋವಿಡ್ ಔಷಧಿಯನ್ನು ಸಂಗ್ರಹಿಸಲು ಶಿಫಾರಸ್ಸು ಮಾಡುವುದಿಲ್ಲ ಎಂದು ತಿಳಿಸಿದರು.
ಈ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ಟ್ರಂಪ್ ಅವರಿಗೆ ಸೋಂಕು ಕಾಣಿಸಿಕೊಂಡಾಗ ರೆಮಿಡಿಸೀವರ್ ಔಷಧಿಯನ್ನು ನೀಡಲಾಗಿತ್ತು, ಆಗ ಅವರು ಗುಣಮುಖರಾಗಿರುವ ಬಗ್ಗೆ ನಡೆಸಿದ ಅಧ್ಯಯನ ವರದಿಗಳು ದೃಢಪಡಿಸಿತ್ತು.
ಈ ರೆಮಿಡಿಸೀವರ್ ಔಷಧಿಯನ್ನು ಕೋವಿಡ್-೧೯ ಸೋಂಕಿತರ ಚಿಕಿತ್ಸೆಗೆ ಬಳಕೆ ಮಾಡುವಂತೆ ೫೦ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ಔಷಧವನ್ನು ಬಳಕೆ ಮಾಡಲು ಅಧಿಕಾರ ನೀಡಲಾಗಿತ್ತು.
ಭಾರತದಲ್ಲಿ ರೆಮಿಡಿಸೀವರ್ ಪೂರೈಕೆಯನ್ನು ಹೆಚ್ಚಳ ಮಾಡಲು ಗಿಲಾಡ್ ಹಲವಾರು ಔಷಧ ಕಂಪನಿಗಳೊಂದಿಗೆ ಮಹತ್ವವಲ್ಲದ ಒಪ್ಪಂದಗಳಿಗೆ ಸಹಿ ಹಾಕಿತ್ತು. ಇದು ಕೋವಿಡ್-೧೯ರ ವಿರುದ್ಧದ ಏಕೈಕ ಅನುಮೋದಿತ ಚಿಕಿತ್ಸೆಯಾಗಿದೆ.
ಡಾ. ರೆಡ್ಡೀಸ್ ಪ್ರಯೋಗಾಲಯ, ಸಿಪ್ಲಾಹೊರತುಪಡಿಸಿ ಜೈಡೆಸ್ ಕ್ಯಾಡಿಲಾ ಮತ್ತು ಇನ್ನು ಕೆಲವರು ಈಗಾಗಲೇ ಭಾರತದಲ್ಲಿ ಜೆನಿರಿಕ್ ರೆಮಿಡಿಸೀವರ್ ರೋಗನಿರೋಧಕ ಔಷಧಿಯನ್ನು ತಯಾರಿಸುತ್ತಿವೆ.
ರೆಮಿಡಿಸೀವರ್ ಕೊರೊನಾ ಸೋಂಕಿಗೆ ಪರಿಣಾಮಕಾರಿ ಚಿಕಿತ್ಸೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಬಗ್ಗೆ ವಿಶ್ವದಾದ್ಯಂತ ಗಮನ ಸೆಳೆದಿತ್ತು, ಹೀಗಾಗಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಈ ಔಷಧವನ್ನು ಸೋಂಕಿತರಿಗೆ ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ ಕ್ಲಿನಿಕಲ್ ಚಿಕಿತ್ಸೆಯ ಪಾತ್ರದ ಬಗ್ಗೆ ಅನಿಶ್ಚಿತತೆ ತಲೆದೋರಿದೆ. ಹೀಗಾಗಿ ಡಬ್ಲ್ಯುಹೆಚ್‌ಓ ಔಷಧಿಗಳ ಪಟ್ಟಿಯಿಂದ ರದ್ದುಪಡಿಸಿದೆ.