
ಶಿವಮೊಗ್ಗ, ಮಾ. ೨೬- ಔಷಧ ಇಲ್ಲ ಎಂದು ಹೇಳಿದ್ದಕ್ಕೆ ಮೆಡಿಕಲ್ ಶಾಪ್ ಮಾಲೀಕನ ಮೇಲೆ ಯುವಕನೋರ್ವ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ನಲ್ಲಿ ನಡೆದಿದೆ.
ಲಕ್ಷ್ಮೀ ಮೆಡಿಕಲ್ ಶಾಪ್ ಮಾಲೀಕ ರಾಹುಲ್ ಹಲ್ಲೆಗೊಳದವರಾಗಿದ್ದು, ತೇಜಸ್ (೨೫) ಹಲ್ಲೆ ನಡೆಸಿದ ಆರೋಪಿ ಎಂದು ಗುರುತಿಸಲಾಗಿದೆ. ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಔಷಧಿ ಖರೀದಿಗೆ ಆರೋಪಿ ಮೆಡಿಕಲ್ ಶಾಪ್ಗೆ ಆಗಮಿಸಿದ್ದಾನೆ. ಆತ ಕೇಳಿದ ಔಷಧ ಇಲ್ಲವೆಂದು ರಾಹುಲ್ ತಿಳಿಸಿದ್ದಾರೆ. ಇದರಿಂದ ಕುಪಿತಗೊಂಡ ಆರೋಪಿಯು ಹಲ್ಲೆ ನಡೆಸಿದ್ದಾನೆ.
ಹಾಗೆಯೇ ಅಂಗಡಿಯಲ್ಲಿದ್ದ ಔಷಧಗಳನ್ನು ಚಲ್ಲಾಪಿಲ್ಲಿಗೊಳಿಸಿ, ಗಾಜು ಪುಡಿ ಗೈದಿದ್ದಾನೆ. ಸಾರ್ವಜನಿಕರು ಜಗಳ
ಬಿಡಿಸಿದ್ದಾರೆ. ಈ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.