ಔಷಧಿ ವ್ಯಾಪಾರಿಗಳ ಸಂಘದಿಂದ ಉಚಿತ ಆರೋಗ್ಯ ತಪಾಸಣೆ 

ಸಂಜೆವಾಣಿ ವಾರ್ತೆ

ಹರಿಹರ ಜು 20 ; ತಾಲೂಕು ಔಷಧಿ ವ್ಯಾಪಾರಿಗಳ ಸಂಘದಿಂದ  ಕೆ ಎಚ್ ಪಿ ಟಿ ಸಹಯೋಗ ದೊಂದಿಗೆ ಪ್ರಪ್ರಥಮವಾಗಿ ಬಾರಿಗೆ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ  52 ಜನರಿಗೆ ಶುಗರ್, ಬಿಪಿ ಹಾಗು ದೇಹದ ತೂಕವನ್ನು ಉಚಿತವಾಗಿ ತಪಾಸಣೆ ಮಾಡಲಾಯಿತು. ಸಂಘದ ಅದ್ಯಕ್ಷ ಎಂ ಪ್ರಕಾಶ್. ಅಧ್ಯಕ್ಷತೆಯಲ್ಲಿ ತಪಾಸಣೆ ನೆರವೇರಿತು  ಈ ಕಾರ್ಯಕ್ರಮದಲ್ಲಿ  ವಾಗೀಶ್ ,ಚನ್ನಬಸವನಗೌಡ, ಶಿವಕುಮಾರ್, ರಮೇಶ್ ಶೆಟ್ಟಿ,  ಮಂಜುನಾಥಯ್ಯ ಹಿರೇಮಠ್, ಮಧು,ವಿನಯ್,ನವೀನ್,ಪ್ರತೀಕ್, ಶಿವನಗೌಢ,ಬಸವರಾಜ್ ಕಲಾಲ್,ವನಿತಾ  ಮತ್ತಿತರರಿದ್ದರು.