ಹರಿಹರ.ಜೂ.18; ತಾಲೂಕಿನ ಔಷದ ವ್ಯಾಪಾರಿಗಳ ಸಂಘದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಪಿಬಿ ರಸ್ತೆಯ ವಿಭಜಕಗಳಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹರಿಹರದ ಶಾಸಕರಾದ ಬಿಪಿ ಹರೀಶ್ ಉದ್ಘಾಟಿಸಿದರು.ಈ ವೇಳೆ ದಾವಣಗೆರೆ ಜಿಲ್ಲಾ ಔಷಧ ನಿಯಂತ್ರಕರಾದ ಉಮಾ ಕಾಂತ್ ಪಾಟೀಲ್, ಉಪ ಔಷಧ ನಿಯಂತ್ರಕರಾದ ಗಿರೀಶ್, ಹರಿಹರ ತಾಲೂಕಿನ ಔಷದ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಎಂ ಪ್ರಕಾಶ್ ಹಾಗೂ ಪದಾಧಿಕಾರಿಗಳು, ಸಂಘದ ನಿರ್ದೇಶಕರು, ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು..