ಔಷಧಿ ಮುಚ್ಚಲು ಯತ್ನ ಪ್ರಕರಣವನ್ನು ತನಿಖೆ ನಡೆಸಿ ತಪಿಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ

ರಾಯಚೂರು.ಡಿ.೩-ಓಪೆಕ್ ಆಸ್ಪತ್ರೆಯಲ್ಲಿ ಇತ್ತೀಚಿಗೆ ನೆಡದ ಔಷಧಿ ಕಳ್ಳಾಟದಲ್ಲಿ ಭಾಗಿ ಅಗಿರುವವರನ್ನು ಅಮಾನತ್ತು ಮಾಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಹೋರಾಟ ವೇದಿಕೆ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಅವಧಿ ಮುಗಿದ ಔಷಧಗಳ ಜೊತೆ ಅವಧಿ ಮುಗಿಯದ ಔಷಧಿಗಳನ್ನು ಜೆ.ಸಿ.ಬಿ, ಯಂತ್ರದಿಂದ ಗುಂಡಿ ತೋಡಿ ಮುಚ್ಚಲು ಯತ್ನನಡೆಸಿದರು. ಓಪಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ. ಆಸ್ಪತ್ರೆಯ ಸಿಬ್ಬಂದಿಗಳು ಜೊತೆಗೂಡಿ ಸ್ಟ್ರಚರ್ ಮೇಲೆ ಸಾಗಿಸಿ ಅಕ್ರಮವಾಗಿ ಅವಧಿ ಮುಗಿದ ಔಷಧಿಗಳ ಜೊತೆ, ಅವಧಿ ಮುಗಿಯದ ಔಷಧಿಗಳನ್ನು ಗುಂಡಿಯಲ್ಲಿ ಮುಚ್ಚಲು ಪ್ರಯತ್ನಿಸುತ್ತಿದ್ದಾಗ ಇನ್ನೇನು ಮುಚ್ಚಲು ಗುಂಡಿ ಕೂಡ ತೋಡಲಾಗಿತ್ತು, ಅದೇ ಸಮಯದಲ್ಲಿ ಸ್ಥಳೀಯರು ಬಂದು ವಿಚಾರಿಸಿ ತಡೆದಾಗ ಅವರ ಕಳ್ಳಾಟ ಬಯಲಾಯಿತು. ಕಳ್ಳಟ ಬಯಲಾದ ತಕ್ಷಣ ಭಯದಿಂದ ಗುಂಡಿಯಲ್ಲಿ ಮುಚ್ಚಲು ತಂದ ಔಷಧಿ ವಾಪಸ್ ಆಸ್ಪತ್ರೆಗೆ ರವಾನಿಸಲಾಯಿತು, ಅವಧಿ ಮುಗಿದ ಔಷಧಿ ಮುಚ್ಚಲು ಬಂದಿದ್ದರೆ ಸರ್ಕಾರಕ್ಕೆ ತಿಳಿಸಿ ಅನುಮತಿ ಪಡೆದು ಅಧಿಕಾರಿಗಳ ಸಮಕ್ಷಮದಲ್ಲಿ ಗುಂಡಿಯಲ್ಲಿ ಮುಚ್ಚಬಹುದಿತ್ತು. ಆದರೆ ಸ್ಥಳೀಯರು ವೀಡಿಯೋ ಮಾಡುತ್ತಿದ್ದನ್ನು ನೋಡಿ ಶಿಕ್ಷಣ ಕಳ್ಳರು ಔಷಧಿಗಳನ್ನು ಆಸ್ಪತ್ರೆಗೆ ವಾಪಸ್ ಸಾಗಿಸಿದರು. ಲಕ್ಷಾನುಗಟ್ಟಲೆ ಬೆಲೆಬಾಳುವ ಅವಧಿ ಮುಗಿಯದ ಔಷಧಗಳನ್ನು, ಸ್ಟ್ರಚರ್ ಮೇಲೆ ಸಾಗಿಸಿಕೊಂಡು ಗುಂಡಿ ತೋಡಿ ಮುಚ್ಚಲು ಯತ್ನಿಸಿದ್ದನ್ನು ಸ್ಥಳೀಯರು ನೋಡಿ ವೀಡಿಯೋ ಮಾಡದ್ದಾರೆ ಹಾಗೂ ೨೦೨೩ ರವರೆಗೆ ಅವಧಿ ಇರುವ ಔಷಧಿಗಳ ಕಳ್ಳಾಟ ಬಯಲಾಯಿತು. ಅಂತ ತಿಳಿದ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿರುಪಾಕ್ಷ ಗೌಡ ತಮ್ಮ ಕಳ್ಳಾಟ ಮುಚ್ಚಿಹಾಕಲು ತಂದ ಔಷಧಿಗಳನ್ನು ಮರಳಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಅವರು ದೂರಿದರು.
ಲಕ್ಷಾಂತರ ಬೆಲೆ ಬಾಳುವ ಔಷಧಿಗಳನ್ನು ಬಡ ಹಾಗೂ ಕಡು ಬಡವರಿಗೆ ನೀಡದ್ದೇ ಗುಂಡಿಯಲ್ಲಿ ಮುಚ್ಚಿಹಾಕಲು ಯತ್ನಿಸಿದ್ದು ನೋಡಿದರೆ ಮೇಲ್ನೋಟಕ್ಕೆ ಕಳ್ಳಾಟ ಬಯಲಾಗಿದೆ. ಡಾ.ನಾಗರಾಜ ಗದ್ವಾಲ್ ಇವರ ಸೂಚನೆ ಮೇರೆಗೆ ಅವಧಿ ಮುಗಿಯದ ಔಷಧಿಗಳನ್ನು ಗುಂಡಿ ತೋಡಿ ಮುಚ್ಚಲು ಯತ್ನಿಸಿದ ಕಳ್ಳಾಟಕ್ಕೆ ಇವರೇ ನೇರ ಕಾರಣರಾಗಿರುತ್ತಾರೆ. ಡಾ.ನಾಗರಾಜ ಗದ್ವಾಲ್ ಹಾಗೂ ವಿರುಪಾಕ್ಷಿ ಗೌಡ ಇವರುಗಳು ಸೇರಿ ಅವಧಿ ಮುಗಿಯದ ಔಷಧಗಳನ್ನು ಗುಂಡಿಯಲ್ಲಿ ಮುಚ್ಚಿ ಮತ್ತೊಮ್ಮೆ ಸರಕಾರದಿಂದ ಔಷಧಿಗಳನ್ನು ಖರೀದಿ ಮಾಡಿ ಲಕ್ಷಾನುಗಟ್ಟಲೆ ಹಣವನ್ನು ಲೂಟಿ ಮಾಡಲು ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ಹಣವನ್ನು ಹಾನಿ ಮಾಡಲು ಪ್ರಯತ್ನಿಸಿದ್ದಾರೆ ಎನ್ನುವುದೇ ಈ ಕಳ್ಳಾಟವೇ ಸಾಕ್ಷಿ ಎಂದು ಅವರು ಆರೋಪಿಸಿದರು.
ಸೂಪರ್ ಸ್ಪೆಷಾಲಿಟಿ ಎನ್ನುವ ಹೆಸರಿಗೆ ಕಳಂಕ ತಂದ ಈ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಇವರನ್ನು ಕೂಡಲೇ ಅಮಾನತ್ತು ಮಾಡಿ ತನಿಖೆ ನಡೆಸಬೇಕು ಎಂದು ಅವರು ಮನವಿ ಮಾಡಿದರು.
ಈ ಪ್ರಕರಣವನ್ನು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಕೂಲಂಕುಷವಾಗಿ ಸಮಗ್ರ ತನಿಖೆ ನಡೆಸಿ ಈ ಕಳ್ಳಾಟದ ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸಿ ಹಾಗೂ ತನಿಖೆಯಲ್ಲಿ ಯಾವ ಕ್ರಮ ತೆಗೆದುಕೊಂಡಿದ್ದೀರಿ ಅನ್ನುವುದು ಸಾರ್ವಜನಿಕರಿಗೆ ಬಹಿರಂಗ ಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಪ್ರಕರಣವನ್ನು ಒತ್ತಡಕ್ಕೆ ಮಣಿದು ಮುಚ್ಚಿ ಹಾಕಲು ಪ್ರಯತ್ನಿಸಿದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಜೊತೆ ಹೋರಾಟ ಮಾಡಿ ಈ ಕಳ್ಳಾಟದ ಪ್ರಕರಣದ ವೀಡಿಯೋ ಹಾಗೂ ಭಾವಚಿತ್ರಗಳನ್ನು ತೆಗೆದುಕೊಂಡು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅಂಬಾಜಿ, ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ಹೇಮರಾಜ ಆಸ್ಕಿಹಾಳ ಹಾಗೂ ಪ್ರೇಮ್ ಪ್ರಿನ್ಸ್ ಇದ್ದರು.