ಔಷಧಿ, ಮಾಸ್ಕ್ ವಿತರಣೆ

ಬಾದಾಮಿ, ಮೇ 31: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎರಡನೆಯ ಬಾರಿಗೆ ಪ್ರಧಾನಿಗಳಾಗಿ ಅಧಿಕಾರ ಸ್ವೀಕಾರ ಮಾಡಿ ಎರಡು ವರ್ಷ ಪೂರ್ಣಗೊಂಡಿರುವುದಕ್ಕಾಗಿ ದೇಶದ ತುಂಬೆಲ್ಲಾ “ಸೇವಾಹೀ ಸಂಘಟನೆ” ಮೂಲಕ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ, ಜಿಲ್ಲಾ, ಮಂಡಲ ಹಾಗೂ ಭೂತ ಮಟ್ಟದಲ್ಲಿ ಬಿಜೆಪಿ ಮೋರ್ಚಾ ವತಿಯಿಂದ ಸೇವಾ ಕಾರ್ಯ ಮಾಡುತ್ತಿದ್ದು, ಅದರಂತೆ ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಎಸ್.ಎಸ್.ಮಿಟ್ಟಲಕೋಡ ಅವರ ನೇತೃತ್ವದಲ್ಲಿ ರವಿವಾರ ತಾಲೂಕಿನ ಅನಂತಗಿರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಸಿ ನೆಡಲಾಯಿತು.
ನಂತರ ಗ್ರಾಮದ ಮನೆ ಮನೆಗಳಿಗೆ ತೆರಳಿ ಕೊರೊನಾ ನಿರ್ಮೂಲನೆಗಾಗಿ ಸಿದ್ದಪಡಿಸಿರುವ ಕನ್ನೇರಿ ಮಠದ ಔಷಧವನ್ನು ಮತ್ತು ಗ್ರಾಮದ ಪ್ರತಿಯೊಬ್ಬರಿಗೂ ಮಾಸ್ಕ ವಿತರಣೆ ಮಾಡಲಾಯಿತು. ಕೊರೊನಾ ವಾರಿಯರ್ಸ್ ಅವರ ಸೇವೆಗೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಚಂದ್ರಶೇಖರ ಕಾಳನ್ನವರ, ಪುಲಿಕೇಶಿ ಸೂಳಿಕೇರಿ, ಶಿವು ಹಾದಿಮನಿ, ಮಂಜುನಾಥ ಪಾಟೀಲ, ನಿಂಗಬಸಯ್ಯ ಚರಂತಿಮಠ, ಮಹಾಂತೇಶ ಕರಿಗೌಡ್ರ, ಕಿರಣ ಕುಲಕರ್ಣಿ ಮುಂತಾದ ಕಾರ್ಯಕರ್ತರು ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.