ಔರಾದ ರೈತನಿಗೆ ಉಪೇಂದ್ರ ಫೌಂಡೇಷನ್ ನೆರವು

ಔರಾದ :ಮೇ.27: ಕರೋನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರುವ ಪರಿಣಾಮವಾಗಿ ರಾಜ್ಯ ಸರ್ಕಾರವು ಲಾಕ್ಡೌನ್ ಘೋಷಣೆ ಮಾಡಿದ್ದು ರೈತರು ಬೆಳೆದ ಬೆಳೆ ಮಾರಾಟವಾಗಿದೆ ಹಾನಿ ಉಂಟಾಗಿದೆ.

ತಾಲ್ಲೂಕಿನ ತೆಗಂಪೂರ ಗ್ರಾಮದ ಶಿವಕುಮಾರ ಮುಕ್ತೆದಾರ ಅವರು ಬೆಳೆದ ಕಲ್ಲಂಗಡಿ ಕಟಾವಿಗೆ ಬಂದು ಮಾರಾಟವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ಡೌನ್ ಪರಿಣಾಮವಾಗಿ ಮಾರುಕಟ್ಟೆ ಸಿಗದೆ ಬೆಳೆದ ಕಲ್ಲಂಗಡಿ ಹೊಲದಲ್ಲಿಯೆ ಹಾಳಾಗುತ್ತಿದೆ. ಇದನ್ನರಿತ ನಟ ಉಪೇಂದ್ರ ಅವರ ಆಪ್ತ ಸ್ನೇಹಿತ ರಾಜಾರಾಮ್ ಅವರು ರೈತ ಶಿವಕುಮಾರ ಮುಕ್ತೆದಾರ ಅವರಿಗೆ ಸಂಪರ್ಕಿಸಿ ನಾವು ನಿಮ್ಮೊಂದಿಗಿದ್ದೇವೆ ನಮ್ಮ ಉಪೇಂದ್ರ ಫೌಂಡೇಷನ್ ನಿಮ್ಮ ಜೊತೆಗಿರುವುದು ನೀವು ಬೆಳೆದ ನಮಗೆ ಕಳುಹಿಸಿ ಅದರ ಸಾಗಣೆ ವೆಚ್ಚ ಕೂಡ ನಾವೆ ಭರಿಸುತ್ತೇವೆ ಮತ್ತು ಅದನ್ನು ನಿರ್ಗತಿಕ ಬಡ ಜನರಿಗೆ ಉಚಿತವಾಗಿ ನೀಡುತ್ತೇವೆ ಎಂದು ಭರವಸೆ ನೀಡಿದರು.

ಉಪೇಂದ್ರ ಫೌಂಡೇಷನ್ ನಮ್ಮ ರೈತರ ನೆರವಿಗೆ ಬಂದಿದ್ದು ಸಂತಸ ತಂದಿದೆ, ಉಪೇಂದ್ರ ಅವರ ಆಪ್ತ ಸ್ನೇಹಿತ ರಾಜಾರಾಮ್ ಅವರು ಬೆಳೆದು ಹಾಳಾಗುತ್ತಿರುವ ಬೆಳೆಯ ಕುರಿತು ನಟ ಉಪೇಂದ್ರ ಅವರ ಗಮನಕ್ಕೆ ತಂದು ಆಗುತ್ತಿರುವ ಹಾನಿ ಭರಿಸುವುದಾಗಿ ನಟ ಉಪೇಂದ್ರ ಅವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ರೈತ ಶಿವಕುಮಾರ ಮುಕ್ತೆದಾರ ಅವರು ತಿಳಿಸುತ್ತಾರೆ.