ಔರಾದ : ಪ್ರವೀಣ ನೆಟ್ಟಾರಗೆ ಶೃದ್ದಾಂಜಲಿ

ಔರಾದ : ಜು.29:ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾದ ಔರಾದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ ನೆಟ್ಟಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಸ್ವ. ಪ್ರವೀಣ ನೇಟ್ಟಾರ ರವರನ್ನು ದುಷ್ಕರ್ಮಿಗಳು ಕೋಲೆಮಾಡಿರುವ ಘಟನೆ ದುರದೃಷ್ಟಕರ. ಹಾಗಾಗಿ ನಮ್ಮ ಘನ ಸರಕಾರಕ್ಕೆ ಒಂದು ಮನವಿ ಕೋಲೆ ಮಾಡಿದ ಹಂತಕರನ್ನ ಕೂಡಲೆ ಬಂಧಿಸಿ, ಅವರನ್ನ ನೇರವಾಗಿ ಗಲ್ಲು ಶಿಕ್ಷೆ ನೀಡಿಬೇಕು ಎಂದು ಔರಾದ ಮಂಡಲದ ಜಿಲ್ಲಾ ಯುವಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಬಸ್ವರಾಜ ಹಳ್ಳೆ, ಹಾಗೂ ಪ್ರಧಾನ ಕಾರ್ಯದರ್ಶಿ ಸಂದೀಪ ಪಾಟೀಲ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಹಣಮಂತ ಸೂರನಾರ, ಯಾದು ಮೇತ್ರೆ, ಶಿವಾಜಿ ಚವ್ಹಾಣ, ಶಿವಾಜಿ ಶೆಟೆಪ್ಪಾ, ಮಹೇಶ ಭಾಲ್ಕೆ, ರಮೇಶ ಗೌಡಾ, ಜಾನಕಿರಾಮ, ಮಧುಕರ ದುಧಮಾಂಡೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು