ಔರಾದ ಪಟ್ಟಣದಾದ್ಯಂತ ಸಂಭ್ರಮದ ರೇಣುಕಾಚಾರ್ಯ ಜಯಂತಿ

ಔರಾದ:ಮಾ.6:ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೆ ವಿಶ್ವಕ್ಕೆ ಶಾಂತಿ ಶಾಂತಿ ಎಂದು ಭೋದಿಸಿದ ಜಗದಾದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಜಯಂತಿಯ ಪ್ರಯುಕ್ತ ಇಂದು ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ರೇಣುಕಾಚಾರ್ಯ ಜಯಂತಿ ಪ್ರಯುಕ್ತ ಗ್ರೇಡ್ 2 ತಹಸೀಲ್ದಾರ ಮಲಶೆಟ್ಟಿ ಚಿದ್ರೆ ಅವರು ಪೂಜೆ ಸಲ್ಲಿಸಿದರು.

ಪಟ್ಟಣದ ಉದ್ಭವಲಿಂಗ ಶ್ರೀ ಅಮರೇಶ್ವರರ ಮಂದಿರದಲ್ಲಿ ವೀರಶೈವ ಹಾಗೂ ಜಂಗಮ ಸಮಾಜದ ವತಿಯಿಂದ ರೇಣುಕಾಚಾರ್ಯ ಜಯಂತಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ವೀರಶೈವ ಸಮಾಜದ ಹಿರಿಯ ಮುಖಂಡ ಬಸವರಾಜ ದೇಶಮುಖ, ಶರಣಪ್ಪ ಪಂಚಾಕ್ಷರಿ, ರಾಮಣ್ಣ ವಡಿಯಾರ, ಸೋಮನಾಥ ಸ್ವಾಮಿ, ಆನಂದ ದ್ಯಾಡೆ, ಸಚ್ಚಿದಾನಂದ ಸ್ವಾಮಿ, ಸೂರ್ಯಕಾಂತ ಸ್ವಾಮಿ, ಅಮರಸ್ವಾಮಿ ಸ್ಥಾವರಮಠ, ಅಮರಲಿಂಗ ಸ್ವಾಮಿ, ವೀರೆಶ ಸ್ವಾಮಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.